ವಾರ್ತಾವಾಹಿನಿಯ ಚರ್ಚಾ ಸತ್ರಗಳಿಂದಾಗು ದ್ವೇಷಭರಿತ ಮತ್ತು ವಿಷ ಕಾರುವ ಹೇಳಿಕೆಗಳ ಪ್ರಕರಣ
ನವದೆಹಲಿ – ವಾರ್ತಾ ವಾಹಿನಿಗಳಲ್ಲಿ ವಿವಿಧ ವಿಷಯಗಳ ಮೇಲಾಗುವ ಚರ್ಚಾ ಸತ್ರಗಳಲ್ಲಿ ಮಾಡಲಾಗುವ ದ್ವೇಷಭರಿತ ಮತ್ತು ವಿಷ ಕಾರುವ ಹೇಳಿಕೆಗಳ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ. “ನಮ್ಮ ದೇಶ ನಿಖರವಾಗಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಎಂಬ ವಿಚಾರಿಸುತ್ತಾ ಮಾಧ್ಯಮಗಳಿಗಾಗಿ ನಿಯಮಾವಳಿ ಇರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗೂ ಕ್ಷುಲ್ಲಕ ಅಂಶ ಎಂದು ಹೇಳುತ್ತಾ ಸರಕಾರವು ಮೂಕಪ್ರೇಕ್ಷಕನಾಗಿರುವುದು ಏಕೆ ? ಎಂದೂ ನ್ಯಾಯಾಲಯವು ಈ ಸಮಯದಲ್ಲಿ ಪ್ರಶ್ನಿಸಿದೆ. ಹಾಗೂ ಸರಕಾರವು ಈ ಪ್ರಕರಣದ ಮುಂದಾಳತ್ವ ವಹಿಸಬೇಕು ಎಂಬ ಸಲಹೆ ಕೂಡ ನೀಡಿದೆ. ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಈ ಪ್ರಕರಣಕ್ಕೆ ಸಂಬಂಧಿತ ಉತ್ತರ ನೀಡಲು ಹೇಳಿದೆ. ದ್ವೇಷಭರಿತ ಅಪರಾಧ ಎದುರಿಸುವುದಕ್ಕೆ ಕಾನೂನು ಆಯೋಗದ ಶಿಫಾರಸಿನ ಮೇರೆಗೆ ಕಾನೂನು ತರುವ ವಿಚಾರ ಏನಾದರೂ ಇದೆಯೇ ? ಎಂದು ಸ್ಪಷ್ಟಪಡಿಸಿ ಎಂಬ ಆದೇಶ ಕೂಡ ನೀಡಿದೆ. ವಾರ್ತಾ ವಾಹಿನಿಗಳ ಮೇಲೆ ದ್ವೇಷಭರಿತ ಹೇಳಿಕೆಯ ಸಂದರ್ಭದಲ್ಲಿ ದಾಖಲಾಗಿರುವ ಒಟ್ಟು ೧೧ ಮನವಿಗಳ ಮೇಲೆ ವಿಚಾರಣೆ ನಡೆಸಲಾಯಿತು. ಇದರಲ್ಲಿ ಸುದರ್ಶನ ನ್ಯೂಸ್ ವಾಹಿನಿಯಲ್ಲಿ ಪ್ರಸಾರ ಮಾಡದಂತೆ ತಡೆಯಲಾದ ಯುಪಿಎಸ್ಸಿ ಜಿಹಾದ್ ಈ ಕಾರ್ಯಕ್ರಮ ಹಾಗೂ ಧರ್ಮ ಸಂಸತ್ತಿನಲ್ಲಿನ ಭಾಷಣವೂ ಒಳಗೊಂಡಿದೆ. ನವೆಂಬರ್ ೨೩ ರಂದು ಈ ಪ್ರಕರಣದ ಬಗ್ಗೆ ಮುಂದಿನ ವಿಚಾರಣೆ ನಡೆಯಲಿದೆ.
भड़काऊ भाषण पर रोक के लिए क्या सरकार कानून लाएगी ?#HateSpeech #SupremeCourtOfIndia #Modigovernment https://t.co/Nvb5q2Dwss
— Prabhat Khabar (@prabhatkhabar) September 22, 2022
೧. ನ್ಯಾಯಾಲಯವು ಈ ಸಮಯದಲ್ಲಿ ಭಾರತದಲ್ಲಿ ದ್ವೇಷಭರಿತ ಭಾಷಣಕ್ಕೆ ಸಂಬಂಧಿತ ಕಾನೂನಿನ ಏರ್ಪಾಡು ಏನಾದರೂ ಇದೆಯೇ? ಎಂದು ವಿಚಾರಣೆ ನಡೆಸಿದೆ. ಮನವಿಕರ್ತರಲ್ಲಿ ಒಬ್ಬರಾಗಿರುವ ನ್ಯಾಯವಾದಿ ಶ್ರೀ ಅಶ್ವಿನಿ ಕುಮಾರ ಉಪಾಧ್ಯಾಯ ಇವರು, ದ್ವೇಷಭರಿತ ಭಾಷಣ ಮತ್ತು ಗಾಳಿ ಸುದ್ದಿ ಹರಡುವ ಸಂಬಂಧದಲ್ಲಿ ಕಾನೂನಿನಲ್ಲಿ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿದರು.
೨. ಈ ಸಂದರ್ಭದಲ್ಲಿ ವಾರ್ತಾವಾಹಿನಿಗಳ ಸಂಘಟನೆಯು ಮುಂದಾಳತ್ವ ವಹಿಸುತ್ತಿದೆ ಎಂದು ಕೇಂದ್ರ ಸರಕಾರದ ನ್ಯಾಯವಾದಿಗಳು ಹೇಳಿದ ನಂತರ, ಇವರಿಗೆ ನೀವು ೪ ಸಾವಿರ ಆದೇಶ ನೀಡಿದ್ದೀರಿ, ಈ ಆದೇಶಗಳಿಂದ ಏನಾದರೂ ಉಪಯೋಗ ಆಗಿದೆಯಾ? ಎಂದು ನ್ಯಾಯಾಲಯವು ಪ್ರಶ್ನಿಸಿದೆ.
೩. ಈ ದ್ವೇಷವನ್ನು ಮುಖ್ಯ ವಾಹಿನಿಯಲ್ಲಿನ ವಾರ್ತಾ ವಾಹಿನಿಗಳು ನಿಲ್ಲಿಸಬಹುದು. ಈ ರೀತಿಯ ಘಟನೆಗಳಿಗೆ ಕಡಿವಾಣ ಹಾಕುವುದಕ್ಕೆ ವಾರ್ತಾವಾಹಿನಿಯ ವಾಚಕರ ಭೂಮಿಕೆಯು ಮಹತ್ವದ್ದಾಗಿರುತ್ತದೆ. ದ್ವೇಷಭರಿತ ಭಾಷೆ ಬಳಸಲಾಗುವುದಿಲ್ಲ ಎಂಬುದರ ಕಾಳಜಿ ಅವರು ತೆಗೆದುಕೊಳ್ಳಬೇಕೆಂದು ನ್ಯಾಯಾಲಯವು ಹೇಳಿದೆ.