ಹೊಸ ಶೈಕ್ಷಣಿಕ ನೀತಿಯಲ್ಲಿ ಮದರಸಾಗಳಲ್ಲಿನೀಡಲಾಗುವ ಧಾರ್ಮಿಕ ಶಿಕ್ಷಣವನ್ನು ನಿಲ್ಲಿಸುವುದು ಆವಶ್ಯಕ !

ಇತ್ತೀಚೆಗೆ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಅನಧಿಕೃತ ಮದರಸಾಗಳ ವಿರುದ್ಧ ಆಂದೋಲನವನ್ನು ಕೈಗೆತ್ತಿಕೊಂಡು ೭೦೦ ಮದರಸಾಗಳನ್ನು ಮುಚ್ಚಿದರು. ಹೆಚ್ಚಿನ ಮದರಸಾಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆಯಾಗುವುದು, ಮಕ್ಕಳಿಗೆ ಮೂಲಭೂತವಾದದ ಶಿಕ್ಷಣವನ್ನು ನೀಡುವುದು ಇತ್ಯಾದಿ ಚಟುವಟಿಕೆಗಳು ನಡೆಯುತ್ತಿರುವುದರ ವಾರ್ತೆ ಬರುತ್ತಿದೆ. ಇದಕ್ಕೆ ಸಂಬಂಧಿಸಿ ಮದರಸಾಗಳಲ್ಲಿ ನೀಡುವ ಶಿಕ್ಷಣ ವಿಷಯದ ನೀತಿಯ ಊಹಾಪೋಹವನ್ನು ಈ ಲೇಖನದಲ್ಲಿ ಮಾಡುತ್ತಿದ್ದೇವೆ.

ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು (ಸಾಂದರ್ಭಿಕ ಚಿತ್ರ)

೧. ಹೊಸ ಶೈಕ್ಷಣಿಕ ನೀತಿಯಿಂದ ಪೂರ್ಣ ಭಾರತೀಯ ಶಿಕ್ಷಣಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿವರ್ತನೆ ಸಾಧ್ಯ !

ಸದ್ಯ ಪೂರ್ಣ ಭಾರತದಲ್ಲಿ ಹೊಸ ಶೈಕ್ಷಣಿಕ ನೀತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಅನೇಕ ಶಿಕ್ಷಕರು ಹಾಗೂ ವಿಚಾರವಂತರು ಈ ವಿಷಯದಲ್ಲಿ ಮಂಥನ ಹಾಗೂ ಯೋಗ್ಯ-ಅಯೋಗ್ಯ ಪರಿಣಾಮಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ನೀತಿಯು ದೇಶದ ಸಂಪೂರ್ಣ ಶಿಕ್ಷಣಕ್ಷೇತ್ರಕ್ಕಾಗಿ ಇದೆ. ದೇಶದಲ್ಲಿ ಈ ನೀತಿಯನ್ನು ಜಾರಿಗೊಳಿಸುವುದು ಆರಂಭವಾಗಿದೆ. `ಈ ಹೊಸ ನೀತಿಯಿಂದ ಸಂಪೂರ್ಣ ಭಾರತೀಯ ಶಿಕ್ಷಣಕ್ಷೇತ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಪರಿವರ್ತನೆಯಾಗಲಿಕ್ಕಿದೆ’, ಮತ್ತು `ಈಗ ಶಿಕ್ಷಣವು ಹೆಚ್ಚು ಕೌಶಲ್ಯಕೇಂದ್ರಿತವಾಗಲಿಕ್ಕಿದೆ’, ಎಂದು ಕೂಡ ಹೇಳಲಾಗುತ್ತಿದೆ. ಈ ನೀತಿಯು ದೇಶಾದ್ಯಂತ ನಮಗೆ ಆವಶ್ಯಕವಿರುವ ಬದಲಾವಣೆಯನ್ನು ತರುವುದು.

೨. ಮದರಸಾ ಶಿಕ್ಷಣದಲ್ಲಿ ಪರಿವರ್ತನೆಯ ಅವಶ್ಯಕತೆ ಇರುವಾಗ ಸರಕಾರದಿಂದ ತೊಗಲು ರಕ್ಷಣೆಯ ನೀತಿ

ಈಗ ಕೌಶಲ್ಯಾಧಾರಿತ ಪಠ್ಯಕ್ರಮ ಬರಲಿಕ್ಕಿರುವುದರಿಂದ ಬಹುಶಃ ದೇಶದ ನಿರುದ್ಯೋಗ ಕಡಿಮೆಯಾಗಬಹುದು. ಭಾರತೀಯಯುವಕರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುವುದು. ಯುವಕರಲ್ಲಿರುವ ನಿರಾಶೆಯೂ ಕಡಿಮೆಯಾಗುವುದು. ಹೀಗಿರುವಾಗ ಈ ಒಂದು ಮಹತ್ವಪೂರ್ಣ ವಿಷಯಕ್ಕೆ ಕೈ ಹಾಕುವಾಗ ಈ ಹೊಸ ನೀತಿಯು ತೊಗಲು ರಕ್ಷಣೆಯ ನೀತಿಯನ್ನು ಅವಲಂಬನೆಯೆನಿಸುತ್ತದೆ. ಮದರಸಾ ಶಿಕ್ಷಣಕ್ಕೆ ನೇರವಾಗಿ ಕೈ ಹಾಕಿ ಅದರಲ್ಲಿ ಸಂಪೂರ್ಣ ಪರಿವರ್ತನೆ  ಅವಶ್ಯಕತೆ ಯಿರುವಾಗ ಬಾಲಿಶ ಪಾತ್ರವನ್ನು ಅವಲಂಬಿಸಿ ಹಳೆಯ ಯೋಜನೆಯನ್ನು ಪುನಃ ಹೊಸತಾಗಿ ಸೇರಿಸಿಕೊಳ್ಳುವ ಹಾಗೆ ಮಾಡಲಾಗುತ್ತಿದೆ.

೩. ಮದರಸಾದಲ್ಲಿನ ಶಿಕ್ಷಣಕ್ಕೆ ಒತ್ತುಕೊಟ್ಟಿರುವುದರಿಂದ ಮುಸಲ್ಮಾನರ ಪ್ರಗತಿ ಕುಂಠಿತವಾಗಿದೆ

ಭಾರತದಲ್ಲಿ ಒಟ್ಟು ಜನಸಂಖ್ಯೆಯ ವಿಚಾರ ಮಾಡಿದಾಗ ಅರಿವಾಗುವುದೇನೆಂದರೆ, ಸುಮಾರು ಶೇ. ೭೫ ರಷ್ಟು ಜನರು ಹಿಂದೂಗಳು, ಸುಮಾರು ಶೇ. ೨೦ ರಷ್ಟು ಮುಸಲ್ಮಾನ ಧರ್ಮ ದವರು ಹಾಗೂ ಕ್ರೈಸ್ತರ ಸಂಖ್ಯೆ ಶೇ. ೨ ರಷ್ಟಿದೆ. ಇದರ ಅರ್ಥ, ಸುಮಾರು ೩೦ ಕೋಟಿಯಷ್ಟು ಜನಸಂಖ್ಯೆ ಮುಸಲ್ಮಾನರದ್ದಿದೆ. ಈ ಮುಸಲ್ಮಾನರ ಜನಸಂಖ್ಯೆಯ ಪೈಕಿ ಹೆಚ್ಚೆಂದರೆ ಶೇ. ೫ ರಷ್ಟು ಜನರು ಉಚ್ಚ ಹಾಗೂ ಉಚ್ಚ ಮಧ್ಯಮವರ್ಗದವರಿದ್ದಾರೆ. `ಆಧುನಿಕ ಶಿಕ್ಷಣದ ಅಭಾವ’, ಇದು ಈ ವರ್ಗದವರ ಮಹತ್ವದ ವೈಶಿಷ್ಟ÷್ಯವಾಗಿದೆ. ಗುಜರಿ ವ್ಯಾಪಾರ, ಪಂಕ್ಚರ್ ತೆಗೆಯುವುದು, ಇಲೆಕ್ಟಿçಶಿಯನ್, ಡೆಲಿವರಿ ಬಾಯ್, ಚಾಲಕ, ಕಟ್ಟಡಕಾಮಗಾರಿ, ಇತ್ಯಾದಿ ಅನೇಕ ರೀತಿಯ ವ್ಯವಸಾಯ ಮಾಡಿ ಈ ವರ್ಗದವರು ಜೀವನ ನಡೆಸುತ್ತಾರೆ. ಆದ್ದರಿಂದ ಇವರಲ್ಲಿನ ಒಂದು ದೊಡ್ಡ ವರ್ಗ ಶಿಕ್ಷಣಕ್ಕಾಗಿ ಮದರಸಾಗಳ ಆಶ್ರಯ ಪಡೆಯುತ್ತದೆ. ಮದರಸಾ ವೆಂದರೆ ಒಂದು ಶಾಲೆಯೇ ಆಗಿರುತ್ತದೆ; ಆದರೆ ಈ ಶಾಲೆಗಳು ಈ ಸಮಾಜಕ್ಕೆ ಕೇವಲ ಧಾರ್ಮಿಕ ಶಿಕ್ಷಣವನ್ನಷ್ಟೇ ನೀಡುತ್ತವೆ ಹಾಗೂ ಈ ಧಾರ್ಮಿಕ ಶಿಕ್ಷಣವನ್ನು ಕೇವಲ ಊರ್ದು ಮತ್ತು ಅರಬೀ ಭಾಷೆಗಳಲ್ಲಿಯೇ ನೀಡಲಾಗುತ್ತದೆ.

