ಪುಣೆಯಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ‘ಪಾಕಿಸ್ತಾನ್ ಜಿಂದಾಬಾದ’ ಘೋಷಣೆ !

ಪಿ.ಎಫ್.ಐ. ಮೇಲೆ ಕಾರ್ಯಾಚರಣೆಯ ಪ್ರಕರಣ

ಪುಣೆ – ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ(ಪಿ.ಎಫ್.ಐ.ಯ) ವಿರುದ್ಧ ರಾಷ್ಟ್ರೀಯ ತನಿಖಾ ದಳದಿಂದ (‘ಎನ್.ಐ.ಎ.’ಯು) ನಡೆಸಲಾದ ಕಾರ್ಯಾಚರಣೆಯ ವಿರೋಧ ಮಾಡಲು ಇಲ್ಲಿಯ ಮುಸಲ್ಮಾನ ಸಮುದಾಯದಲ್ಲಿನ ಕೆಲವು ವ್ಯಕ್ತಿಗಳು ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಆಂದೋಲನ ಮಾಡುವ ಆಯೋಜನೆ ಮಾಡಿದ್ದರು. ಆದರೆ ಆಂದೋಲನ ಶುರು ಆಗುವ ಮೊದಲೇ ಪುಣೆ ಪೊಲೀಸರು ಆಂದೋಲನಕಾರರನ್ನು ವಶಕ್ಕೆ ಪಡೆದರು. ಆದ್ದರಿಂದ ಈ ಆಂದೋಲನ ರದ್ದುಪಡಿಸಲಾಯಿತು.

ಅದರ ನಂತರ ಆಂದೋಲನಕ್ಕಾಗಿ ಜಿಲ್ಲಾಧಿಕಾರಿ ಕಾರ್ಯಾಲಯದ ಹೊರಗೆ ಒಟ್ಟಾದ ಆಂದೋಲನಕಾರರಲ್ಲಿ ಕೆಲವರು ‘ಪಾಕಿಸ್ತಾನ ಜಿಂದಾಬಾದ’ ಮತ್ತು ‘ನಾರಾ-ಏ-ತಕಬಿರ್ (ಅಲ್ಲ ಎಲ್ಲಕ್ಕಿಂತ ದೊಡ್ಡವನಾಗಿದ್ದಾನೆ), ಅಲ್ಲಾಹು ಅಕ್ಬರ್’ (ಅಲ್ಲಾ ಶ್ರೇಷ್ಠನಾಗಿದ್ದಾನೆ) ಎಂಬ ಘೋಷಣೆಗಳನ್ನು ಕೂಗಿದರು. ಈ ಸಮಯದಲ್ಲಿ ಆಂದೋಲನಕಾರರು ‘ಆರ್.ಎಸ್.ಎಸ್. ಮುರ್ದಾಬಾದ್’ ಎಂಬ ಘೋಷಣೆ ಕೂಡ ನೀಡಿರುವ ವಿಡಿಯೋ ಮೂಲಕ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಪುಣೆ ಪೊಲೀಸರು ರಿಯಾಜ್ ಸಯ್ಯದ್ ಮತ್ತು ಪಿ.ಎಫ್.ಐ. ನ ೬೦ ರಿಂದ ೭೦ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಇತರ ಕೆಲವು ವ್ಯಕ್ತಿಗಳನ್ನು ಕೂಡ ವಶಕ್ಕೆ ಪಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ರಾಷ್ಟ್ರಧ್ರೋಹಿ ಜಿಹಾದಿ ಸಂಘಟನೆ ಪಿ.ಎಫ್.ಐ. ಅನ್ನು ಬೆಂಬಲಿಸಿ ದೇಶದ್ರೋಹಿ ಘೋಷಣೆ ನೀಡುವವರಿಗೆ ಇನ್ನು ಗಲ್ಲು ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ !