ಉಜ್ಜೈನಿ (ಮಧ್ಯಪ್ರದೇಶ) ಇಲ್ಲಿ ಗರಬಾ ಪೆಂಡಾಲದಲ್ಲಿ ಗುರುತು ಮುಚ್ಚಿಟ್ಟು ಬಂದಿದ್ದ ಮೂರು ಮುಸಲ್ಮಾನ ಯುವಕರಿಗೆ ಥಳಿತ !

ಪೊಲೀಸರು ಕ್ರಮ ಕೈಗೊಳ್ಳದೆ ಬಿಟ್ಟರು !

ಉಜ್ಜೈನ (ಮಧ್ಯಪ್ರದೇಶ) – ಇಲ್ಲಿಯ ಕಾಳಿದಾಸ ಅಕಾಡೆಮಿ ಸಂಕೀರ್ಣದಲ್ಲಿ ಅಕ್ಟೋಬರ್ ೧ ರಾತ್ರಿ ೧೧ ಗಂಟೆ ಸಮಯದಲ್ಲಿ ಗರಬಾ ಕಾರ್ಯಕ್ರಮದಲ್ಲಿ ನುಗ್ಗಿದ ೩ ಮುಸಲ್ಮಾನ ಯುವಕರನ್ನು ಹಿಡಿದು ಥಳಿಸಲಾಯಿತು.

ಪೆಂಡಾಲದಲ್ಲಿ ೩ ಮುಸಲ್ಮಾನ ಯುವಕರು ಪ್ರವೇಶಿಸಿರುವ ಮಾಹಿತಿ ಭಜರಂಗದಳದ ಕಾರ್ಯಕರ್ತರಿಗೆ ಸಿಕ್ಕಿತು. ಅದರ ನಂತರ ಅವರು ಪೆಂಡಾಲದಲ್ಲಿನ ಎಲ್ಲಾ ಯುವಕರ ಪರಿಶೀಲನೆ ನಡೆಸಿದರು. ಹಾಗೂ ವೇದಿಕೆಯಿಂದ ‘ಯಾರಾದರೂ ಮುಸಲ್ಮಾನ ಯುವಕರು ಇದ್ದರೆ, ಅವರು ಎದುರಿಗೆ ಬರಬೇಕು,’ ಎಂದು ಘೋಷಣೆ ಮಾಡಲಾಯಿತು. ಆಗ ಮುಸಲ್ಮಾನ ಯುವಕರು ಓಡಿ ಹೋಗುವಾಗ ಅವರನ್ನು ಹಿಡಿಯಲಾಯಿತು ಮತ್ತು ಪೆಂಡಾಲದ ಹೊರಗೆ ಕರೆದುಕೊಂಡು ಹೋಗಿ ಥಳಿಸಲಾಯಿತು. ಅದರ ನಂತರ ಪೊಲೀಸರು ಅವರನ್ನು ಬಿಡಿಸಿಕೊಂಡು ಪೊಲೀಸ ಠಾಣೆಗೆ ಕರೆದುಕೊಂಡು ಹೋದರು; ಆದರೆ ಅಲ್ಲಿ ‘ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ರಾತ್ರಿಯೇ ಮೂರು ಯುವಕರನ್ನು ಬಿಡುಗಡೆಗೊಳಿಸಿದರು’, ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಈ ರೀತಿಯ ಅಪರಾಧ ಮಾಡಿದ ನಂತರ ಕೂಡ ಕ್ರಮ ಕೈಗೊಳ್ಳದಿದ್ದರೆ ಈ ಯುವಕರು ನಾಳೆ ಇನ್ನೊಂದು ಕಡೆ ಹೋಗಿ ಇದೇ ರೀತಿಯ ಅಪರಾಧ ಮಾಡುವರು ! ಇದರಲ್ಲಿ ಹಿಂದೂ ಯುವತಿಯನ್ನು ಲವ್ ಜಿಹಾದ್‌ನ ಬಲೆಗೆ ಎಳೆದು ಮೋಸ ಮಾಡುವರು ! ಆದ್ದರಿಂದ ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ನಿರ್ಲಕ್ಷತನ ವರ್ತನೆ ಪೊಲೀಸರಿಂದ ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !