ಭಾಗ್ಯನಗರ (ತೆಲಂಗಾಣ) : ಸೆಪ್ಟೆಂಬರ್ ೨೭ ರಂದು ಖೈರಾತಾಬಾದ್‌ನಲ್ಲಿ ಬುರ್ಖಾ ಧರಿಸಿದ್ದ ಇಬ್ಬರು ಮುಸಲ್ಮಾನ ಮಹಿಳೆಯರನ್ನು ಶ್ರೀ ದುರ್ಗಾ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸ ಉಪಾಯುಕ್ತ ರಾಜೆಶ ಕುಮಾರ ಇವರು, ಇಬ್ಬರೂ ಮನೋರೋಗಿಗಳಾಗಿದ್ದರು ಎಂದು ತಿಳಿಸಿದ್ದಾರೆ. ಈ ಹಿಂದೆ ಚರ್ಚ್‌ನ ಹೊರಗಿರುವ ಮೇರಿಯ ವಿಗ್ರಹವನ್ನು ಮುರಿಯಲು ಪ್ರಯತ್ನಿಸಿದ ಆರೋಪವೂ ಈ ಮಹಿಳೆಯರ ಮೇಲಿದೆ. ಅವರು ೨೦೧೮ ರಲ್ಲಿ ಜೆದ್ದಾದಿಂದ ಭಾರತಕ್ಕೆ ಮರಳಿದ್ದರು. ಅಂದಿನಿಂದ ಅವರು ಮಾನಸಿಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
माँ दुर्गा की मूर्ति तोड़ने वाली बुर्कानशीं महिलाओं को हैदराबाद पुलिस ने बताया ‘मानसिक बीमार’, भाई बोला – मेरी माँ और बहनों को सिज़ोफ्रेनिया है#Hyderabad #DurgaPujahttps://t.co/JDLWp4RO6N
— ऑपइंडिया (@OpIndia_in) September 27, 2022
೧. ಈ ಇಬ್ಬರು ಮಹಿಳೆಯರ ಸಹೋದರನಾದ ಅಸೀಮುದ್ದೀನ್‌ನು, ನನ್ನ ಸಹೋದರಿಯರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರು ಈ ಹಿಂದೆ ಯವತ್ತೂ ಹೀಗೆ ಮಾಡಿಲ್ಲ. ನಾನು ಕ್ಷಮೆ ಕೇಳುತ್ತಾನೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದನು.
೨. ಈ ಪ್ರಕರಣದಲ್ಲಿ ನಾಮಪಲ್ಲಿ ಮತದಾನ ಕ್ಷೇತ್ರದ ಶಾಸಕ ಜೆ.ಎಚ್. ಮೆರಾಜ ಇವನು ಪ್ರಸಾರ ಮಾಧ್ಯಮಗಳಿಗೆ, ಈ ವಿಚಾರದಲ್ಲಿ ನಾನು ಪೊಲೀಸ್ ಆಯುಕ್ತರ ಬಳಿ ಸರಿಯಾಗಿ ತನಿಖೆಗೆ ಒತ್ತಾಯಿಸಿದ್ದೇನೆ ಒಬ್ಬ ವ್ಯಕ್ತಿಯು ಈ ಮಹಿಳೆಯರನ್ನು ವಿಗ್ರಹವನ್ನು ಧ್ವಂಸ ಮಾಡುತ್ತಿರುವುದನ್ನು ತಡೆಯಲು ಪ್ರಯತ್ನಿಸಿದರು. ಆ ವ್ಯಕ್ತಿಯ ಮೇಲೆಯೂ ಹಲ್ಲೆ ನಡೆಸಿದ ಆರೋಪವೂ ಅವರ ಮೇಲಿದೆ.
ಸಂಪಾದಕೀಯ ನಿಲುವು
|