ಪೊಲೀಸರ ಗುಂಡುಹಾರಾಟದಲ್ಲಿ ೫ ಜನರು ಮೃತಪಟ್ಟರೇ ೮೦ ಕ್ಕಿಂತಲೂ ಹೆಚ್ಚು ಗಾಯಗೊಂಡರು

ಇರಾನ್‌ನಲ್ಲಿ ಹಿಜಾಬ್‌ನ ವಿರುದ್ಧದ ಮಹಿಳೆಯರ ಪ್ರತಿಭಟನೆ

(ಹಿಜಾಬ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಉಪಯೋಗಿಸುವ ವಸ್ತ್ರ)

ತೆಹರಾನ (ಇರಾನ) – ಇರಾನ್‌ನ ಪಶ್ಚಿಮ ಭಾಗದಲ್ಲಿ ಹಿಜಾಬ್‌ನ ವಿರುದ್ಧ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸರು ಮಾಡಿದ ಗುಂಡು ಹಾರಾಟದಲ್ಲಿ ೫ ಜನರು ಮೃತರಾಗಿ ೮೦ ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕುರ್ದಿಸ್ತಾನ ಭಾಗದಲ್ಲಿ ಈ ಪ್ರತಿಭಟನೆ ನಡೆಯುತ್ತಿತ್ತು. ಇಲ್ಲಿನ ಜನರು ಅನೇಕ ವರ್ಷಗಳಿಂದ ಬೇರೆ ದೇಶಕ್ಕಾಗಿ ಬೇಡಿಕೆಯನ್ನು ಮಾಡುತ್ತಿದ್ದಾರೆ. ಹಿಜಾಬ್ ಧರಿಸದ ಕಾರಣ ಪೊಲೀಸರು ಥಳಿಸಿದ್ದರಿಂದ ೨೨ ವರ್ಷದ ಮಹಸಾ ಅಮಿನಿ ಮೃತಪಟ್ಟಿದ್ದಳು. ಅನಂತರ ಇರಾನ್‌ನಲ್ಲಿ ಹಿಜಾಬ್‌ನ ವಿರುದ್ಧ ಮಹಿಳೆಯರಿಂದ ಪ್ರತಿಭಟನೆ ಆರಂಭವಾಗಿದೆ. ‘ಹಿಜಾಬ್ ಅನಿವಾರ್ಯಗೊಳಿಸುವ ಬದಲು ಐಚ್ಛಿಕ ಮಾಡಬೇಕು’, ಎಂಬುದು ಮಹಿಳೆಯರ ಬೇಡಿಕೆಯಾಗಿದೆ.

ಇರಾನ್‌ನಲ್ಲಿ ವಿದೇಶಿ ಪ್ರಸಾರಮಾಧ್ಯಮಗಳ ಮೇಲೆ ನಿರ್ಬಂಧವಿದೆ. ಆದರೂ ಕುರ್ದಿಸ್ತಾನದಲ್ಲಿ ಪೊಲೀಸರ ಅಮಾನವೀಯತೆಯ ವಾರ್ತೆಗಳು ಹೊರಗೆ ಬರುತ್ತಿವೆ. ಸಪ್ಟೆಂಬರ ೧೯ ರ ಸಾಯಂಕಾಲ ತಡವಾಗಿ ಕುರ್ದಿಸ್ತಾನದಲ್ಲಿನ ಮಹಾಬಾದ, ದಿವಾಂದೆರೆ, ಸಾಕೇಜ, ಬುಕಾನ ಸಹಿತ ಅನೇಕ ನಗರಗಳಲ್ಲಿ ಪ್ರತಿಭಟನೆ ಮತ್ತು ಸುರಕ್ಷಾದಳದ ನಡುವೆ ಘರ್ಷಣೆ ಆರಂಭವಾಯಿತು.