’ಪಿ.ಎಫ್. ಐ’ ಮೇಲೆ ನಿಷೇಧ ಹೇಳಿರುವುದು ಆಂತರಿಕ ಭಯೋತ್ಪಾದನೆಯ ಮೇಲಿನ ಸರ್ಜಿಕಲ್ ಸ್ಟ್ರೈಕ್ ! – ಶ್ರೀ ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಮುಂಬೈ – ಸಪ್ಟೆಂಬರ್ ೨೯.೨೦೧೬ ರಲ್ಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹೊರಗಿನ ಭಯೋತ್ಪಾದನೆಯ ಮೇಲೆ ಸರ್ಜಿಕಲ್ ಸ್ಟ್ರೈಕ್ (ಪಾಕಿಸ್ತಾನ ವ್ಯಾಪ್ತ ಕಾಶ್ಮೀರದಲ್ಲಿ ನುಗ್ಗಿ ಭಯೋತ್ಪಾದಕರ ಶಿಬಿರದ ಮೇಲೆ ನಡೆಸಿರುವ ದಾಳಿ) ನಡೆಸಿದ್ದರು. ಇಂದಿಗೆ ಬರೋಬರಿ ೬ ವರ್ಷದ ನಂತರ ಪಿ.ಎಫ್.ಐ. ಮೇಲೆ ನಿಷೇದ ಹೇರಿ ಸರಕಾರದಿಂದ ದೇಶದಲ್ಲಿನ ಆಂತರಿಕ ಭಯೋತ್ಪಾದನೆಯ ಮೇಲೆ ಸರ್ಜಿಕಲ್ ಸ್ಟ್ರೈಕ ಮಾಡಿದ್ದಾರೆ, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ ಚೇತನ ರಾಜಹಂಸ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಸನಾತನ ಸಂಸ್ಥೆಯಿಂದ ತೆಗೆದ ಪ್ರಸಿದ್ಧಿಪತ್ರದಲ್ಲಿ ಮುಂದಿನಂತೆ ಹೇಳಲಾಗಿದೆ ,

೧. ’ಪಿ.ಎಫ್.ಐ ’ಮೇಲೆ ನಿಷೇಧ ಇದು ಗಝವಾ – ಏ – ಹಿಂದ ಎಂದರೆ ಭಾರತವನ್ನು ’ಇಸ್ಲಾಮಿಕ್ ಸ್ಟೇಟ್ ’ ಮಾಡುವ ಕನಸುಗಳು ಇರಿಸಿಕೊಂಡಿರುವ ಜಿಹಾದಿ ಪ್ರವೃತ್ತಿಯವರಿಗೆ ಕಪಾಳ ಮೋಕ್ಷವಾಗಿದೆ

೨. ಮುಸಲ್ಮಾನ ಯುವಕರನ್ನು ದಾರಿ ತಪ್ಪಿಸಿ ’ಪಿ .ಎಫ್ .ಐ’ಯು ದೇಶಾದ್ಯಂತ ಹಿಂದೂ ಯುವತಿಯರನ್ನು ಅಪಹರಿಸಿ ’ಲವ್ ಜಿಹಾದ್,’ ಹಿಂದೂ ನಾಯಕರ ಹತ್ಯೆ, ಹಿಂದೂ ವಿರೋಧಿ ದಂಗೆ ಮುಂತಾದ ಷಡ್ಯಂತ್ರ ನಡೆಸುತ್ತಾ ಅನೇಕ ಭಯೋತ್ಪಾದಕ ಕೃತ್ಯಗಳನ್ನು ಮಾಡಿದ್ದಾರೆ.

೩. ೨೦೨೪ ನೇ ಇಸ್ವಿಯಲ್ಲಿ ಭಾರತವನ್ನು ’ಇಸ್ಲಾಮಿಕ್ ಸ್ಟೇಟ್’ ಮಾಡುವ ಕನಸ್ಸು ಸಾಕಾರಗೊಳಿಸುವುದಕ್ಕೆ ಅವರು ದೇಶದ ಹಿತವನ್ನು ಕಾಪಾಡುವ ನಾಗರಿಕತ್ವ ಸುಧಾರಣಾ ವಿಧೇಯಕ ಮತ್ತು ರಾಷ್ಟ್ರೀಯ ನಾಗರಿಕತ್ವ ನೋಂದಣಿ ವಿಧೇಯಕ ಇದನ್ನು ಹಿಂಸಾಚಾರದಿಂದ ವಿರೋಧಿಸಿದರು.

೪. ಒಟ್ಟಾರೆ ನಿಷೇಧದಿಂದ ಭಾರತದ ಇಸ್ಲಾಮಿಕರಣ ಮಾಡುವ ಧ್ಯೇಯ ಇಟ್ಟುಕೊಂಡಿರುವ ಈ ಭಯೋತ್ಪಾದಕರ ಕಾರ್ಯಾಚರಣೆಗೆ ತಡೆಯುಂಟಾಗಿದೆ ಎಂದು ಹೇಳಬಹುದು. ದೇಶದ ಸುರಕ್ಷೆಯ ಸಂದರ್ಭದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಇರುವ ಮೋದಿ ಸರಕಾರದ ಧೈರ್ಯದ ನಿರ್ಣಯವನ್ನು ಸನಾತನ ಸಂಸ್ಥೆಯು ಸ್ವಾಗತಿಸುತ್ತದೆ.