ಕೇರಳದಲ್ಲಿ ‘ಬಂದ್‌’ಗೆ ಹಿಂಸಾತ್ಮಕ ತಿರುವು !

  • ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ಕಚೇರಿಗಳ ಮೇಲೆ ನಡೆದ ದಾಳಿಯ ಪ್ರಕರಣ

  • ಸರಕಾರಿ ಬಸ್‌-ಗಾಡಿಗಳನ್ನು ಧ್ವಂಸಗೊಳಿಸಲಾಯಿತು

  • ಪೊಲೀಸರ ಮೇಲೆ ಆಕ್ರಮಣ

ತಿರುವನಂತಪುರಮ್‌ (ಕೇರಳ) – ಕೇಂದ್ರೀಯ ತನಿಖಾ ದಳ ಹಾಗೂ ಜ್ಯಾರಿ ನಿರ್ದೇಶನಾಲಯವು ದೇಶದಾದ್ಯಂತ ೧೫ ರಾಜ್ಯಗಳಲ್ಲಿ ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ೧೬ ಕಡೆಗಳಲ್ಲಿ ನಡೆಸಿದ ದಾಳಿಗಳಲ್ಲಿ ೧೦೬ ಜನರನ್ನು ಬಂಧಿಸಲಾದ ನಂತರ ಪಿ.ಎಫ್‌.ಐ ನ ಕಾರ್ಯಕರ್ತರಿಂದ ಕೇರಳದಲ್ಲಿ ಸಪ್ಟೆಂಬರ್‌ ೨೩ರಂದು ಬಂದ್‌ನ ಆಯೋಜನೆಯಾಗಿತ್ತು. ಇದು ಹಿಂಸಾತ್ಮಕ ತಿರುವು ಪಡೆಯಿತು. ಹಾಗೆಯೇ ಪಕ್ಕದಲ್ಲಿರುವ ತಮಿಳುನಾಡಿನಲ್ಲಿಯೂ ಹಿಂಸಾಚಾರ ನಡೆಸಲಾಯಿತು. ಕೇರಳದ ತಿರುವನಂತಪುರಮ್‌, ಕೊಲ್ಲಮ, ಕೊಝಿಕೊಡ, ವಾಯನಾಡ ಹಾಗೂ ಅಲಪ್ಪುಝಾದೊಂದಿಗೆ ವಿವಿಧ ಜಿಲ್ಲೆಗಳಲ್ಲಿ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಕಲ್ಲುತೂರಾಟ ಮಾಡಲಾಯಿತು. ಬೆಳಿಗ್ಗೆ ಕನ್ನೂರಿನಲ್ಲಿರುವ ನಾರಾಯಣಪಾರಾದಲ್ಲಿ ವಿತರಣೆಗಾಗಿ ವಾರ್ತಾಪತ್ರಿಕೆಗಳನ್ನು ತೆಗೆದುಕೊಂಡು ಹೋಗಲಾಗುವ ವಾಹನದ ಮೇಲೆ ಪೆಟ್ರೋಲ್‌ ಬಾಂಬನ್ನು ಹಾಕಲಾಗಿರುವ ಮಾಹಿತಿಯನ್ನು ಸ್ಥಳೀಯ ಮಾಧ್ಯಮಗಳು ನೀಡಿವೆ.

೧. ಕೊಚಿ ನಗರದಲ್ಲಿ ಸರಕಾರಿ ಬಸ್‌ಗಳನ್ನು ಧ್ವಂಸ ಮಾಡಲಾಯಿತು. ಕೊಲ್ಲಮ ಜಿಲ್ಲೆಯಲ್ಲಿನ ಪಲ್ಲಿಮುಕ್ಕೂದಲ್ಲಿ ಪಿ.ಎಫ್‌.ಐ.ನ ಕಾರ್ಯಕರ್ತರು ಪೊಲೀಸರ ಮೇಲೆ ಆಕ್ರಮಣ ಮಾಡಿದರು. ಇದರಲ್ಲಿ ೨ ಪೊಲೀಸರು ಗಾಯಗೊಂಡಿದ್ದಾರೆ.

೨. ಅಲಾಪ್ಪುಝಾದಲ್ಲಿ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ, ಒಂದು ಟ್ಯಾಂಕರ್‌ ಲಾರಿ ಹಾಗೂ ಇತರ ವಾಹನಗಳ ಮೇಲೆ ಕಲ್ಲುತೂರಾಟ ಮಾಡಿ ಹಾಳು ಮಾಡಲಾಯಿತು.

೩. ಕೊಝಿಕೊಡ ಹಾಗೂ ಕನ್ನೂರಿನಲ್ಲಿ ಪಿ.ಎಫ್‌.ಐ.ನ ಕಾರ್ಯಕರ್ತರು ಮಾಡಿರುವ ಕಲ್ಲುತೂರಾಟದಲ್ಲಿ ೧೫ ವರ್ಷದ ಹುಡುಗಿ ಹಾಘೂ ಓರ್ವ ರಿಕ್ಷಾ ಚಾಲಕ ಗಾಯಗೊಂಡಿದ್ದಾರೆ.

ಸಂಪಾದಕೀಯ ನಿಲುವು

ಕೇರಳದಲ್ಲಿ ಮಾಕಪದ ಮೈತ್ರಿಕೋಟದ ಸರಕಾರ ಇರುವಾಗ ಅದು ಈ ಹಿಂಸಾಚಾರವನ್ನು ಏಕೆ ತಡೆಯಲಿಲ್ಲ ?’ ಎಂಬುದನ್ನು ಉತ್ತರಿಸಬೇಕು !