ಮುಂಬಯಿ – ಮೋಹನದಾಸ ಕರಮಚಂದ ಗಾಂಧಿ ಇವರ ಹತ್ಯೆಯ ಕುರಿತು ‘ಬುಲೆಟ್’ ಎಂಬ ಚಲನಚಿತ್ರ ಬೇಗನೆ ಬರುವುದು. ಮ. ಗಾಂಧಿ ಇವರ ಮೇಲೆ ೩ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರತ್ಯಕ್ಷದಲ್ಲಿ ಅವರ ಮೇಲೆ ನಾಲ್ಕು ಗುಂಡು ಹೊಡೆಯಲಾಗಿತ್ತು. ಈ ನಾಲ್ಕನೆಯ ಗುಂಡು ಪಂಡಿತ್ ನತುರಾಂ ಗೋಡ್ಸೆ ಇವರ ಪಿಸ್ತೂಲಿನಿಂದ ಹೊಡೆಯಲಾಗಿರಲಿಲ್ಲ, ಇದನ್ನು ಈ ಚಲನಚಿತ್ರದಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಲಾಗುತ್ತಿದೆ. ಸಚಿನ ಮೋಹಿತೆ ಇವರು ಈ ಚಲನಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದಾರೆ.
‘ಬುಲೆಟ್’ ಚಲನಚಿತ್ರದ ಟ್ರೈಲರ್ (ಚಲನಚಿತ್ರದ ಸಂಕ್ಷಿಪ್ತ ಭಾಗ) ಪ್ರಸಾರಗೊಳಿಸಲಾಗಿದೆ. ಇದರ ಬಗ್ಗೆ ಅನೇಕರಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಲಾಗಿದೆ. ಇದರಲ್ಲಿ ಅನಿಕೇತ ಅಹುಜಾ ಇವರು, ‘ಪ್ರತಿಯೊಬ್ಬರಗೆ ಸತ್ಯ ತಿಳಿಯುವುದು, ಏಕೆಂದರೆ ಸತ್ಯ ಎಂದು ಮುಚ್ಚಿಡಲಾಗುವುದಿಲ್ಲ, ಎಂದು ಹೇಳಿದರು. ‘ಅರ್ಜುನ ಸಿಂಗ ಇವರು, ಈ ವಿಷಯ ‘ಕಾಶ್ಮೀರ್ ಫೈಲ್ಸ್’ ಗಿಂತಲೂ ಹೆಚ್ಚು ಆಘಾತಕಾರಿಯಾಗಲಿದೆ. ಈ ಚಲನಚಿತ್ರದಿಂದ ಹೊರ ಬಂದ ನಂತರ ಗೋಡ್ಸೆ ಅವರಿಗೆ ಅಂತಿಮವಾಗಿ ನ್ಯಾಯ ಸಿಗುವುದು ಎಂದು ಹೇಳಿದರು.