ಸಂಸ್ಕೃತ ಭಾಷೆಯು ಅತ್ಯಂತ ಸಾತ್ತ್ವಿಕವಾಗಿವೆ ! – ಸಂಶೋಧನೆಯ ನಿಷ್ಕರ್ಷ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಶ್ರೀಲಂಕಾದಲ್ಲಿ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಸಂಶೋಧನಾ ಪ್ರಬಂಧ ಮಂಡನೆ !

ಶ್ರೀ. ಶಾನ್ ಕ್ಲಾರ್ಕ್

ಭಾಷೆಯು ಅಭಿವ್ಯಕ್ತಿಯ ಮತ್ತು ಪರಸ್ಪರ ಸಂವಾದದ ಪ್ರಾಥಮಿಕ ಸಾಧನವಾಗಿರುವುದರಿಂದ, ನಾವು ಮಾತನಾಡುವ ಭಾಷೆಯು ನಮ್ಮ ಜೀವನದ ಬಹುದೊಡ್ಡ ಅಂಗವಾಗಿದೆ. ನಮ್ಮ ಮಾತೃಭಾಷೆ ಯಾವುದಿರಬೇಕು ಎಂಬುದು ನಮ್ಮ ಕೈಯಲ್ಲಿಲ್ಲ; ಆದರೆ ಸಾತ್ತ್ವಿಕ ಭಾಷೆ ಕಲಿಯುವುದು ನಮ್ಮ ಕೈಯಲ್ಲಿದೆ. ಶಿಕ್ಷಣ ಸಂಸ್ಥೆಗಳು ತಮ್ಮ ಪಠ್ಯಕ್ರಮಗಳಿಗೆ ಭಾಷೆಯನ್ನು ಆಯ್ಕೆ ಮಾಡುವಾಗ ಭಾಷೆಯ ಸಾತ್ತ್ವಿಕತೆಯನ್ನು ಮುಖ್ಯ ಮಾನದಂಡವಾಗಿ ಇರಿಸಬಹುದು ಮತ್ತು ಸಂಶೋಧನೆಗೆ ಆಯ್ಕೆಯಾದ ೮ ರಾಷ್ಟ್ರೀಯ ಮತ್ತು ೧೧ ವಿದೇಶಿ ಭಾಷೆಗಳಲ್ಲಿ ‘ಸಂಸ್ಕೃತ’ವು ಅತ್ಯಂತ ಸಾತ್ತ್ವಿಕ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಸಂಶೋಧನೆಯನ್ನು ಮಂಡಿಸಿದರು. ಅವರು ಶ್ರೀಲಂಕಾದಲ್ಲಿ ನಡೆದ ‘ದ ನೈಂಥ್ ಇಂಟರನ್ಯಾಶನಲ್ ಕಾನ್ಫರೆನ್ಸ್ ಆನ್ ಸೋಶಿಯಲ್ ಸೈನ್ಸ್‌ಸ್, ೨೦೨೨’ ಈ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಅವರು ‘ಜಗತ್ತಿನ ಅತ್ಯಂತ ಜನಪ್ರಿಯ ಭಾಷೆಗಳು ಮತ್ತು ಅವುಗಳ ಲಿಪಿಗಳ ಹಿಂದಿನ ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನ’, ಈ ಸಂಶೋಧನಾ ಪ್ರಬಂಧವನ್ನು ಆನ್.ಲೈನ್ ಮೂಲಕ ಮಂಡಿಸಿದರು. ಈ ಪರಿಷತ್ತಿನ ಆಯೋಜನೆಯನ್ನು ಶ್ರೀಲಂಕಾದ ‘ದಿ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಮ್ಯಾನೇಜ್‌ಮೆಂಟ್’ ಮಾಡಿತ್ತು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರಬಂಧದ ಲೇಖಕರಾಗಿದ್ದು ಶ್ರೀ. ಶಾನ್ ಕ್ಲಾರ್ಕ್ ಸಹಲೇಖಕರಾಗಿದ್ದಾರೆ.

ಶ್ರೀ. ಶಾನ್ ಕ್ಲಾರ್ಕ್ ತಮ್ಮ ಮಾತನ್ನು ಮುಂದುವರಿಸುತ್ತಾ, ‘ನಾವು ಯಾರೊಂದಿಗೆ ಸಂವಾದ ಮಾಡುತ್ತಿರುತ್ತೇವೆ’ ಅವರ ಮೇಲೆಯೂ ನಮ್ಮ ಭಾಷೆಯ ಸ್ಪಂದನಗಳ ಪರಿಣಾಮ ಬೀರುತ್ತದೆ. ವ್ಯಾಪಕ ಮಟ್ಟದಲ್ಲಿ, ಸಮಾಜದ ಮುಖ್ಯ ಭಾಷೆಯು ಅಲ್ಲಿಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಭಾಷೆಗಳ ‘ಸ್ಪಂದನಗಳು ಮತ್ತು ವ್ಯಕ್ತಿಗಳ ಮೇಲೆ ಅವುಗಳಿಂದಾಗುವ ಪರಿಣಾಮ’ ಇದರಲ್ಲಿ ಹೇಗೆ ಭಿನ್ನತೆ ಇವೆ ಎಂಬುದನ್ನು ಸ್ಪಷ್ಟಪಡಿಸಲು, ಶ್ರೀ. ಕ್ಲಾರ್ಕ್ ಇವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಊರ್ಜೆ ಹಾಗೂ ಪ್ರಭಾವಳಿಯ ಮಾಪಕ ಯಂತ್ರಗಳು, ಅದೇ ರೀತಿ ಸೂಕ್ಷ್ಮ ಪರೀಕ್ಷಣೆ ಇವುಗಳ ಮಾಧ್ಯಮದಿಂದ ಮಾಡಿದ ಕೆಲವು ಆರಂಭಿಕ ಪರೀಕ್ಷೆಗಳ ಮಾಹಿತಿಯನ್ನು ನೀಡಿದರು. ಮೊದಲ ಪ್ರಯೋಗದಲ್ಲಿ, ‘ಸೂರ್ಯನು ಪೂರ್ವದಲ್ಲಿ ಉದಯಿಸುತ್ತಾನೆ ಮತ್ತು ಪಶ್ಚಿಮದಲ್ಲಿ ಅಸ್ತನಾಗುತ್ತಾನೆ’, ಎಂಬ ಒಂದೇ ವಾಕ್ಯವನ್ನು ೮ ರಾಷ್ಟ್ರೀಯ ಮತ್ತು ೧೧ ವಿದೇಶಿ ಭಾಷೆಗಳಿಗೆ ಅನುವಾದಿಸಲಾಯಿತು. ಪ್ರತಿಯೊಂದು ಭಾಷೆಯ ವಾಕ್ಯವನ್ನು ಪ್ರತ್ಯೇಕವಾಗಿ ಮುದ್ರಿಸಲಾಯಿತು. ಪ್ರತಿ ಮುದ್ರಣದಲ್ಲಿನ ಸೂಕ್ಷ್ಮ ಊರ್ಜೆಯ ಅಭ್ಯಾಸವನ್ನು ಯುನಿವರ್ಸ್‌ಲ್ ಔರಾ ಸ್ಕ್ಯಾನರ್ ಬಳಸಿ ಮಾಡಲಾಯಿತು. ದೇವನಾಗರಿ ಲಿಪಿ ಹೊಂದಿರುವ ಭಾಷೆಗಳು ಇತರ ಭಾಷೆಗಳಿಗೆ ಹೋಲಿಸಿದರೆ ಅತ್ಯಧಿಕ ಸಕಾರಾತ್ಮಕ ಊರ್ಜೆ ಗಮನಕ್ಕೆ ಬಂದಿತು. ತದ್ವಿರುದ್ಧ ಇತರ ಭಾಷೆಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು. ಸಂಸ್ಕೃತ ಭಾಷೆಯ ವಾಕ್ಯದ ಮುದ್ರಣದಲ್ಲಿ ಅತ್ಯಧಿಕ ಸಕಾರಾತ್ಮಕತೆ ಕಂಡುಬಂದಿದೆ. ಇನ್ನೊಂದು ಪರೀಕ್ಷೆಯಲ್ಲಿ ಗಣಕಯಂತ್ರದಲ್ಲಿರುವ ಸಾಮಾನ್ಯ ಅಕ್ಷರಗಳ (ಫಾಂಟ್‌ಗಳ) ತುಲನೆಯಲ್ಲಿ ಮಹರ್ಷಿ ವಿಶ್ವವಿದ್ಯಾಲಯವು ನಿರ್ಮಿಸಿದ ಸಾತ್ತ್ವಿಕ ಅಕ್ಷರಗಳಲ್ಲಿ (ಫಾಂಟ್‌ನಲ್ಲಿ) ಶೇ. ೧೪೬ ರಷ್ಟು ಸಕಾರಾತ್ಮಕ ಊರ್ಜೆ ಕಂಡುಬಂದಿತು.

ಮೂರನೇ ಪರೀಕ್ಷೆಯಲ್ಲಿ, ಮೇಲಿನ ವಾಕ್ಯವನ್ನು ಆಂಗ್ಲ, ಮಂಡರಿನ್ (ಚೀನೀ ಭಾಷೆ) ಮತ್ತು ಸಂಸ್ಕೃತದಲ್ಲಿ ರೆಕಾರ್ಡಿಂಗ್ ಮಾಡಲಾಯಿತು. ಮಂಡರಿನ್ ಮತ್ತು ಆಂಗ್ಲ ಭಾಷೆಯ ರೆಕಾರ್ಡಿಂಗ್‌ಗಳನ್ನು ಕೇಳುವವರ ಮೇಲೆ ನಕಾರಾತ್ಮಕ ಪರಿಣಾಮವಾಯಿತು. ಅವರಲ್ಲಿ ನಕಾರಾತ್ಮಕ ಊರ್ಜೆ ಹೆಚ್ಚಾಗಿ ಸಕಾರಾತ್ಮಕತೆ ನಾಶವಾಯಿತು. ಇದಕ್ಕೆ ವ್ಯತಿರಿಕ್ತವಾಗಿ, ಅವರು ಸಂಸ್ಕೃತ ವಾಕ್ಯದ ಧ್ವನಿಮುದ್ರಣವನ್ನು ಆಲಿಸಿದಾಗ, ಕೇಳುಗರಲ್ಲಿ ನಕಾರಾತ್ಮಕತೆಯು ಗಣನೀಯವಾಗಿ ಕಡಿಮೆಯಾಯಿತು ಮತ್ತು ಸಕಾರಾತ್ಮಕ ಪ್ರಭಾವಲಯವು ನಿರ್ಮಾಣವಾಯಿತು.