ದುರ್ಗಾ ಪೂಜೆಯ ಸಮಯದಲ್ಲಿ ಧ್ವನಿವರ್ಧಕದಿಂದ ಭಕ್ತಿಗೀತೆ ಹಾಕಿದ್ದರಿಂದ ಮುಸಲ್ಮಾನರಿಂದ ಹಿಂದೂ ಮಹಿಳೆಯರಿಗೆ ಥಳಿತ

ಗೋಪಾಲಗಂಜ (ಬಿಹಾರ) – ಇಲ್ಲಿ ಹನುಮಾನ ದೇವಸ್ಥಾನದಲ್ಲಿ ಭಕ್ತಿಗೀತೆ ಹಾಕಿದ ಪ್ರಕರಣದಲ್ಲಿ ಮುಸಲ್ಮಾನರಿಂದ ಹಿಂದೂ ಮಹಿಳೆಯರಿಗೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಥಳಿತದಲ್ಲಿ ಗಾಯಗೊಂಡಿರುವ ೩ ಮಹಿಳೆಯರನ್ನು ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಗೋಲ್ಡನ್ ಅಹಮದ್, ಸೋಬರಾತಿ ಮತ್ತು ಸದೀದನ್ ಖಾತೂನ್ ಇವರ ಜೊತೆಗೆ ಇತರ ೨೦ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿ ಅವರ ಶೋಧ ನಡೆಸುತ್ತಿದ್ದಾರೆ.

ಇಲ್ಲಿ ಶ್ರೀ ದುರ್ಗಾ ಪೂಜೆಯ ಪ್ರಯುಕ್ತ ಬೆಳಗ್ಗೆ ಮತ್ತು ಸಂಜೆ ಧ್ವನಿವರ್ಧಕದ ಮೂಲಕ ಭಕ್ತಿಗೀತೆ ಹಾಕಲಾಗುತ್ತಿತ್ತು. ಇದನ್ನು ಇಲ್ಲಿಯ ಮುಸಲ್ಮಾನರು ವಿರೋಧಿಸಿದ್ದರು. ಹಿಂದೂಗಳು ಧ್ವನಿವರ್ಧಕ ನಿಲ್ಲಿಸದೆ ಇದ್ದರಿಂದ ಮುಸಲ್ಮಾನರು ಹಿಂದೂ ಮಹಿಳೆಯರನ್ನು ಥಳಿಸಿದರು. ಈ ಮೊದಲು ಯಾವಾಗ ಹಿಂದೂ ಯುವತಿ ಇಲ್ಲಿ ಪೂಜೆಗಾಗಿ ಬರುತ್ತಿದ್ದರು ಆಗ ಮುಸಲ್ಮಾನ ಯುವಕರು ಅವರನ್ನು ಚುಡಾಯಿಸುತ್ತಿದ್ದರು.

ಖರಾಗೊನ್ (ಮಧ್ಯಪ್ರದೇಶ) ಇಲ್ಲಿಯ ಹಿಂದೂ ಯುವತಿಗೆ ಮುಸಲ್ಮಾನ ಯುವಕನಿಂದ ಥಳಿತ

ಇಲ್ಲಿ ಓರ್ವ ೨೧ ವಯಸ್ಸಿನ ಹಿಂದೂ ಯುವತಿ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಭಾಗಿ ಆಗುವದಕ್ಕೆ ಹೋಗುತ್ತಿರುವಾಗ ಮೋಯಿನ್ ಖಾನ್ ಆಕೆಯನ್ನು ದಾರಿಯಲ್ಲಿ ತಡೆದನು. ಮತ್ತು ಕಾರ್ಯಕ್ರಮಕ್ಕೆ ಹೋಗದಂತೆ ಹೇಳಿದನು. ಯುವತಿ ಅದನ್ನು ವಿರೋಧಿಸಿದಾಗ ಮೋಯಿನ ಆಕೆಗೆ ಥಳಿಸಿದನು. ಆ ಸಮಯದಲ್ಲಿ ಸ್ಥಳೀಯ ನಾಗರೀಕರು ಮೋಯಿನನ್ನು ಹಿಡಿಯಲು ಪ್ರಯತ್ನ ಮಾಡಿದಾಗ ಆತನು ಓಡಿ ಹೋದನು. ನಂತರ ಪೊಲೀಸರು ಮೊಯಿನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಮಸೀದಿಯ ಧ್ವನಿವರ್ಧಕದಿಂದ ಕಳೆದ ಅನೇಕ ದಶಕಗಳಿಂದ ಹಿಂದೂಗಳಿಗೆ ದಿನದಲ್ಲಿ ೫ ಬಾರಿ ಅಜಾನ ಕೇಳಿಸಿಕೊಳ್ಳುವಾಗ ಹಿಂದೂಗಳು ಎಂದಾದರೂ ಈ ರೀತಿ ಮಾಡಿದ್ದಾರೆಯೇ ?