೨೦೨೩ ರಲ್ಲಿ ಅನೇಕ ದೇಶದಲ್ಲಿ ಆರ್ಥಿಕ ಕುಸಿತದ ಬಿಕ್ಕಟ್ಟು ಎದುರಾಗುವುದು ! – ಇಂಟರ್ನ್ಯಾಷನಲ್ ಮೋನಿಟರಿ ಫಂಡ್

ಇಂಟರ್ನ್ಯಾಷನಲ್ ಮೋನಿಟರಿ ಫಂಡ್‌ನ ಮುಖ್ಯಸ್ಥೆ ಕ್ರಿಸ್ಟಲಿನ ಜಾರ್ಜಿವಾ

ನವದೆಹಲಿ – ೨೦೨೩ ರಲ್ಲಿ ಜಗತ್ತಿನಾದ್ಯಂತ ಅನೇಕ ದೇಶಗಳು ಆರ್ಥಿಕ ಕುಸಿತವನ್ನು ಎದುರಿಸಬೇಕಾಗುವುದು, ಎಂದು ಇಂಟರ್ನ್ಯಾಷನಲ್ ಮೋನಿಟರಿ ಫಂಡ್ ಎಚ್ಚರಿಕೆ ನೀಡಿದೆ. ಫಂಡ್‌ನ ಮುಖ್ಯಸ್ಥೆ ಕ್ರಿಸ್ಟಲಿನ ಜಾರ್ಜಿವಾ ಇವರ ಪ್ರಕಾರ, ಜನರ ಆದಾಯದಲ್ಲಿ ಆಗುವ ಕೊರತೆ ಮತ್ತು ಹೆಚ್ಚುತ್ತಿರುವ ಬೆಲೆ ಏರಿಕೆ ಇದರ ಅರ್ಥ ಅನೇಕ ದೇಶಗಳು ಆರ್ಥಿಕ ಇಳಿಕೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ವರ್ಷ ಇದರ ಪ್ರಮಾಣ ಇನ್ನೂ ಹೆಚ್ಚಾಗಬಹುದೆಂದು ಹೇಳಿದರು.