ನವದೆಹಲಿ – ಇಲ್ಲಿಯ ಸಾಕೇತ ನ್ಯಾಯಾಲಯದಲ್ಲಿ ಕುತುಬ್‌ಮಿನಾರಿನ ಮೇಲೆ ದಾವೆ ಮಾಡಿರುವ ಅರ್ಜಿದಾರ ಕುಂವರ್ ಮಹೇಂದ್ರ ದ್ವಜ ಪ್ರಸಾದ ಸಿಂಹ ಇವರ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಅವರ ಅಭಿಪ್ರಾಯ, ಅವರು ತೋಮರ ರಾಜ ಪರಿವಾರದ ವಂಶಜರಾಗಿದ್ದಾರೆ. ಈ ಮೊದಲು ಈ ರಾಜ ಪರಿವಾರದ ಆಡಳಿತ ಇತ್ತು. ಈ ಪ್ರಕರಣದಲ್ಲಿ ಮುಖ್ಯ ಅರ್ಜಿಯ ಮೇಲೆ ಬರುವ ಅಕ್ಟೋಬರ್ ೧೯ ರಂದು ವಿಚಾರಣೆ ನಡೆಸಲಾಗುವುದು. ಈ ಅರ್ಜಿಯ ಪ್ರಕಾರ ಜೈನ ತೀರ್ಥಂಕರ ವೃಷಭ ದೇವ ಮತ್ತು ಭಗವಾನ್ ವಿಷ್ಣು ಇವರ ವತಿಯಿಂದ ನ್ಯಾಯವಾದಿ ಪೂ. ಹರಿ ಶಂಕರ ಜೈನ ಮತ್ತು ರಂಜನ ಅಗ್ನಿ ಹೋತ್ರಿ ಇವರು ಕುತುಬ್ ಮಿನಾರ್ ಪರಿಸರದಲ್ಲಿ ಪೂಜೆ ಮಾಡಲು ಅಧಿಕಾರ ಕೊರಿದ್ದರು. ಈ ಪರಿಸರದಲ್ಲಿ ಹಿಂದೂ ಮತ್ತು ಜೈನರ ೨೭ ದೇವಸ್ಥಾನಗಳು ಇದ್ದವು. ಈಗ ಅಲ್ಲಿ ದೇವತೆಗಳ ಕೆಲವು ಮೂರ್ತಿಗಳು ಇವೆ. ಈ ದೇವಸ್ಥಾನದ ಜೀರ್ಣೋದ್ಧಾರದ ಬೇಡಿಕೆಯು ಸಹ ಈ ಅರ್ಜಿಯಲ್ಲಿ ಮಾಡಲಾಗಿದೆ.