ಮೊರಬಿ (ಗುಜರಾತ) – ಇಲ್ಲಿಯ ಒಂದು ಗರಬಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತಕಾರ ಮತ್ತು ಗಾಯಕ ಹಿಮೇಶ ರೇಶಮಿಯ ಇವರು ಭಾಗವಹಿಸಿದ್ದರು. ಅವರು ಅಲ್ಲಿ ‘ಅಲಿ ಮೌಲಾ’ ಎಂಬ ಗೀತೆ ಹಾಡುವ ಪ್ರಯತ್ನ ಮಾಡಿದ ನಂತರ ಅದಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತಪಡಿಸಲಾಯಿತು ಮತ್ತು ಅದನ್ನು ನಿಲ್ಲಿಸಲು ಅನಿವಾರ್ಯ ಪಡಿಸಿದರು. ಅದರ ನಂತರ ರೇಶಮಿಯ ಅಲ್ಲಿಂದ ಹೊರಟು ಹೋದರು. ಈ ಸಂಘಟನೆಗಳಿಂದ ಗರಬಾ ಆಯೋಜಕರಿಗೆ ‘ಇನ್ನೂ ಮುಂದೆ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಗೀತೆಗಳು ಹಾಡುವುದು ಅಥವಾ ನುಡಿಸಿದರೆ ಅದರ ಗಂಭೀರ ಪರಿಣಾಮ ಅನುಭವಿಸಲು ಸಿದ್ಧರಿರಬೇಕು’, ಎಂದು ಎಚ್ಚರಿಕೆ ನೀಡಿದ್ದಾರೆ. (‘ಹಿಂದೂಗಳ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಯಾವ ಹಾಡು ಹಾಡಬೇಕು ?’, ಇದು ತಿಳಿಯದಿರುವ ಹಿಂದೂ ಗಾಯಕರು ! ರೇಶಮಿಯ ಇವರ ಈ ಕೃತಿ ಎಂದರೆ ಧರ್ಮ ಶಿಕ್ಷಣದ ಅಭಾವ ಮತ್ತು ಆತ್ಮಘಾತಕ ಜಾತ್ಯತೀತತೆಯ ನಿದರ್ಶನವಾಗಿದೆ ! – ಸಂಪಾದಕರು)