ಬಲಾತ್ಕಾರದ ಪ್ರಕರಣದಲ್ಲಿ ಗುಜರಾತ್‌ನ ಆಮ್ ಆದ್ಮಿ ಪಕ್ಷದ ಮುಖಂಡನ ಬಂಧನ

ಆಮ್ ಆದ್ಮಿ ಪಕ್ಷದ ಮುಖಂಡ ಭಾಗೂ ವಾಲಾ

ಸೋಮನಾಥ (ಗುಜರಾತ)– ಬಲಾತ್ಕಾರದ ಪ್ರಕರಣದಲ್ಲಿ ಪೊಲೀಸರು ಆಮ್ ಆದ್ಮಿ ಪಕ್ಷದ ಮುಖಂಡ ಭಾಗೂ ವಾಲಾ ಇವರನ್ನು ವೆರಾವಳದಿಂದ ಬಂಧಿಸಿದ್ದಾರೆ.

೧. ವೆರಾವಳದ ಪೊಲೀಸ ನಿರಿಖ್ಷಕ ಸುನಿಲ ಇಸರಾನಿ ಇವರು, ೨೩ ವರ್ಷದ ಯುವತಿಯು ಸಪ್ಟೆಂಬರ್ ೨೩ ರಂದು ಭಾಗೂ ವಾಲಾ ಇವರ ವಿರುದ್ಧ ಬಲಾತ್ಕಾರದ ದೂರು ದಾಖಲಿಸಿದ್ದರು. ದೂರಿನ ನಂತರ ಆ ಯುವತಿಯ ವೈದ್ಯಕೀಯ ತಪಾಸಣೆ ಮಾಡಲಾಯಿತು ಅದರ ನಂತರ ದೂರು ದಾಖಲಿಸಲಾಯಿತು. ಎಂದು ಹೇಳಿದರು.

೨. ಭಾಗೂ ವಾಲಾ ಇವರು ಮೊದಲು ಕಾಂಗ್ರೆಸಿನ ಉಪಾಧ್ಯಕ್ಷರಾಗಿದ್ದರು. ಇತ್ತಿಚೆಗೆ ಅವರು ಆಮ್ ಆದ್ಮಿ ಪಕ್ಷ ಸೇರಿದ್ದರು. ಅವರದ್ದು ತಮ್ಮದೇ ಆದ ಚಲನಚಿತ್ರ ನಿರ್ಮಾಣದ ಕಂಪನಿ ಇದೆ. ಅವರು ಸಂತ್ರಸ್ತೆಗೆ ಕೆಲಸ ನೀಡುವ ಆಮಿಷ ತೋರಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿರುವ ಆರೋಪ ಮಾಡಲಾಗಿದೆ.

ಸಂಪಾದಕೀಯ ನಿಲುವು

ರಾಜಕೀಯ ಪಕ್ಷದಲ್ಲಿ ತತ್ವಾಧಾರಿತ ನಾಯಕರು ಇದ್ದಾರೆ’, ಎಂದು ಹೇಳುವ ಧೈರ್ಯ ಯಾರಿಗೂ ಬರುತ್ತಿಲ್ಲ ! ‘ಈ ಪ್ರಜಾಪ್ರಭುತ್ವಕ್ಕೆ ದುರಂತವಾಗಿದೆ’, ಎಂದು ಯಾರಾದರೂ ಹೇಳಿದರೆ ಆಶ್ಚರ್ಯವೇನಿಲ್ಲ !