
ತಮಿಳುನಾಡಿನ ರಾಮೇಶ್ವರಮ್ ದ್ವೀಪದಲ್ಲಿ ರಾಮನಾಥಸ್ವಾಮಿ ಮಂದಿರವು ಒಂದು ಶಿವಮಂದಿರವಾಗಿದೆ. ಒಂದು ಉಲ್ಲೇಖದ ಪ್ರಕಾರ, ಪ್ರಭು ಶ್ರೀರಾಮನು ರಾವಣ ನೊಂದಿಗಿನ ಯುದ್ಧದಲ್ಲಿ ಸಂಭವಿಸಿದ ಪಾಪದ (ಬ್ರಹ್ಮಹತ್ಯೆ) ಪ್ರಾಯಶ್ಚಿತ್ತಕ್ಕಾಗಿ ಭಗವಾನ್ ಶಂಕರನನ್ನು ಆರಾಧಿಸಿದನು. ಇದು ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಸನಾತನದ ಓರ್ವ ಸ್ತ್ರೀ ಸಂತರಿಗೆ ಶ್ರೀ ರಾಮೇಶ್ವರಮ್ ಮಂದಿರದ ಛಾಯಾಚಿತ್ರ ನೋಡಿ ಅನುಭವಕ್ಕೆ ಬಂದ ಸೂಕ್ಷ್ಮಸ್ತರದ ವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.
– ಸದ್ಗುರು ಡಾ. ಮುಕುಲ ಗಾಡಗೀಳ (೧೧.೨.೨೦೨೫)
೧. ಸನಾತನದ ಓರ್ವ ಸ್ತ್ರೀ ಸಂತರು ಮತ್ತು ಸದ್ಗುರು ಡಾ. ಗಾಡಗೀಳ ಅವರಿಗೆ ಅನುಭವಕ್ಕೆ ಬಂದ ಸೂಕ್ಷ್ಮ ಜ್ಞಾನಕ್ಕೆ ಸಂಬಂಧಿಸಿದ ಚಿತ್ರದಲ್ಲಿನ ಸ್ಪಂದನಗಳ ಪ್ರಮಾಣ

ಅಧೋರೇಖಿತ ಸ್ಪಂದನಗಳ ಪ್ರಮಾಣ ಭಿನ್ನವಿರಲು ಕಾರಣ
ಸನಾತನದ ಕೆಲವು ಸದ್ಗುರುಗಳು, ಸಂತರು ಮತ್ತು ಸಾಧಕರು ಸೂಕ್ಷ್ಮ ಸ್ತರದ ಜ್ಞಾನವನ್ನು ಪಡೆಯುತ್ತಾರೆ. ಸೂಕ್ಷ್ಮ ಜ್ಞಾನಕ್ಕೆ ಸಂಬಂಧಿಸಿದ ಚಿತ್ರದಲ್ಲಿ ಅಧೋರೇಖಿತ ಸ್ಪಂದನಗಳ ಪ್ರಮಾಣವು ಸಾಧಕನ ಆಧ್ಯಾತ್ಮಿಕ ಮಟ್ಟ, ಕಾಲ, ಸೂಕ್ಷ್ಮ ಜ್ಞಾನವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಧಕರು, ಸಂತರು ಮತ್ತು ಸದ್ಗುರು – ಈ ಕ್ರಮದಲ್ಲಿ ವ್ಯಕ್ತಿಯ ಸೂಕ್ಷ್ಮ ಜ್ಞಾನವನ್ನು ಗ್ರಹಿಸುವ ಸಾಮರ್ಥ್ಯವು ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಸಾಧಕರು, ಸಂತರು ಮತ್ತು ಸದ್ಗುರುಗಳಿಗೆ ಪ್ರಾಪ್ತವಾಗುವ ಸೂಕ್ಷ್ಮ ಸ್ಪಂದನಗಳ ಶೇಕಡಾವಾರು ಪ್ರಮಾಣ ಭಿನ್ನ ಇರಬಹುದು.

೧ ಅ. ಶ್ರೀರಾಮ ತತ್ತ್ವ
೧ ಅ ೧. ಶ್ರೀರಾಮತತ್ತ್ವದ ಕಣರೂಪದ ವಲಯವು ಶ್ರೀ ರಾಮೇಶ್ವರಮ್ ದೇವಾಲಯದ ಸುತ್ತಮುತ್ತಲಿನ ಭೂಮಿಯಲ್ಲಿ ಸಕ್ರಿಯವಾಗಿರುವುದು : ಶ್ರೀ ರಾಮೇಶ್ವರಮ್ ದೇವಾಲಯದ ಆವರಣದಲ್ಲಿ ಶ್ರೀರಾಮನು ಸಂಚರಿಸಿದ್ದನು, ಆದ್ದರಿಂದ ಶ್ರೀರಾಮನ ತತ್ತ್ವವು ಇಲ್ಲಿನ ಭೂಮಿಯಲ್ಲಿ ಆಕರ್ಷಿತವಾಗಿದೆ.
೧ ಅ ೨. ಶ್ರೀರಾಮತತ್ತ್ವದ ಕಣರೂಪದ ವಲಯವು ಮಂದಿರದ ಗರ್ಭಗುಡಿಯಲ್ಲಿರುವ ಶಿವಲಿಂಗದ ಸುತ್ತಲೂ ಸಕ್ರಿಯವಾಗಿರುವುದು :
ಭಗವಾನ್ ಶಿವನ ಆರಾಧನೆ ಮಾಡಲು ಶ್ರೀರಾಮನು ಈ ಶಿವಲಿಂಗವನ್ನು ಸ್ಥಾಪಿಸಿದ್ದನು. ಈ ಕಾರಣದಿಂದ ಶ್ರೀರಾಮತತ್ತ್ವದ ವಲಯವು ಮಂದಿರದ ಗರ್ಭಗುಡಿಯಲ್ಲಿರುವ ಶಿವಲಿಂಗದ ಸುತ್ತಲೂ ಸಕ್ರಿಯವಾಗಿದೆ.
೧ ಆ. ಶಿವತತ್ತ್ವ
೧ ಆ ೧. ಶ್ರೀರಾಮತತ್ತ್ವದ ಕಣರೂಪದ ವಲಯವು ಮಂದಿರದ ಗರ್ಭಗುಡಿಯಲ್ಲಿರುವ ಶಿವಲಿಂಗದ ಸುತ್ತಲೂ ಸಕ್ರಿಯವಾಗಿರುವುದು : ಶ್ರೀರಾಮನು ಈ ಶಿವಲಿಂಗವನ್ನು ಸ್ಥಾಪಿಸಿದ್ದನು ಮತ್ತು ಅದರ ಭಾವಪೂರ್ಣ ಪೂಜೆ-ಅರ್ಚನೆ ಮಾಡಿದ್ದನು. ಆದ್ದರಿಂದ ಈ ಶಿವಲಿಂಗದಲ್ಲಿ ಅಪಾರ ಶಿವತತ್ತ್ವವಿದೆ.
೧ ಆ ೨. ಶಿವತತ್ತ್ವದ ವಲಯವು ಮಂದಿರದ ಶಿವಲಿಂಗದಲ್ಲಿ ಸಕ್ರಿಯವಾಗಿರುವುದು
೧ ಆ ೩. ಶಿವತತ್ತ್ವದ ಹನ್ನೆರಡು ವಲಯಗಳು ಮಂದಿರದಲ್ಲಿ ನಿರ್ಮಾಣವಾಗಿ ಸಕ್ರಿಯವಾಗಿರುವುದು : ಶ್ರೀರಾಮನು ಭಗವಾನ್ ಶಿವನ ಭಾವಪೂರ್ಣ ಆರಾಧನೆ ಮಾಡಿದ್ದನು ಹಾಗೂ ಈ ಮಂದಿರಕ್ಕೆ ಬರುವ ಸಾಧುಗಳು, ಸಂತರು ಮತ್ತು ಭಕ್ತರಲ್ಲಿಯೂ ಆಧ್ಯಾತ್ಮಿಕ ಭಾವವಿದೆ. ಈ ಕಾರಣದಿಂದ ಶಿವತತ್ತ್ವದ ಹನ್ನೆರಡು ವಲಯಗಳು ಮಂದಿರದಲ್ಲಿ ನಿರ್ಮಾಣವಾಗಿ ಸಕ್ರಿಯವಾಗಿವೆ. ಇವು ಶಿವನ ವಿವಿಧ ೧೨ ರೂಪಗಳ ೧೨ ವಲಯಗಳಾಗಿವೆ. ಇವುಗಳಲ್ಲಿ ಕೆಲವು ರೂಪಗಳು ತಾರಕ (ಉದ್ಧಾರ ಮಾಡುವಂತಹವು) ಆಗಿವೆ, ಇನ್ನು ಕೆಲವು ರೂಪಗಳು ಮಾರಕ (ದುಷ್ಟರನ್ನು ನಾಶ ಮಾಡುವಂತಹವು) ಆಗಿವೆ. ಆದ್ದರಿಂದ ಕೆಲವು ವಲಯಗಳು ಸಗುಣ ಸ್ತರದ್ದಾಗಿವೆ ಮತ್ತು ಕೆಲವು ವಲಯಗಳು ನಿರ್ಗುಣ ಸ್ತರದ್ದಾಗಿವೆ. (ಸನಾತನದ ಓರ್ವ ಸ್ತ್ರೀ ಸಂತರಿಗೆ ಹನ್ನೆರಡು ಜ್ಯೋತಿರ್ಲಿಂಗಗಳ ವಿಷಯದಲ್ಲಿ ಏನೂ ತಿಳಿದಿಲ್ಲದಿದ್ದರೂ ಸೂಕ್ಷ್ಮ ಪರೀಕ್ಷೆ ಮಾಡುವಾಗ ಧ್ಯಾನಾವಸ್ಥೆಯಲ್ಲಿ ‘೧೨’ ಅಂಕಿ ಕಾಣಿಸಿತು. – ಸಂಕಲನಕಾರರು)
೧ ಇ. ಭಾವ
೧ ಇ ೧. ಆಧ್ಯಾತ್ಮಿಕ ಭಾವದ ಕಣಗಳು ಮಂದಿರದಲ್ಲಿ ಸಕ್ರಿಯ ವಾಗಿರುವುದು : ಮಂದಿರಕ್ಕೆ ದರ್ಶನಕ್ಕಾಗಿ ಬರುವ ಸಂತರು ಮತ್ತು ಭಕ್ತರಲ್ಲಿ ಭಾವವಿದೆ ಹಾಗೂ ಅವರು ಶಿವಲಿಂಗದ ಭಾವಪೂರ್ಣ ಪೂಜೆ-ಅರ್ಚನೆ ಮಾಡುತ್ತಾರೆ. ಆದ್ದರಿಂದ ಮಂದಿರದಲ್ಲಿ ಆಧ್ಯಾತ್ಮಿಕ ಭಾವದ ಕಣಗಳು ಸಕ್ರಿಯವಾಗಿವೆ.
೧ ಈ. ಚೈತನ್ಯ
೧ ಈ ೧. ಚೈತನ್ಯದ ವಲಯವು ಮಂದಿರದ ಸುತ್ತಲೂ ಸಕ್ರಿಯವಾಗಿರುವುದು.
೧ ಈ ೨. ಚೈತನ್ಯದ ವಲಯವು ಮಂದಿರದಿಂದ ವಾತಾವರಣದಲ್ಲಿ ಪ್ರಕಾಶಮಾನ ರೂಪದಲ್ಲಿ ಪ್ರಕ್ಷೇಪಿತವಾಗುವುದು
೨. ಶ್ರೀ ರಾಮೇಶ್ವರಮ್ ಮಂದಿರದ ಬಗ್ಗೆ ಅನುಭವಕ್ಕೆ ಬಂದ ಇತರ ವೈಶಿಷ್ಟ್ಯಗಳು
ಅ. ಶ್ರೀರಾಮನು ಶಿವಲಿಂಗವನ್ನು ಪೂಜಿಸಿದಾಗ, ಸೂಕ್ಷ್ಮದಿಂದ ಭಗವಾನ್ ಶಿವನ ಸ್ವರೂಪವು ಅವರ ಮುಂದೆ ಪ್ರಕಟವಾಯಿತು ಮತ್ತು ಭಗವಾನ ಶಿವನು ಶ್ರೀರಾಮನಿಗೆ ಆಶೀರ್ವಾದ ನೀಡಿದನು.
ಆ. ಸಂತರು ಮತ್ತು ಭಕ್ತರ ಆಧ್ಯಾತ್ಮಿಕ ಭಾವದ ಕಾರಣದಿಂದ ಶ್ರೀ ರಾಮೇಶ್ವರಮ್ ಮಂದಿರ ಕ್ಷೇತ್ರದಲ್ಲಿ ಅನೇಕ ಬಾರಿ ಭಗವಾನ್ ಶಿವನ ಸ್ವರೂಪವು ಸೂಕ್ಷ್ಮದಿಂದ ಪ್ರಕಟವಾಗಿದೆ.
ಇ. ಅತಿ ಪ್ರಾಚೀನ ಕಾಲದಲ್ಲಿ ಕೆಲವು ಸಂತರು ಹಾಡಿದ ಶ್ರೀರಾಮ ಮತ್ತು ಭಗವಾನ್ ಶಿವನ ಭಕ್ತಿಗೀತೆಗಳನ್ನು ಮಂದಿರದಲ್ಲಿ ನುಡಿಸಲಾಗುತ್ತದೆ. ಆದ್ದರಿಂದ ಮಂದಿರದಲ್ಲಿ ಆಕಾಶತತ್ತ್ವವಿದೆ. ಈ ಸಂತರು ಭಕ್ತಿಗೀತೆಗಳನ್ನು ಹಾಡುವಾಗ ಅವರ ಮುಂದೆ ದೇವತೆಗಳು ಪ್ರತ್ಯಕ್ಷರಾಗುತ್ತಿದ್ದರು ಮತ್ತು ಆ ದೇವತೆಗಳೂ ಭಕ್ತಿಗೀತೆಗಳನ್ನು ಹಾಡುತ್ತಿದ್ದರು.
(ಒಂದು ಉಲ್ಲೇಖದ ಪ್ರಕಾರ ಅಪ್ಪರ್, ಸುಂದರರ್ ಮತ್ತು ತಿರುಜ್ಞಾನ ಸಂಬಂಧರ್ ಎಂಬವರು ದಕ್ಷಿಣ ಭಾರತದ ೭ ನೇ ಮತ್ತು ೮ ನೇ ಶತಮಾನದ ಮೂವರು ಪ್ರಮುಖ ಶೈವ ಸಂತರು ಹಾಗೂ ಕವಿಗಳಾಗಿದ್ದರು. ಈ ಸಂತರ ಸ್ತೋತ್ರಗಳು ‘ತೇವಾರಮ್’ ಖಂಡಗಳಲ್ಲಿ ಸಂಕಲನಗೊಂಡಿವೆ. ಕೆಲವು ಸಂಗೀತ ತಜ್ಞರ ಅಭಿಪ್ರಾಯದಂತೆ ತೇವಾರಮ್ ಒಂದು ದೈವೀ ಸಂಗೀತವಾಗಿದೆ. ತೇವಾರಮ್ ಶಿವನ ಸ್ತುತಿ ಮಾಡುವ ಗೀತೆಗಳ ಸಂಗ್ರಹವಾಗಿದೆ. ತಮಿಳುನಾಡಿನ ಶಿವಮಂದಿರಗಳಲ್ಲಿ ಇಂದಿಗೂ ತೇವಾರಮ್ ಸ್ತೋತ್ರಗಳನ್ನು ಹಾಡಲಾಗುತ್ತದೆ. ‘ಮಂದಿರದಲ್ಲಿ ಕೆಲವು ಸಂತರು ಹಾಡಿದ ಶ್ರೀರಾಮ ಮತ್ತು ಭಗವಾನ ಶಿವನ ಭಕ್ತಿಗೀತೆಗಳು ಇವೆ’, ಈ ವಿಷಯದ ಬಗ್ಗೆ ಸನಾತನದ ಓರ್ವ ಸ್ತ್ರೀ ಸಂತರಿಗೆ ಸೂಕ್ಷ್ಮದಿಂದ ನಿಖರವಾದ ಜ್ಞಾನ ಲಭಿಸಿತು. ಇದರಿಂದ ‘ಅವರ ಸೂಕ್ಷ್ಮ ಸ್ತರದಲ್ಲಿ ತಿಳಿಯುವ ಸಾಮರ್ಥ್ಯವು ಎಷ್ಟು ಅಸಾಧಾರಣವಾಗಿದೆ’ ಎಂಬುದು ಗಮನಕ್ಕೆ ಬರುತ್ತದೆ. – ಸಂಕಲನಕಾರರು)
– ಸನಾತನದ ಓರ್ವ ಸ್ತ್ರೀ ಸಂತರು (೧೩.೧೦.೨೦೨೪)
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪವಿಲ್ಲ, ಆಭರಣಗಳೂ ಸುರಕ್ಷಿತವಾಗಿವೆ! – ದೇವಸ್ಥಾನದ ಆಡಳಿತ ಮಂಡಳಿಯ ಸ್ಪಷ್ಟೀಕರಣ : Padmanabhaswamy Temple
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !