ತಮಿಳ ಕಾರ್ಯಕರ್ತನ ಬಂಧನದ ವಿರೋಧದಲ್ಲಿ ತಮಿಳಿ ಹಿಂದೂಗಳಿಂದ ಶ್ರೀಲಂಕಾದಲ್ಲಿ ಪ್ರತಿಭಟನೆ

ಶ್ರೀಲಂಕಾದಲ್ಲಿನ ಪ್ರಾಚೀನ ಹಿಂದೂ ದೇವಸ್ಥಾನದ ಜಾಗದಲ್ಲಿ ಅಕ್ರಮವಾಗಿ ಬೌದ್ಧ ವಿಹಾರ ಕಟ್ಟಿದ ಪ್ರಕರಣ !

ಜಾಫನಾ (ಶ್ರೀಲಂಕಾ) – ಇಲ್ಲಿಯ ಒಂದು ಪ್ರಾಚೀನ ಹಿಂದೂ ದೇವಸ್ಥಾನದ ಜಾಗದಲ್ಲಿ ಅಕ್ರಮವಾಗಿ ಬೌದ್ಧ ವಿಹಾರ ಕಟ್ಟಡ ನಿರ್ಮಾಣ ಮಾಡಿರುವ ವಿರುದ್ಧ ಆಂದೋಲನ ನಡೆಸುವ ೨ ಪ್ರಮುಖ ತಮಿಳಿ ಕಾರ್ಯಕರ್ತರನ್ನು ಶ್ರೀಲಂಕಾ ಸರಕಾರ ಬಂಧಿಸಿದೆ. ಈ ಬಂಧನದ ವಿರುದ್ಧ ತಮಿಳಿ ಹಿಂದೂಗಳು ಮುಲ್ಲೇತಿವು ಮತ್ತು ಜಾಫನಾದಲ್ಲಿ ಆಂದೋಲನ ಮಾಡಿದರು. ಶ್ರೀಲಂಕಾದ ಉತ್ತರ ಪ್ರಾಂತೀಯ ಪರಿಷತ್ತಿನ ಮಾಜಿ ಸದಸ್ಯ ಟಿ. ರವಿಕರಣ ಮತ್ತು ಸಾಮಾಜಿಕ ಕಾರ್ಯಕರ್ತ ಆರ್. ಮಯುರನ್ ಇವರನ್ನು ಕಾನೂನು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು.

ಕುರುನ್ಥುಮಲೈ ಇಲ್ಲಿ ಬೌದ್ಧ ವಿಹಾರದ ಕಾನೂನ ಬಾಹಿರ ಕಟ್ಟಡದ ವಿರುದ್ಧ ಸ್ಥಳೀಯ ಹಿಂದೂಗಳು ಆಂದೋಲನ ನಡೆಸಿದರು. ಶ್ರೀಲಂಕಾದ ನ್ಯಾಯಾಲಯದಿಂದ ನೀಡಿಲಾಗಿರುವ ಹೊಸ ಕಟ್ಟಡ ಕಟ್ಟದೇ ಇರುವ ಆದೇಶವನ್ನು ಪಾಲಿಸದೆ ಶ್ರೀಲಂಕಾದ ಅಧಿಕಾರಿಗಳು ಕುರುನ್ಥುಮಲೈ ಬೆಟ್ಟದ ಮೇಲೆ ಪ್ರಾಚೀನ ಹಿಂದೂ ದೇವಸ್ಥಾನದ ಜಾಗದಲ್ಲಿ ಬೌದ್ಧ ವಿಹಾರದ ಕಾನೂನ ಬಾಹಿರ ಕಟ್ಟಡ ನಿರ್ಮಾಣ ಮುಂದುವರೆಸಿದ್ದಾರೆ. ಜಾಫನಾದಲ್ಲಿನ ವಿದ್ಯಾಪೀಠದ ವಿದ್ಯಾರ್ಥಿಗಳು ರವಿಕಿರಣ ಮತ್ತು ಆರ್. ಮಯೂರನ್ ಇವರ ಬೆಂಬಲದಿಂದ ಆಂದೋಲನ ನಡೆಸಲಾಯಿತು ಮತ್ತು ಸಿಂಹಳಿ ಬೌದ್ಧರ ಅತಿಕ್ರಮಣ ತಡೆಯುಲು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಶ್ರೀಲಂಕಾದಲ್ಲಿ ಅಸುರಕ್ಷಿತ ಹಿಂದೂ ದೇವಸ್ಥಾನಗಳು !