ಪಾಕಿಸ್ತಾನಿ ಪ್ರಧಾನಿಯ ಸಭೆಯಲ್ಲಿನ ಗೌಪ್ಯ ಚರ್ಚೆ ಬಹಿರಂಗ

ಮಾತುಕತೆಯಲ್ಲಿ ಭಾರತದಿಂದ ವಿದ್ಯುತ್ ಪ್ರಕಲ್ಪ ತರಿಸಿಕೊಳ್ಳಲಾಗುವುದರ ಉಲ್ಲೇಖ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫ್ ಇವರ ಮನೆಯಲ್ಲಿ ನಡೆದ ಒಂದು ಸಭೆಯಲ್ಲಿ ಹಾಗೂ ಶರೀಫ್ ಮತ್ತು ಒಬ್ಬ ಅಧಿಕಾರಿ ಇವರಲ್ಲಿನ ಚರ್ಚೆಯ ಒಂದು ಆಡಿಯೋದ ಮೂಲಕ ಬಹಿರಂಗವಾಗಿದೆ. ಚರ್ಚೆಯಲ್ಲಿ ಅಧಿಕಾರಿ ಶಹಾಬಾಜ ಇವರಿಗೆ, “ನವಾಜ ಶರೀಫ್ ಇವರ ಅಳಿಯ ಭಾರತದಿಂದ ವಿದ್ಯುತ್ ಪ್ರಕಲ್ಪ ಆಮದು ಮಾಡುವವರಿದ್ದಾರೆ ಈ ವ್ಯವಹಾರ ನಿಲ್ಲಿಸಬೇಕು.” ಎಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಪಾಕಿಸ್ತಾನದ ವಿರೋಧ ಪಕ್ಷದ ನಾಯಕರು ‘ಈ ಆಡಿಯೋದಿಂದ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ನಿರಾಕರಿಸಲಾಗುವುದಿಲ್ಲ’, ಎಂದು ಆರೋಪಿಸಿದ್ದಾರೆ. ಈ ಆಡಿಯೋ ಈಗ ಆನ್ಲೈನ್ ನಲ್ಲಿ ಕೂಡ ಲಬ್ಧವಾಗಿದೆ. ಈ ಮಧ್ಯೆ ಪ್ರಧಾನಿ ಶಾಹಬಾಜ್ ಶರೀಫ್, ಗೃಹ ಸಚಿವ ರಾಣ ಸನಾವುಲ್ಲ, ರಕ್ಷಣಾ ಸಚಿವ ಕ್ವಾಜಾ ಆಸಿಫ್ ಇವರ ಜೊತೆಗೆ ಇತರ ಕೆಲವು ನಾಯಕರ ಧ್ವನಿ ಇದೆ.

ಇಮ್ರಾನ್ ಖಾನ್ ಇವರ ಪಕ್ಷ ‘ಪಾಕಿಸ್ತಾನ್ ತೆಹರಿಕ್-ಏ-ಇನ್ಸಾಫ್’ನ ನಾಯಕ ಮತ್ತು ಮಾಜಿ ಸಚಿವ ಫವಾದ ಚೌದರಿ ಇವರು, ನಮ್ಮ ಪ್ರಧಾನಿ ಮನೆಯಲ್ಲಿ ಇಂಟರ್ನೆಟ್ ಡೇಟಾ ಕಳುವಾಗುತ್ತಿದೆ. ಈ ದೇಶದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ಈಗ ರಕ್ಷಣೆ ಮತ್ತು ವಿದೇಶಾಂಗ ಸಚಿವಾಲಯದೊಂದಿಗೆ ಸಂಬಂಧಪಟ್ಟ ಮಾಹಿತಿ ಕೂಡ ಶತ್ರುಗಳ ಕೈ ಸೇರಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಂದು ಕಡೆ ಭಾರತದ ವಿರುದ್ಧ ಜಿಹಾದಿ ಹೋರಾಟ ಮತ್ತು ಇನ್ನೊಂದು ಕಡೆ ಭಾರತದಿಂದ ಮರೆಮಾಚಿ ವಿದ್ಯುತ್ ಪ್ರಕಲ್ಪ ಆಮದು ಮಾಡಿಕೊಳ್ಳುವುದು, ಇದು ಪಾಕಿಸ್ತಾನಿ ಮುಖಂಡರ ಡೋಂಗಿತನ !