೪. ಮುಸಲ್ಮಾನ ಸಮಾಜದಲ್ಲಿರುವ ಜಾತಿಗಳಆಧಾರದಲ್ಲಿ ಮದರಸಾಗಳ ಸ್ಥಾಪನೆ ಮಾಡಲಾಗುವುದು

ಇದರಲ್ಲಿಯೂ ಮುಸಲ್ಮಾನ ಸಮಾಜದ ಜಾತಿಗನುಸಾರ ಮದರಸಾಗಳನ್ನು ಸ್ಥಾಪಿಸಲಾಗುತ್ತದೆ. ಉದಾಹರಣೆಗೆ ಸುನ್ನೀ, ಶಿಯಾ, ವಹಾಬಿ, ಬರೇಲ್ವಿ, ಹನ್ಫೀ, ದೇವಬಂದಿ ಇತ್ಯಾದಿ. ಇಸ್ಲಾಮ್ ಮತ್ತು ಕ್ರೆಸ್ತ ಈ ಧರ್ಮದಲ್ಲಿಯೂ ವಿವಿಧ ಜಾತಿಗಳಿವೆ. ಅದಕ್ಕನುಸಾರವೇ ಈ ವಿವಿಧ ಮದರಸಾಗಳಿರುತ್ತವೆ. ಇದರಲ್ಲಿ ಕೆಲವರಿಗೆ ರಾಜ್ಯ ಸರಕಾರದಿಂದ ಅನುದಾನ ಸಿಗುತ್ತದೆ ಹಾಗೂ ಕೆಲವನ್ನು `ವಕ್ಫ್’ (ಟ್ರಸ್ಟ್) ಮಂಡಳಿಯ ವತಿಯಿಂದ ನಡೆಸಲಾಗುತ್ತದೆ. ಇದರಲ್ಲಿನ ಅನೇಕ ಮದರಸಾಗಳು ಸರಕಾರಿ ಅನುದಾನ ತೆಗೆದುಕೊಳ್ಳುವುದಿಲ್ಲ ಹಾಗೂ ಅನೇಕ ಮದರಸಾಗಳಿಂದ ಆಧುನಿಕ ಶಿಕ್ಷಣವನ್ನು ನೀಡಲು ಕೂಡ ಪ್ರಯತ್ನಿಸಲಾಗುತ್ತಿದೆ. ಆದರೆ ಈ ಪ್ರಮಾಣವು ಅತ್ಯಲ್ಪವಾಗಿದೆ. ಆಧುನಿಕ ಶಿಕ್ಷಣಕ್ಕೆ ಪ್ರಾಶಸ್ತö್ಯ ಕೊಡುವ ಮದರಸಾಗಳಿಗೆ ಭಾರತೀಯ ಮುಸಲ್ಮಾನ ಸಮಾಜದಿಂದ ಸಾಕಷ್ಟು ಬೆಂಬಲ ಸಿಗುವುದಿಲ್ಲ, ಎಂಬುದೂ ವಾಸ್ತವಿಕತೆಯಾಗಿದೆ. ಇಸ್ಲಾಮಿಕ್ ರೂಢಿ-ಪರಂಪರೆ, ಕುರಾನ ಅಥವಾ ನಮಾಜು ಪಠಣದಂತಹ ವಿಷಯಗಳಿಗಾಗಿ ಮುಸಲ್ಮಾನ ಸಮಾಜದ ಪ್ರತಿ ಯೊಬ್ಬ ವ್ಯಕ್ತಿ ಜೀವನದಲ್ಲಿ ಒಂದಲ್ಲೊಂದು ದಿನ ಮದರಸಾಗೆ ಹೋಗಿ ಶಿಕ್ಷಣವನ್ನು ಪಡೆಯುತ್ತಾನೆ.

೫. ಮದರಸಾಗಳಿಂದ ಕಟ್ಟರ್ ಮತಾಂಧರು ತಯಾರು ಆಗುತ್ತಿದ್ದರೂ ಕಾಂಗ್ರೆಸ್‌ನಿಂದ ಅವರಿಗೆ ಅನುದಾನ

ಮದರಸಾಗಳಲ್ಲಿ ಕಲಿಸುವ ವಿಷಯ ಮತ್ತು ಕಲಿಸುವ ಶಿಕ್ಷಕರು, ಅಂದರೆ ಮೌಲ್ವಿ (ಇಸ್ಲಾಮಿನ ಧಾರ್ಮಿಕ ಮುಖಂಡ) ಸತತವಾಗಿ ಮಾತಾಂಧತೆಯ ಬಗ್ಗೆಯೇ ಶಿಕ್ಷಣವನ್ನು ನೀಡುತ್ತಾರೆ. ಏಕೆಂದರೆ, ಈ ಕಟ್ಟರ್ ಮತಾಂಧತೆಯ ಮೇಲೆಯೇ ಅವರ ಯೋಗಕ್ಷೇಮ ಅವಲಂಬಿಸಿರುತ್ತದೆ. ಸ್ವಾತಂತ್ರ್ಯದ ನಂತರದ ಕಾಂಗ್ರೆಸ್ ಸರಕಾರವು ಸಂವಿಧಾನದ ಕೆಲವು ಕಲಮ್‌ಗಳ ಆಧಾರ ಪಡೆದು ಮುಸಲ್ಮಾನರನ್ನು ಓಲೈಸುವಾಗ ಮದರಸಾಗಳನ್ನು ಕಾಲಕ್ಕನುಸಾರ ಬದಲಾಯಿಸಲು ಪ್ರಯತ್ನಿಸಲಿಲ್ಲ. ಅದರಲ್ಲಿ ಪಕ್ಷದ ಸ್ವಾರ್ಥ ಇದ್ದ ಕಾರಣ ಒಂದು ಮುಷ್ಟಿ ಮತಕ್ಕಾಗಿ ಅವರಿಗೆ ಅನುದಾನವನ್ನು ನೀಡುವುದನ್ನೂ ಮುಂದುವರಿಸಿದರು.

೬. ಉತ್ತರಪ್ರದೇಶ ಮತ್ತು ಆಸ್ಸಾಮ್ ರಾಜ್ಯಗಳನ್ನು ಬಿಟ್ಟು ದೇಶದ ಇತರ ಎಲ್ಲ ರಾಜ್ಯಗಳಿಂದ ಮದರಸಾಗಳಲ್ಲಿನ ಅಯೋಗ್ಯ ವಿಷಯಗಳ ಕಡೆಗೆ ದುರ್ಲಕ್ಷ್ಯ

ಇಂದು ಪರಿಸ್ಥಿತಿ ಬದಲಾಗಿರುವಾಗ ಹೊಸ ಸರಕಾರಗಳು ಕೆಲವು ವ್ಯವಸ್ಥೆಗಳನ್ನು ಮಾಡಿದವು, ಎಂದು ಹೇಳಬೇಕಾಗುತ್ತದೆ. ಅಸ್ಸಾಮ್‌ನಲ್ಲಿ ಹಿಮಂತ ಬಿಸ್ವ ಸರಮಾ ಇವರು ನೇರವಾಗಿ ಎಲ್ಲ ಮದರಸಾಗಳನ್ನು ಅನಧಿಕೃತವೆಂದು ನಿರ್ಧರಿಸಿ ಮುಚ್ಚಿದರು. ಇನ್ನೊಂದೆಡೆ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರ ಅನುದಾನವನ್ನು ಪಡೆಯುವ ಮದರಸಾಗಳಲ್ಲಿನ ಪಠ್ಯಕ್ರಮವನ್ನು ಬದಲಾಯಿಸಿಕೊಂಡರು. ಈ ವಿಷಯದಲ್ಲಿ ಇವೆರಡು ರಾಜ್ಯಗಳ ಹೊರತು ಇತರ ಅನೇಕ ರಾಜ್ಯ ಸರಕಾರಗಳು ಸುಮ್ಮನೆ ಕುಳಿತಿವೆ. ರಾಜಸ್ಥಾನದಲ್ಲಿ ಅಧಿಕಾರ ಬದಲಾದ ತಕ್ಷಣ ಕಾಂಗ್ರೆಸ್ಸಿನ ಗಹಲೋತ ಸರಕಾರ ಪುನಃ ಮುಸಲ್ಮಾನರ ಓಲೈಕೆಯನ್ನು ಆರಂಭಿಸುತ್ತಾ ಹಳೆಯ ಶೈಕ್ಷಣಿಕ ನೀತಿಯನ್ನೇ ಉಪಯೋಗಿಸುತ್ತಿದೆ.

೭.`ಒಂದು ದೇಶ, ಒಂದು ಪಠ್ಯಕ್ರಮ’ದ ಅವಶ್ಯಕತೆ !

ಇವೆಲ್ಲ ಹಿನ್ನೆಲೆಯಲ್ಲಿ ದೇಶದ ಮುಸಲ್ಮಾನ ಸಮಾಜವನ್ನು ರಾಷ್ಟçನಿಷ್ಠವನ್ನಾಗಿ ಮಾಡಲಿಕ್ಕಿದ್ದರೆ ಹಾಗೂ ಅವರು ದೇಶವನ್ನು ರೂಪಿಸುವಲ್ಲಿ ಯೋಗದಾನ ನೀಡಬೇಕು, ಎಂದೆನಿಸುತ್ತಿದ್ದರೆ, ಕೇಂದ್ರದ ಸ್ತರದಲ್ಲಿ ಕೆಲವು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಲೇ ಬೇಕಾಗುವುದು. ಸುದೈವದಿಂದ ಸದ್ಯ ದೇಶಹಿತಕ್ಕಾಗಿ ತೆಗೆದು ಕೊಂಡಿರುವ ಪ್ರತಿಯೊಂದು ನಿರ್ಣಯವನ್ನು ಕಟ್ಟುನಿಟ್ಟಾಗಿ ಅನ್ವಯ ಗೊಳಿಸುವ ಇಚ್ಛಾಶಕ್ತಿ ಇರುವ ಸರಕಾರವಿದೆ. ಮದರಸಾ ಶಿಕ್ಷಣಪದ್ಧತಿಯಲ್ಲಿ ಬದಲಾವಣೆ ಮಾಡುವ ಮಾನಸಿಕತೆ ಈ ಸಮಾಜದಲ್ಲಿಲ್ಲ. ಈ ಸಮಾಜದ ನೇತೃತ್ವವು ರಾಷ್ಟçನಿಷ್ಠೆಯ ದೃಷ್ಟಿ ಕೋನವನ್ನು ತನಗೆ ಮತ್ತು ತನ್ನ ಸಮಾಜಕ್ಕೆ ನೀಡುವುದರಲ್ಲಿ ಒಂದೋ ಉದ್ದೇಶಪೂರ್ವಕ ದುರ್ಲಕ್ಷ್ಯ ಮಾಡಲಾಗುತ್ತದೆ ಅಥವಾ ಅವರಲ್ಲಿ ಆ ಕ್ಷಮತೆಯೇ ಇಲ್ಲ. ಇನ್ನೊಂದು ವಿಷಯವೆಂದರೆ ಈ ಸಮಾಜದ ದೊಡ್ಡ ಒಂದು ಭಾಗ ಮದರಸಾಗಳಲ್ಲಿ ಕಟ್ಟರ್ ಧಾರ್ಮಿಕ ಶಿಕ್ಷಣವನ್ನು ಪಡೆಯುತ್ತಿರುವುದರಿಂದ ಅವರಿಗೆ ತಮ್ಮನ್ನು ಬದಲಾಯಿಸಿಕೊಳ್ಳುವ ಇಚ್ಛೆಯೇ ಇಲ್ಲ.

ಯಾವುದೇ ಸಂಸ್ಕಾರವನ್ನು ಸಮಾಜದ ಉಚ್ಚ ವರ್ಗ ಅಥವಾ ಅತ್ಯುನ್ನತ ನೇತೃತ್ವವು ಮಾಡುತ್ತಿರುತ್ತದೆ, ಅಂದರೆ ಸಂಸ್ಕಾರವು ಮೇಲಿಂದ ಕೆಳಗೆ ಆಗುತ್ತಿರುತ್ತದೆ. ಸಮಾಜದಲ್ಲಿ ಮೇಲಿನ ವರ್ಗವು ಬದಲಾವಣೆಯನ್ನು ಸ್ವೀಕರಿಸಿದರೆ, ಕೆಳಗಿನ ವರ್ಗವೂ ಅವುಗಳನ್ನು ಅನುಕರಿಸುತ್ತಿರುತ್ತದೆ. ದೇಶದಲ್ಲಿ ಮುಸಲ್ಮಾನ ಸಮಾಜವನ್ನು ಬದಲಾಯಿಸಲಿಕ್ಕಿದ್ದರೆ, ಮದರಸಾದ ಪೂರ್ಣ ಪಠ್ಯಕ್ರಮಕ್ಕೆ ತೀವ್ರ ಆಘಾತವನ್ನು ನೀಡುವುದು, ಅಂದರೆ ಕಾನೂನುಪ್ರಕಾರ ಮದರಸಾದಲ್ಲಿನ ಸಂಪೂರ್ಣ ಪಠ್ಯಕ್ರಮವನ್ನು ಬದಲಾಯಿಸುವ ಅವಶ್ಯಕತೆಯಿದೆ. ಅದಕ್ಕಾಗಿ ರಾಷ್ಟಿçÃಯ ಸ್ತರದಲ್ಲಿ `ಒಂದು ದೇಶ, ಒಂದು ಪಠ್ಯಕ್ರಮ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು.

೮. ಪರಿವರ್ತನೆಗಾಗಿ ಪ್ರಯತ್ನಿಸುವುದು ಆವಶ್ಯಕ !

ಮುಸಲ್ಮಾನ ಸಮಾಜವನ್ನು ದೇಶದ ಮುಖ್ಯ ಪ್ರವಾಹದಲ್ಲಿ ತರಲು ರಾಷ್ಟಿçಯ ಶೈಕ್ಷಣಿಕ ನೀತಿಯ ಅಂತರ್ಗತ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಮದರಸಾಗಳಲ್ಲಿ ನೀಡುವ ಧಾರ್ಮಿಕ ಶಿಕ್ಷಣವನ್ನು ನಿಲ್ಲಿಸಬೇಕಾಗುತ್ತದೆ. ದೇಶದಲ್ಲಿ ಉರ್ದೂ ಭಾಷೆಯ ಮಹತ್ವವನ್ನು ಎಲ್ಲ ಸ್ತರಗಳಲ್ಲಿ ಕಡಿಮೆಗೊಳಿಸಬೇಕಾಗುವುದು. ರಾಷ್ಟಿçಯ ಶಿಕ್ಷಣ ನೀತಿಯನ್ನು ಹಮ್ಮಿಕೊಳ್ಳುವಾಗ ಈ ವಿಷಯಗಳನ್ನು ಅಳವಡಿಸುವುದು ಆವಶ್ಯಕವಾಗಿತ್ತು; ಆದರೆ ಎಂದಿನಂತೆ ಭಾರತೀಯ ಶಿಕ್ಷಣ, ವಿದ್ವಾಂಸರು ಮತ್ತು ನೀತಿ ಇವುಗಳು ಈ ವಿಷಯದ ವಿಚಾರ ಮಾಡುವಲ್ಲಿ ಒಂದೋ ವಿಫಲವಾಯಿತು ಅಥವಾ ನಿತ್ಯದ ಅಂಜುಬುರುಕತನದಿಂದ ಕೂಡಿತು ಎಂದೇ ಹೇಳಬೇಕು.’ – ಡಾ. ವಿವೇಕ ರಾಜೆ

(ಆಧಾರ : ದೈನಿಕ `ಮುಂಬಯಿ ತರುಣ ಭಾರತ’)