ಕಾಬೂಲ್‌ನ ಶಾಲೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ೨೪ ವಿದ್ಯಾರ್ಥಿಗಳ ಸಾವು

ಕಾಬೂಲ್ (ಅಫ್ಘಾನಿಸ್ತಾನ) – ಇಲ್ಲಿ ಸೆಪ್ಟೆಂಬರ್ ೩೦ ರ ಬೆಳಿಗ್ಗೆ ಶಾಲೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ೨೪ ಜನರು ಸಾವನ್ನಪ್ಪಿದ್ದಾರೆ. ಈ ಸ್ಫೋಟದ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಇನ್ನೂ ಹೊತ್ತುಕೊಂಡಿಲ್ಲ. ಪಶ್ಚಿಮ ಕಾಬೂಲನ ದಶ್ತ್-ಎ-ಬರ್ಚಿಯ ಶಾಲೆಯಲ್ಲಿ, ಕೆಲವು ವಿದ್ಯಾರ್ಥಿಗಳು ಪರೀಕ್ಷೆಯ ಸಿದ್ಧತೆಯಲ್ಲಿದ್ದರು. ಆಗ ದೊಡ್ಡ ಸ್ಫೋಟ ಸಂಭವಿಸಿದೆ.