ಶಿವರಾಜ ಸಿಂಹ ಚೌಹಾನರವರು ಮಂತ್ರಿಮಂಡಳದ ಸಭೆಯಲ್ಲಿ ಮುಖ್ಯಮಂತ್ರಿಯ ಕುರ್ಚಿಯಲ್ಲಿ ಶ್ರೀ ಮಹಾಕಾಲೇಶ್ವರರ ಪ್ರತಿಮೆಯನ್ನು ಇಡಲಾಯಿತು

ಮುಖ್ಯಮಂತ್ರಿಯ ಕುರ್ಚಿಯಲ್ಲಿ ಶ್ರೀ ಮಹಾಕಾಲೇಶ್ವರರ ಪ್ರತಿಮೆ

ಉಜ್ಜೈನ – ಮಧ್ಯಪ್ರದೇಶದಲ್ಲಿನ ಉಜ್ಜೈನಿಯಲ್ಲಿ ಮೊಟ್ಟಮೊದಲ ಬಾರಿಗೆ ಮಂತ್ರಿಮಂಡಳದ ಸಭೆ ನಡೆಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಮುಖ್ಯ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನರವರು ಮುಖ್ಯ ಕುರ್ಚಿಯಲ್ಲಿ ಶ್ರೀ ಮಹಾಕಾಲೇಶ್ವರನ ಪ್ರತಿಮೆಯನ್ನು ಇಟ್ಟರು. ‘ಇಂದಿನ ಸಭೆಯು ಶ್ರೀ ಮಹಾಕಾಲನ ಅಧ್ಯಕ್ಷತೆಯಲ್ಲಿ ನಡೆಯಿತು. ಅವನು ಉಜ್ಜೈನಿಯ ರಾಜನಾಗಿದ್ದಾನೆ. ನಾವೆಲ್ಲರೂ ಅವನ ಸೇವಕರಾಗಿದ್ದೇವೆ’, ಎಂದು ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನರವರು ಹೇಳಿದರು.


ಸಭೆಯ ಮೊದಲು ಮಂತ್ರಿಗಳನ್ನು ಸಂಬೋಧಿಸುವಾಗ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನರವರು ಮಾತನಾಡುತ್ತ, ‘ಮಹಾಕಾಲ ಕಾರಿಡಾರ’ ಈಗ ಶ್ರೀ ಮಹಾಕಾಲ ಲೋಕ’ ಎಂದು ಗುರುತಿಸಲ್ಪಡುವುದು. ಶ್ರೀ ಮಹಾಕಾಲ ಮಹಾರಾಜರು ಮಾಲಿಕರಾಗಿದ್ದಾರೆ, ರಾಜನಾಗಿದ್ದಾರೆ; ಆದುದರಿಂದಲೇ ಇಂದು ಶ್ರೀ ಮಹಾಕಾಲ ಮಹಾರಾಜರ ಭೂಮಿಯಲ್ಲಿ ನಾವೆಲ್ಲ ಸೇವಕರು ಸಭೆಯನ್ನು ನಡೆಸುತ್ತಿದ್ದೇವೆ. ನಮ್ಮೆಲ್ಲರಿಗಾಗಿ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಶ್ರೀ ಮಹಾಕಾಲ ಮಹಾರಾಜರು ರಾಜ್ಯದಲ್ಲಿನ ಎಲ್ಲ ಜನತೆಯ ಮೇಲೆ ಆಶೀರ್ವಾದದ ಮಳೆಗರೆಯಬೇಕು ಎಂಬುದೇ ಪ್ರಾರ್ಥನೆಯಾಗಿದೆ, ಎಂದು ಹೇಳಿದರು.

ಈ ಸಭೆಯಲ್ಲಿ ಶ್ರೀ ಮಹಾಕಾಲೇಶ್ವರ ದೇವಸ್ಥಾನದ ವಿಸ್ತಾರದ ಬಗ್ಗೆ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.