ದ್ವಾರಕಾದಲ್ಲಿ ೪ ದಿನದಲ್ಲಿ ೫೦ ಅಕ್ರಮ ಗೋರಿ ಮತ್ತು ದರ್ಗಾಗಳ ಮೇಲೆ ಗುಜರಾತ ಸರಕಾರ ಬುಲ್ಡೋಜರ್ !

ದ್ವಾರಕಾ – ಗುಜರಾತನ ದ್ವಾರಕ ಇದು ಭಗವಾನ್ ಶ್ರೀ ಕೃಷ್ಣನ ನಗರವೆಂದೇ ಜಗತ್ತಿನಾದ್ಯಂತ ಗುರುತಿಸಲಾಗುತ್ತದೆ; ಆದರೆ ಅದೇ ದ್ವಾರಕ ನಗರದಲ್ಲಿ ಅಕ್ರಮ ಗೋರಿ ಮತ್ತು ದರ್ಗಾ ಇದು ಸುತ್ತಿಕೊಂಡಿದೆ. (ಇಷ್ಟೊಂದು ಅಕ್ರಮ ಕಟ್ಟಗಳು ಆಗುವವರೆಗೆ ಸರಕಾರ ಏನು ಮಾಡುತ್ತಿತ್ತು ? ಇಂತಹ ಅಕ್ರಮ ಕಟ್ಟಡದ ಕಡೆಗೆ ದುರ್ಲಕ್ಷಿಸುವ ಅಧಿಕಾರಿಗಳ ಮೇಲೆ ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು) ಈ ಅಕ್ರಮ ಕಟ್ಟಡಗಳು ತೆರೆವುಗೊಳಿಸುವುದಕ್ಕೆ ಗುಜರಾತ ಸರಕಾರದಿಂದ ‘ಆಪರೇಷನ್ ಕ್ಲೀನಪ್’ನ ಮೂಲಕ ೪ ದಿನಗಳಲ್ಲಿ ೫೦ ಕ್ಕೂ ಹೆಚ್ಚಿನ ಅಕ್ರಮ ಗೋರಿ ಮತ್ತು ದರ್ಗಾಗಳ ಮೇಲೆ ಬುಲ್ಡೋಜರ್ ನಡೆಸಲಾಗಿದೆ. ಈ ಅಕ್ರಮ ಕಟ್ಟಡಗಳು ನೆಲೆಸಮ ಮಾಡಿರುವುದರಿಂದ ೧ ಲಕ್ಷ ಚದರಡಿ ಸರಕಾರಿ ಭೂಮಿ ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ. ಈ ಪರಿಸರದಲ್ಲಿ ಸ್ಥಳೀಯ ಹಿಂದೂ ಜನರು ಅಕ್ರಮ ಕಟ್ಟಡದ ವಿರುದ್ಧ ಧ್ವನಿಎತ್ತಿದನಂತರ ಸರಕಾರ ಕ್ರಮ ಕೈಗೊಂಡಿದೆ. ಈ ಸಮಯದಲ್ಲಿ ಯಾವುದೇ ಅನುಚಿತ ಘಟನೆ ನಡೆಯಬಾರದೆಂದು, ಬೇಟ ದ್ವಾರಕಾದಲ್ಲಿ ೧ ಸಾವಿರಗಿಂತಲೂ ಹೆಚ್ಚಿನ ಭದ್ರತಾಪಡೆಯನ್ನು ನೇಮಿಸಲಾಗಿತ್ತು.

ಬೇಟ ದ್ವಾರಕ ಪರಿಸರದ ಹಿಂದೂಗಳಲ್ಲಿ ಭಯದ ವಾತಾವರಣ !

ಈ ಪ್ರದೇಶದಲ್ಲಿನ ಸುಮಾರು ೧೦ ಸಾವಿರ ಜನಸಂಖ್ಯೆ ಇದೆ. ಇಲ್ಲಿ ಮುಸಲ್ಮಾನರು ಬಹುಸಂಖ್ಯಾತರಿದ್ದಾರೆ. ಹಿಂದೂಗಳ ಜನಸಂಖ್ಯೆ ಕೇವಲ ೧ ಸಾವಿರ ೫೦೦ ರಷ್ಟು ಇದೆ. ಆದ್ದರಿಂದ ಈ ಅಕ್ರಮ ಕಟ್ಟಡದ ವಿಷಯವಾಗಿ ಸುಮಾರು ಸಮಯದಿಂದ ಈ ಜನರು ಮೌನವಾಗಿ ಇದ್ದರು; ಆದರೆ ಈಗ ಸರಕಾರದಿಂದ ಕ್ರಮ ಕೈಗೊಂಡ ನಂತರ ಅಯೋಗ್ಯ ಘಟನೆ ಘಟಿಸುವ ಭಯ ಇರುವುದರಿಂದ ಪರಿಸರದಲ್ಲಿನ ಹಿಂದೂ ಕುಟುಂಬಗಳು ಭಯ ಪಡುತ್ತಿದ್ದಾರೆ. (ಅಕ್ರಮ ಕಟ್ಟಡ ಕೆಡುವಿದ ನಂತರ ನಿಜವೆಂದರೆ ಮುಸಲ್ಮಾನರು ಸರಕಾರದ ಕಾರ್ಯಾಚರಣೆಯಿಂದ ಭಯಪಡಬೇಕಾಗಿತ್ತು; ಆದರೆ ಇಲ್ಲಿ ಅವರ ಹಿಂಸಾತ್ಮಕ ವೃತ್ತಿಯಿಂದ ಅಮಾಯಕ ಹಿಂದೂಗಳು ಭಯಪಡಬೇಕಾಗಿದೆ ! ದ್ವಾರಕಾ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿ ! -ಸಂಪಾದಕರು)

ಸಂಪಾದಕೀಯ ನಿಲುವು

ಕೇವಲ ಕಟ್ಟಡ ಕೆಡವದೆ ಇಷ್ಟು ವರ್ಷಗಳ ಕಾಲ ಸರಕಾರಿ ಜಾಗದಲ್ಲಿ ಅತಿಕ್ರಮಣ ನಡೆಸಿದ್ದಕ್ಕಾಗಿ ದಂಡ ಕೂಡ ವಿಧಿಸಬೇಕು !