ಮುಸಲ್ಮಾನ ತರಗತಿಯಲ್ಲಿನ ಗೆಳತಿಯೊಂದಿಗೆ ವಿವಾಹವಾದ ಕಾರಣ ಹಿಂದೂ ವೈದ್ಯನ ಜೀವಕ್ಕೆ ಅಪಾಯ

ಮತಾಂಧರಿಂದ ಜೀವ ಬೆದರಿಕೆ

ರತಲಾಮ (ಮಧ್ಯಪ್ರದೇಶ) – ತರಗತಿಯ ಮುಸಲ್ಮಾನ ಗೆಳತಿಯೊಂದಿಗೆ ವಿವಾಹವಾಗಿರುವುದರಿಂದ ಹಿಂದೂ ವೈದ್ಯನ ಜೀವಕ್ಕೆ ಅಪಾಯವುಂಟಾಗಿದೆ. ಕೆಲವು ಮತಾಂಧರು ಈ ದಂಪತಿಗಳಿಗೆ ನಿರಂತರ ತೊಂದರೆ ಕೊಡುತ್ತಿದ್ದಾರೆ. ಮೂಲ ನಗರವನ್ನು ತೊರೆದು ಬೇರೆ ಕಡೆಗೆ ಹೋಗಿದ್ದರೂ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಲೇ ಇದೆ. ಪೊಲೀಸರು ಸಹಾಯ ಮಾಡದಿರುವುದರಿಂದ ವೈದ್ಯ ದಂಪತಿಗಳು ರಕ್ಷಣೆಗಾಗಿ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಅನಂತರ ಉಚ್ಚ ನ್ಯಾಯಾಲಯವು ಈ ದಂಪತಿಗಳಿಗೆ ಭದ್ರತೆಯನ್ನು ಪೂರೈಸಲು ಪೊಲೀಸರಿಗೆ ಆದೇಶ ನೀಡಿದೆ. (ಮಾರಣಾಂತಿಕ ಆಕ್ರಮಣವಾಗುತ್ತಿರುವಾಗ ವೈದ್ಯ ದಂಪತಿಗಳು ರಕ್ಷಣೆಗಾಗಿ ನ್ಯಾಯಾಲಯಕ್ಕೆ ಹೋಗುವುದೆಂದರೆ ಇದು ಪೊಲೀಸರಿಗೆ ಲಜ್ಜಾಸ್ಪದ ! – ಸಂಪಾದಕರು)

೧. ಉಜ್ಜೈನ್‌ನಲ್ಲಿನ ನಿವಾಸಿ ವೈದ್ಯ ಭರತ ಶರ್ಮಾ ಇವರು ೨ ವರ್ಷಗಳ ಹಿಂದೆ ಅವರ ತರಗತಿಯ ಮುಸಲ್ಮಾನ ಗೆಳತಿಯೊಂದಿಗೆ ವೈದಿಕ ಪದ್ಧತಿಯಲ್ಲಿ ವಿವಾಹವಾದರು. ಈ ಪ್ರೇಮವಿವಾಹವು ಅವರ ಕುಟುಂಬಕ್ಕೆ ಅಪಾಯವನ್ನು ತಂದಿದೆ.

೨. ಕೆಲವು ಮತಾಂಧರು ಅವರಿಗೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಆದ್ದರಿಂದ ಇಬ್ಬರಿಗೂ ಹಲವಾರು ಬಾರಿ ಸ್ಥಾನಾಂತರ ಮಾಡಬೇಕಾಯಿತು. ಕೆಲವು ತಿಂಗಳ ಹಿಂದೆ ಈ ವೈದ್ಯ ದಂಪತಿ ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ರತಲಾಮಗೆ ತಲಪಿದರು.

೩. ಅವರು ರತಲಾಮಗೆ ಬಂದನಂತರ ಕೆಲವು ದಿನಗಳಲ್ಲಿ ಅವರ ಮೇಲೆ ಎರಡು ಬಾರಿ ಆಕ್ರಮಣ ಮಾಡಲು ಪ್ರಯತ್ನ ನಡೆಯಿತು. ಈ ಆಕ್ರಮಣದಲ್ಲಿ ಇಬ್ಬರೂ ಸ್ವಲ್ಪದರಲ್ಲಿ ಪಾರಾದರು.

೪. ವೈದ್ಯ ದಂಪತಿಯು ಅನೇಕ ಬಾರಿ ಪೊಲೀಸ್ ಅಧಿಕಾರಿಗಳಿಂದ ರಕ್ಷಣೆಯನ್ನು ಕೇಳಿದರು. ಪೊಲೀಸ್ ಅಧಿಕಾರಿಗಳು ಯಾವುದೇ ಭದ್ರತೆಯನ್ನು ನೀಡದಿದ್ದಾಗ ವೈ. ಶರ್ಮಾ ಇವರು ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳಿದರು.

ಸಂಪಾದಕೀಯ ನಿಲುವು

ಯಾವಾಗ ಹಿಂದೂ ಯುವತಿ ಮುಸಲ್ಮಾನನೊಂದಿಗೆ ವಿವಾಹವಾದಾಗ ಅದಕ್ಕೆ ‘ಪ್ರೇಮವಿವಾಹ’ ಎಂದು ಹೇಳಿ ಅದನ್ನು ವಿರೋಧಿಸುವ ಹಿಂದೂಗಳಿಗೆ ಉಪದೇಶ ಮಾಡುವ ಜಾತ್ಯತೀತರಿಗೆ ಈ ವಿಷಯದಲ್ಲಿ ಏನು ಹೇಳಲಿಕ್ಕಿದೆ ?