ಸಾಮಾಜಿಕ ಜಾಲತಾಣದಿಂದ ಟಿಕೆ
ಗೋಪಾಲಗಂಜ (ಬಿಹಾರ) – ಇಲ್ಲಿಯ ಥಾವೆ ನಗರದಲ್ಲಿನ ಪ್ರಸಿದ್ಧ ಥಾವೆ ಮಾತೆಯ ದೇವಸ್ಥಾನದಲ್ಲಿ ಬಿಹಾರದ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾದಳದ ಮುಖಂಡ ತೇಜಸ್ವಿ ಯಾದವ ಪಾದರಕ್ಷೆಗಳನ್ನು ಧರಿಸಿ ಹೋಗಿರುವುದರಿಂದ ವಿವಾದ ನಿರ್ಮಾಣವಾಗಿದೆ. ಭಾಜಪವು ಯಾದವ ಇವರನ್ನು ಟೀಕಿಸಿದೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೂಡ ಯಾದವ್ ಇವರ ಮೇಲೆ ಟೀಕಿಸಲಾಗುತ್ತಿದೆ. ತೇಜಸ್ವಿ ಯಾದವ ದೇವಸ್ಥಾನದ ಪರಿಸರದಲ್ಲಿನ ಒಂದು ವಿಡಿಯೋ ಪ್ರಸಾರಗೊಂಡಿದೆ. ಅದರಲ್ಲಿ ಅವರ ಕಾಲಲ್ಲಿ ಪಾದರಕ್ಷೆ ಇದೆ, ಹಾಗೂ ಅವರ ಜೊತೆ ಇರುವವರು ಪಾದರಕ್ಷೆ ತೆಗೆದಿರುವುದು ಕಾಣುತ್ತದೆ.
ಸಂಪಾದಕೀಯ ನಿಲುವುದೇವಸ್ಥಾನದಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಹೋಗಬಾರದೆಂದು ತಿಳಿದಿದ್ದರು ಈ ರೀತಿಯ ಕೃತಿ ಮಾಡಿರುವ ಪ್ರಕರಣದಲ್ಲಿ ತೇಜಸ್ವಿ ಯಾದವ ಇವರ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿರುವ ಬಗ್ಗೆ ದೂರು ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ! ಯಾದವ ಏನಾದರೂ ಮಸೀದಿಗೆ ಹೋಗಿದ್ದರೆ ಅವರ ವಿರುದ್ಧ ಈ ವರೆಗೆ ಫತ್ವಾ ತೆಗೆಯಲಾಗುತ್ತಿತ್ತು ! |