ಪಾಕಿಸ್ತಾನದಲ್ಲಿರುವ ಪ್ರಸಿದ್ಧ ಪಂಜಾ ಸಾಹಿಬ ಗುರುದ್ವಾರದಲ್ಲಿ ಮುಸಲ್ಮಾನ ಕಲಾವಿಧರು ಚಪ್ಪಲಿಯನ್ನು ಹಾಕಿಕೊಂಡು ಪ್ರವೇಶಿಸಿದ !

ಸಿಖ್ಖರಿಂದ ವಿರೋಧ

ನವದೆಹಲಿ – ಪಾಕಿಸ್ತಾನದ ಹಸನ ಅಬ್ದಾಲ ಪ್ರದೇಶದ ಪಂಜಾ ಸಾಹಿಬ ಗುರುದ್ವಾರದಲ್ಲಿ ಚಲನಚಿತ್ರ ಚಿತ್ರೀಕರಣದ ಸಮಯದಲ್ಲಿ ಕೆಲವು ಮುಸಲ್ಮಾನ ಕಲಾವಿದರು ಚಪ್ಪಲಿಯನ್ನು ಹಾಕಿಕೊಂಡು ಮತ್ತು ತಲೆಯನ್ನು ಬಟ್ಟೆಯಿಂದ ಮುಚ್ಚದೇ ಒಳಗೆ ಹೋಗಿದ್ದರಿಂದ ಗುರುದ್ವಾರದ ಅಪಮಾನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಗುರುದ್ವಾರದಲ್ಲಿ ಹೋಗುವಾಗ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವ ಪರಂಪರೆಯಿದೆ. ಭಾಜಪ ನಾಯಕ ಮನಜಿಂದರಸಿಂಹ ಸಿರಸಾ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡಿದ್ದಾರೆ. ಸಿರಸಾ ಇವರು ಮಾತನಾಡುತ್ತಾ, ‘ಇಂತಹ ಘಟನೆಯಿಂದ ಭಾರತದಲ್ಲಿರುವ ಸಿಖ್ಖರ ಭಾವನೆಯನ್ನು ನೋಯಿಸಿದ್ದಾರೆ. ಈ ಪ್ರಕರಣದ ಮೇಲೆ ಕ್ರಮ ಕೈಕೊಳ್ಳಬೇಕು’, ಎಂದು ಕೋರಿದ್ದಾರೆ.

ಸಿಖ್ಖರ ವಿರೋಧದ ಬಳಿಕ ಮುಸಲ್ಮಾನ ಕಲಾವಿದರು ಸ್ಪಷ್ಟೀಕರಣ ನೀಡುತ್ತಾ ‘ನಾವು ನಿಮ್ಮ ಅತಿಥಿಗಳಾಗಿದ್ದೇವೆ’, ಎಂದು ಹೇಳಿದರು. ಈ ಘಟನೆಯ ಚಿತ್ರೀಕರಣ ಮಾಡಿದ ಸಿಖ್ ವ್ಯಕ್ತಿಯು, ಅತಿಥಿಗಳು ಕೂಡ ಗುರುದ್ವಾರದಲ್ಲಿ ಬರುವಾಗ ಮರ್ಯಾದೆಯಿಂದ ಬರಬೇಕು, ಅವರಿಗೆ ಸ್ವಾಗತವಿದೆ’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ವಿಷಯದಲ್ಲಿ ‘ಸಿಖ್-ಮುಸ್ಲಿಂ ಭಾಯಿ ಭಾಯಿ’ ಎಂದು ಹೇಳುವ ಖಲಿಸ್ತಾನವಾದಿಗಳು ಏಕೆ ಸುಮ್ಮನಿದ್ದಾರೆ ?