‘ಆದಿಪುರುಷ’ ಚಲನಚಿತ್ರ ಬಿಡುಗಡೆ ಮಾಡಲು ಬಿಡುವುದಿಲ್ಲ ! – ವಿಶ್ವ ಹಿಂದೂ ಪರಿಷತ್ತಿನ ಎಚ್ಚರಿಕೆ

ನವ ದೆಹಲಿ – ರಾಮಾಯಣದ ಆಧಾರದಲ್ಲಿ ‘ಆದಿಪುರುಷ’ ಈ ಚಲನಚಿತ್ರದಲ್ಲಿ ರಾವಣ, ಹನುಮಂತ ಮುಂತಾದ ಪಾತ್ರಗಳನ್ನು ತಪ್ಪಾಗಿ ತೋರಿಸಲಾಗಿದೆ, ಅದನ್ನು ಈಗ ಎಲ್ಲಾ ಸ್ತರದಲ್ಲಿ ವಿರೋಧಿಸಲಾಗುತ್ತಿದೆ. ಈಗ ಈ ಚಲನಚಿತ್ರ ವಿಶ್ವ ಹಿಂದೂ ಪರಿಷತ್ ಕೂಡ ವಿರೋಧಿಸಿದೆ. ‘ಈ ಚಲನಚಿತ್ರ ಥಿಯೇಟರ್‌ನಲ್ಲಿ ನಡೆಯಲು ಬಿಡುವುದಿಲ್ಲ’, ಎಂದು ಎಚ್ಚರಿಕೆ ನೀಡಲಾಗಿದೆ. ಜನವರಿ ೨೦೨೩ ರಲ್ಲಿ ಈ ಚಲನಚಿತ್ರ ಪ್ರಸಾರವಾಗಲಿದೆ.

ಸಂಬಲ್ (ಉತ್ತರಪ್ರದೇಶ)ನ ವಿಶ್ವಹಿಂದೂ ಪರಿಷತ್ತಿನ ಮುಖಂಡ ಅಜಯ ಶರ್ಮಾ ಇವರು, ಚಲನಚಿತ್ರದಲ್ಲಿ ಹಿಂದೂಗಳ ಆದರ್ಶವನ್ನು ತಪ್ಪಾದ ರೀತಿಯಲ್ಲಿ ತೋರಿಸಿರುವುದು ಇದು ಧರ್ಮ ತಮಾಷೆಯಾಗಿದೆ. ಸೆನ್ಸಾರ್ ಬೋರ್ಡ್ ಬೇಜವಾಬ್ದಾರಿತನದಿಂದ ಕೆಲಸ ಮಾಡುತ್ತದೆ. ಅದು ಅದರ ಕರ್ತವ್ಯದ ಪಾಲನೆ ಮಾಡುತ್ತಿಲ್ಲ. ಆದ್ದರಿಂದ ಸರಕಾರ ಅದನ್ನು ವಿಸರ್ಜಿತಗೊಳಿಸಬೇಕು ಎಂದು ಹೇಳಿದರು.