ಭೂತಹೋಗಲಾಡಿಸುವ ಹೆಸರಿನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮೌಲಾನಾನ ಶವ ಕಾಡಿನಲ್ಲಿ ಪತ್ತೆ

ಮೌಲಾನಾ ಅತಾವುಲ್ಲಾ ಕಾಸಮಿ

ಭೋಪಾಲ್ – ಮಧ್ಯಪ್ರದೇಶದ ಶಹಡೊಲ್ ಜಿಲ್ಲೆಯ ಅರಣ್ಯವೊಂದರಲ್ಲಿ ಸೆಪ್ಟೆಂಬರ್ ೨೬, ೨೦೨೨ ರಂದು ಮೌಲಾನಾ ಅತಾವುಲ್ಲಾ ಕಾಸಮಿಯ ಶವ ಪತ್ತೆಯಾಗಿದೆ. ಓರ್ವ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಮೌಲಾನಾನ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗುತ್ತಿದೆ. ಈ ಕೊಲೆಯ ಆರೋಪಿಗಳು ಬಜರಂಗದಳದೊಂದಿಗೆ ಸಂಪರ್ಕ ಹೊಂದಿರುವುದು ಪೊಲೀಸರು ನಿರಾಕರಿಸಿದ್ದಾರೆ.

ಈ ಕುರಿತು ಪೊಲೀಸರು ನೀಡಿದ ಮಾಹಿತಿಯಂತೆ, ಮೌಲಾನಾ ಅತಾವುಲ್ಲಾ ಕಾಸಮಿ ಭೂತವನ್ನು ಬಿಡಿಸುವ ಕೆಲಸವನ್ನು ಮಾಡುತ್ತಿದ್ದ. ಶಿವಶಂಕರ್ ಎಂಬ ವ್ಯಕ್ತಿ ತನ್ನ ಕುಟುಂಬದ ಮಹಿಳೆಯೋರ್ವರ ಆರೋಗ್ಯ ಸ್ಥಿತಿ ಹದಗೆಟ್ಟಾಗ ಮೌಲಾನಾ ಕಾಸಮಿಯ ಬಳಿಗೆ ಕರೆದೊಯ್ದಿದ್ದರು. ಮೌಲಾನಾ ಆ ಹೆಂಗಸನ್ನು ಭೂತ ಬಾಧೆ ನಿವಾರಿಸುವ ನೆಪದಲ್ಲಿ ಅವಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದನು. ನಂತರ ಅವರು ಸೆಪ್ಟೆಂಬರ್ ೨೧ ರಿಂದ ಕಾಣೆಯಾಗಿದ್ದರು. ಸೆಪ್ಟೆಂಬರ್ ೨೬, ೨೦೨೨ ರಂದು ಶಹಡೊಲ್ ಜಿಲ್ಲೆಯ ಪದ್ಮನಿಯಾ ಗ್ರಾಮದ ಅರಣ್ಯದಲ್ಲಿ ಅತಾವುಲ್ಲಾ ಖಾನ್ ಕಾಸಮಿಯ ಅರ್ಧ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿವಶಂಕರ ಎಂಬವನನ್ನು ಬಂಧಿಸಿದ್ದಾರೆ. ಮತ್ತು ಮುಂದಿನ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.