‘ನಮಗೆ ಭಾರತದ ಜೊತೆಗೆ ಶಾಂತಿಯುತ ಸಂಬಂಧ ಸ್ಥಾಪಿಸಬೇಕಿದೆ; ಆದರೆ ಕಾಶ್ಮೀರದ ಸಮಸ್ಯೆ ಪರಿಹರಿಸಬೇಕು !’ (ಅಂತೆ)

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿಯ ದ್ವಿಮುಖ ಪಾತ್ರ ಬಹಿರಂಗ !

ಪಾಕಿಸ್ತಾನದ ಪ್ರಧಾನಿ ಶಹಾಬಾಜ ಶರೀಫ್

ನ್ಯೂಯಾರ್ಕ್ (ಅಮೇರಿಕಾ) – ಪಾಕಿಸ್ತಾನಕ್ಕೆ ಭಾರತದ ಜೊತೆಗೆ ಶಾಂತಿಯುತ ಸಂಬಂಧ ಬೇಕಿದೆ, ಎಂದು ಪಾಕಿಸ್ತಾನದ ಪ್ರಧಾನಿ ಶಹಾಬಾಜ ಶರೀಫ್ ಇವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದರು; ಆದರೆ ಈ ಸಮಯದಲ್ಲಿ ಅವರು ಕಾಶ್ಮೀರ ಪ್ರಶ್ನೆಯ ಉಲ್ಲೇಖ ಕೂಡ ಮಾಡಿದರು.

ಪ್ರಧಾನಿ ಶರೀಫ್ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಎಲ್ಲಾ ನೆರೆ ರಾಷ್ಟ್ರಗಳ ಜೊತೆಗೆ ನಮಗೆ ಶಾಂತಿಯುತ ಸಂಬಂಧ ಬೇಕಿದೆ. ಇದರಲ್ಲಿ ಭಾರತ ಕೂಡ ಒಂದಾಗಿದೆ. ದಕ್ಷಿಣ ಏಷ್ಯಾದಲ್ಲಿ ದೀರ್ಘಕಾಲ ಶಾಂತಿಯುತ ವಾತಾವರಣ ಇರುವ ಹಾಗೆ ನಮ್ಮ ನಿಲುವು ಇದೆ; ಆದರೆ ಈ ಸಮಯದಲ್ಲಿ ಅವರು ಜಮ್ಮು ಕಾಶ್ಮೀರ ವಿವಾದದ ಪ್ರಶ್ನೆ ಪರಿಹರಿಸಲು ಒತ್ತಾಯಿಸಿದರು.

೨. ರಚನಾತ್ಮಕ ಸಹಭಾಗಕ್ಕಾಗಿ ಸಕ್ಷಮ ವಾತಾವರಣ ನಿರ್ಮಾಣ ಮಾಡಲು ಭಾರತ ವಿಶ್ವಾಸಯುಕ್ತ ಹೆಜ್ಜೆ ಇಡಬೇಕು. (ಭಾರತ ಅಲ್ಲ, ಪಾಕಿಸ್ತಾನ ಆ ಹೆಜ್ಜೆ ಇಡಬೇಕು ಮತ್ತು ಅದು ಜಗತ್ತಿಗೆ ಕಾಣಬೇಕು ! – ಸಂಪಾದಕರು) ನಾವು ಇಬ್ಬರು ನೆರೆ ದೇಶದವರಾಗಿದ್ದೇವೆ ಮತ್ತು ಶಾಶ್ವತವಾಗಿ ಇರುವವರಿದ್ದೇವೆ. ನಾವು ಶಾಂತಿಯುತವಾಗಿ ಇರಬೇಕಾಗಿದೆ ಅಥವಾ ಒಬ್ಬರನ್ನೊಬ್ಬರ ಜೊತೆಗೆ ಹೋರಾಡುತ್ತಾ ಇರಬೇಕೇ, ಈ ನಿರ್ಣಯ ನಮ್ಮದಾಗಿದೆ. (ಈ ನಿರ್ಣಯ ಭಾರತ ತೆಗೆದುಕೊಳ್ಳುವುದಿಲ್ಲ, ಇದು ಪಾಕಿಸ್ತಾನವೇ ತೆಗೆದುಕೊಳ್ಳಬೇಕು ! – ಸಂಪಾದಕರು)

೩. ೧೯೪೭ ರಿಂದ ಇಲ್ಲಿಯವರೆಗೆ ನಮ್ಮಲ್ಲಿ ೩ ಯುದ್ಧಗಳು ನಡೆದಿವೆ. ಈ ಯುದ್ಧದ ಪರಿಣಾಮ ಎರಡು ದೇಶದಲ್ಲಿ ಕೇವಲ ದುಃಖ, ಬಡತನ ಮತ್ತು ನಿರುದ್ಯೋಗ ಹೆಚ್ಚಿದೆ. (ಯುದ್ಧಗಳು ಭಾರತದಿಂದ ಮಾಡಲಾಗಿರದೇ ಪಾಕಿಸ್ತಾನವೇ ಆರಂಭ ಮಾಡಿತ್ತು ಮತ್ತು ಈ ಯುದ್ಧಗಳಲ್ಲಿ ಅದು ಹೀನಾಯ ಸೋಲು ಉಂಡಿತು, ಇದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು) ಶಾಂತಿಯುತವಾಗಿ ಮಾತುಕತೆಯಿಂದ ಮತ್ತು ಚರ್ಚೆಯ ಮೂಲಕ ನಮ್ಮ ಮತ ಭೇದಗಳನ್ನು, ಸಮಸ್ಯೆಗಳನ್ನು ಪರಿಹರಿಸುವುದು ಈಗ ನಮ್ಮ ಮೇಲೆ ಅವಲಂಬಿಸಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಾಶ್ಮೀರ ಇದು ಭಾರತದ ಅವಿಭಾಜ್ಯ ಅಂಗವಾಗಿದೆ, ಇದು ಯಾವಾಗ ಪಾಕಿಸ್ತಾನ ಸ್ವೀಕರಿಸುವುದು ಮತ್ತು ಅಲ್ಲಿಯ ಜಿಹಾದಿ ಭಯೋತ್ಪಾದನೆ ನಿಲ್ಲಿಸುವುದು, ಆಗ ಪಾಕಿಸ್ತಾನದ ಜೊತೆ ಶಾಂತಿಯುತ ಸಂಬಂಧ ನಿರ್ಮಾಣವಾಗುವುದು, ಇದನ್ನು ಪಾಕಿಸ್ತಾನ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು !