ಕೈಮೂರ್ (ಬಿಹಾರ) ಇಲ್ಲಿಯ ಮುಂಡೇಶ್ವರಿ ದೇವಿಯ ದೇವಸ್ಥಾನದಲ್ಲಿ ನೀಡಲಾಗುತ್ತದೆ ರಕ್ತಹೀನ ಬಲಿ !

ಕೈಮುರ್ (ಬಿಹಾರ) – ಇಲ್ಲಿಯ ಮುಂಡೇಶ್ವರಿ ದೇವಿಯ ದೇವಸ್ಥಾನದಲ್ಲಿ ನವರಾತ್ರಿಯಲ್ಲಿ ಹರಿಕೇ ತೀರಿಸುವುದಕ್ಕಾಗಿ ಕುರಿಯನ್ನು ರಕ್ತಹೀನ ಬಲಿ ನೀಡಲಾಗುತ್ತದೆ. ಅಂದರೆ ಕುರಿಯನ್ನು ಕೊಲ್ಲದೆ ಬಲಿಯ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಈ ದೇವಸ್ಥಾನ ಸುಮಾರು ೫ ನೇ ಶತಮಾನದ ಎಂದು ಹೇಳಲಾಗುತ್ತದೆ. ದೇವಸ್ಥಾನ ೬೦೦ ಅಡಿ ಎತ್ತರದ ಬೆಟ್ಟದ ಮೇಲೆ ಇದೆ.

ಈ ವಿಷಯವಾಗಿ ದೇವಸ್ಥಾನದ ಅರ್ಚಕ ಪಿಂಟು ತಿವಾರಿ ಇವರು, ಕುರಿಯನ್ನು ದೇವಸ್ಥಾನದ ಗರ್ಭಗುಡಿಗೆ ಕರೆದುಕೊಂಡು ಹೋಗಲಾಗುತ್ತದೆ. ಗರ್ಭಗುಡಿಯಲ್ಲಿ ಮುಂಡೇಶ್ವರಿ ದೇವಿಯ ಮೂರ್ತಿಯ ಚರಣಗಳ ಹತ್ತಿರ ಕುರಿಯನ್ನು ಇರಿಸಲಾಗುತ್ತದೆ. ಅಲ್ಲಿ ಮಂತ್ರ ಪಠಣ ಮಾಡಲಾಗುತ್ತದೆ, ಅದರ ನಂತರ ಕುರಿ ಪ್ರಜ್ಞೆ ತಪ್ಪುತ್ತದೆ. ದೇವಿಯ ಪೂಜೆ ಆದ ನಂತರ ಕುರಿಗೆ ತಾನಾಗಿಯೇ ಪ್ರಜ್ಞೆ ಬರುತ್ತದೆ. ನಂತರ ಆ ಕುರಿಯನ್ನು ತಂದಿರುವ ಭಕ್ತನಿಗೆ ಹಿಂತಿರುಗಿಸಲಾಗುತ್ತದೆ. ಇಷ್ಟೇ ವಿಧಿ ಬಲಿಯಂದು ನಡೆಸಲಾಗುತ್ತದೆ, ಅಂದರೆ ಕುರಿಯ ಹತ್ಯೆ ಮಾಡಲಾಗುವುದಿಲ್ಲ. ಅನೇಕ ಭಕ್ತರು ಕುರಿಯನ್ನು ಈ ರೀತಿಯಲ್ಲಿ ಬಲಿ ನೀಡಿದ ನಂತರ ಅದನ್ನು ಬಿಟ್ಟು ಬಿಡುತ್ತಾರೆ, ಇನ್ನೂ ಕೆಲವು ಭಕ್ತರು ಮನೆಗೆ ಕೊಂಡೊಯ್ದು ಬಲಿ ನೀಡಿ ಮತ್ತು ನಂತರ ಅದನ್ನು ಪ್ರಸಾದವೆಂದು ಸೇವಿಸುತ್ತಾರೆ. ಈ ಬಲಿಯ ಪದ್ಧತಿ ಎಂದಿನಿಂದ ಶುರುವಾಗಿದೆ ಇದರ ಮಾಹಿತಿ ಇಲ್ಲಿ ಯಾರಿಗೂ ತಿಳಿದಿಲ್ಲ.