ಮೋದಿಯವರಿಗೆ ವಿದೇಶದಲ್ಲಿ ಯಾವುದೇ ಆಸ್ತಿ ಇಲ್ಲ! – ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ್

ಪಾಕಿಸ್ತಾನದ ನಾಯಕರದ್ದು ಮಾತ್ರ ವಿದೇಶಗಳಲ್ಲಿ ಕೋಟಿಗಟ್ಟಲೆ ಸಂಪತ್ತು

ಎಡದಿಂದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಭಾಷಣದಲ್ಲಿ ಮಾತನಾಡುತ್ತಾ ಅವರು, ನರೇಂದ್ರ ಮೋದಿಯವರಿಗೆ ವಿದೇಶದಲ್ಲಿ ಯಾವುದೇ ಆಸ್ತಿ ಇಲ್ಲ. ಆದರೆ ನಮ್ಮ ನಾಯಕರಿಗೆ ಮಾತ್ರ ಇತರ ದೇಶಗಳಲ್ಲಿ ಕೋಟಿಗಟ್ಟಲೆ ಆಸ್ತಿ ಇದೆ’ ಎಂದು ಹೇಳಿದರು, ಈ ಬಾರಿ ಅವರು ಮತ್ತೊಮ್ಮೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಟೀಕಿಸಿದರು.


ಪ್ರಜಾಪ್ರಭುತ್ವವಿರುವ ಮತ್ತು ಆ ಪ್ರಜಾಪ್ರಭುತ್ವವಿರುವ ದೇಶದ ಮುಖ್ಯಸ್ಥರಿಗೆ ದೇಶದಲ್ಲಿ ಮತ್ತು ವಿದೇಶಗಳಲ್ಲಿ ಆಸ್ತಿಯನ್ನು ಹೊಂದಿಲ್ಲದ ದೇಶವನ್ನು ನನಗೆ ತಿಳಿಸಿ ಎಂದು ಖಾನ್ ಹೇಳಿದರು. ಪಾಕಿಸ್ತಾನದ ಪ್ರಧಾನಿ ವಿದೇಶದಲ್ಲಿ ಕೋಟಿಗಟ್ಟಲೆ ರೂಪಾಯಿಗಳ ಆಸ್ತಿ ಮತ್ತು ವ್ಯವಹಾರಗಳನ್ನು ನಿರ್ಮಿಸಿದ್ದಾರೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅವರ ಮಕ್ಕಳು ಯುನೈಟೆಡ್ ಕಿಂಗ್‌ಡಮ್‌ನ ಪಾಸ್ ಪೋರ್ಟ್‌ಗಳನ್ನು ಹೊಂದಿದ್ದಾರೆ. ಇದು ಬಲಾಢ್ಯರಿಗೊಂದು ಕಾನೂನು ಮತ್ತು ದುರ್ಬಲರಿಗೊಂದು ಕಾನೂನನ್ನು ಇದ್ದಾಗ ಮಾತ್ರ ಈ ಅಂತರವು ಉದ್ಭವಿಸುತ್ತದೆ.

ಇಮ್ರಾನ್ ಖಾನ್ ಈ ಹಿಂದೆಯೂ ಭಾರತವನ್ನು ಹೊಗಳಿದ್ದಾರೆ. ಭಾರತವು ನಮ್ಮೊಂದಿಗೆ ಸ್ವತಂತ್ರವಾಯಿತು. ಮೋದಿಯವರು ಪ್ರಾಮಾಣಿಕರಾಗಿದ್ದಾರೆ. ಭಾರತವನ್ನು ಮುನ್ನಡೆಸಲು ಯಾವುದೇ ಮಹಾನ್ ಶಕ್ತಿಯ ಅಗತ್ಯವಿಲ್ಲ. ಯಾರೂ ಅವರನ್ನು ಹೆದರಿಸಲು ಸಾಧ್ಯವಿಲ್ಲ. ನಿರ್ಬಂಧದ ಸಂದರ್ಭದಲ್ಲಿ ಅವರು ರಷ್ಯಾದಿಂದ ತೈಲವನ್ನು ಖರೀದಿಸುತ್ತಿದ್ದಾರೆ, ಇದರಲ್ಲಿಯೇ ಎಲ್ಲವೂ ಬರುತ್ತದೆ ಎಂದು ಕೆಲವು ತಿಂಗಳ ಹಿಂದೆ ಹೇಳಿದ್ದರು.

ಸಂಪಾದಕೀಯ ನಿಲುವು

ಇಮ್ರಾನ್ ಖಾನ್ ಅವರ ಹೇಳಿಕೆಯಿಂದ ಭಾರತದ ವಿರೋಧಿಗುಂಪು ಅವರನ್ನು ’ಬಿಜೆಪಿ ಏಜೆಂಟ್’ ಎಂದು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ !