ಉತ್ತರಪ್ರದೇಶದಲ್ಲಿ ವಕ್ಫ್ ಬೋರ್ಡ್‌ನ ಆಸ್ತಿಗಳ ತನಿಖೆ ನಡೆಸಲಾಗುವುದು !

ಯೋಗಿ ಸರಕಾರ ೩೩ ವರ್ಷ ಹಳೆಯ ಆದೇಶವನ್ನು ರದ್ದುಪಡಿಸಿತು

ಲಕ್ಷ್ಮಣಪುರಿ – ಉತ್ತರಪ್ರದೇಶದ ಯೋಗಿ ಆದಿತ್ಯನಾಥರ ನೇತೃತ್ವದಲ್ಲಿನ ಭಾಜಪ ಸರಕಾರ ರಾಜ್ಯದಲ್ಲಿ ಅಕ್ರಮ ಮದರಸಾಗಳ ಸಮೀಕ್ಷೆಯ ನಂತರ ಈಗ ವಕ್ಫ್ ಬೋರ್ಡ್‌ನ ಆಸ್ತಿಗಳ ತನಿಖೆ ಮಾಡಲಿದೆ. ಎಪ್ರಿಲ್ ೭, ೧೯೮೯ ರಂದು ಕಂದಾಯ ವಿಭಾಗದ ಒಂದು ತಪ್ಪಿನ ಆದೇಶದ ಆಧಾರದಲ್ಲಿ ಬಂಜರು, ವ್ಯರ್ಥ ಇತ್ಯಾದಿ ಸ್ವರೂಪದಲ್ಲಿರುವ ಸಾರ್ವಜನಿಕ ಆಸ್ತಿಗಳನ್ನು ‘ವಕ್ಫ್ ಆಸ್ತಿ’ (ಸ್ಮಶಾನ, ಮಸೀದಿ, ಈದ್ಗಾ) ಎಂದು ಕಂದಾಯದಲ್ಲಿ ನೊಂದಣಿ ಮಾಡಲಾಗಿತ್ತು. (ಸಾರ್ವಜನಿಕ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ಪುಕ್ಕಟೆ ನೀಡಲು ಆದೇಶವನ್ನು ಹೊರಡಿಸುವ ಅಂದಿನ ಅಧಿಕಾರಿಗಳ ಮೇಲೆಯೂ ಕಠೋರ ಕ್ರಮ ತೆಗೆದುಕೊಳ್ಳಬೇಕೆಂದು ಜನತೆಯ ಅಪೇಕ್ಷೆಯಾಗಿದೆ ! – ಸಂಪಾದಕರು) ಈ ಆದೇಶ ಕಂದಾಯ ಕಾನೂನು ಮತ್ತು ವಕ್ಫ್ ಕಾನೂನು ಇವೆರಡರ ವಿರುದ್ಧವಾಗಿತ್ತು. ಇದು ೩೩ ವರ್ಷಗಳ ಹಿಂದಿನ ಆದೇಶವನ್ನು ಸರಕಾರ ರದ್ದುಪಡಿಸಿದೆ.


ಅಲ್ಪಸಂಖ್ಯಾಕ ವಿಭಾಗವು ಎಲ್ಲ ಜಿಲ್ಲೆಗಳ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ‘ಎಪ್ರಿಲ್ ೭, ೧೯೮೯ ರಂದು ಕಂದಾಯ ವಿಭಾಗವು ಹೊರಡಿಸಿದ ನಿಯಮಗಳ ಪ್ರಕಾರ ಆಗಿರುವ ನೊಂದಣಿಯನ್ನು ರದ್ದುಪಡಿಸುವುದರಲ್ಲಿ ಹಾಗೂ ಕಂದಾಯ ನೊಂದಣಿಯಲ್ಲಿ ತಿದ್ದುಪಡಿ ಮಾಡಬೇಕು’, ಎಂದು ಅವರಿಗೆ ಹೇಳಲಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಅಕ್ಟೋಬರ ೮ ರ ವರೆಗೆ ಪೂರ್ಣಗೊಳಿಸಲಾಗುವುದು.

ಸಂಪಾದಕೀಯ ನಿಲುವು

ಉತ್ತರಪ್ರದೇಶ ಸರಕಾರದ ಶ್ಲಾಘನೀಯ ನಿರ್ಣಯ ! ಇಂತಹ ಆದೇಶವನ್ನು ಎಲ್ಲ ರಾಜ್ಯಗಳಲ್ಲಿನ ಸರಕಾರಗಳು ನೀಡುವ ಅವಶ್ಯಕತೆಯಿದೆ !