ಕಾಶ್ಮೀರಿ ಹಿಂದೂಗಳ ಹತ್ಯೆಯ ವಿಚಾರಣೆಗಾಗಿ ಬೇಡಿಕೆಯನ್ನು ಮಾಡುವ ಅರ್ಜಿಯ ಆಲಿಕೆಗೆ ಸರ್ವೋಚ್ಚ ನ್ಯಾಯಾಲಯದಿಂದ ನಿರಾಕಾರಣೆ

ನವದೆಹಲಿ – ಜಮ್ಮು-ಕಾಶ್ಮೀರದಿಂದ ಕಾಶ್ಮೀರಿ ಹಿಂದೂಗಳ ಪಲಾಯನ ಮತ್ತು ಅವರ ಹತ್ಯೆಯ ವಿಚಾರಣೆಯ ಬೇಡಿಕೆಯನ್ನು ಮಾಡುವ ಅರ್ಜಿಯ ಬಗ್ಗೆ ವಿಚಾರ ಮಾಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿತು. ನ್ಯಾಯಾಲಯ ಅರ್ಜಿದಾರ ಅಶುತೋಷ ಟಪಲೂ ಇವರಿಗೆ ಅರ್ಜಿಯನ್ನು ಹಿಂತೆಗೆದುಕೊಂಡು ಅದಕ್ಕೆ ಯೋಗ್ಯವಾದ ಉಪಾಯವನ್ನು ಹುಡುಕಲು ಹೇಳಿದರು. ಅಶುತೋಷ ಟಪಲೂ ಇವರ ತಂದೆ ಟೀಕಾಲಾಲ ಟಪಲೂ ಇವರನ್ನು ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್‌ನ ಭಯೋತ್ಪಾದಕರು ಗುಡು ಹೊಡೆದು ಕೊಲೆ ಮಾಡಿದ್ದರು.

ಸಂಪಾದಕೀಯ ನಿಲುವು

ಕಳೆದ ೩ ದಶಕಗಳಲ್ಲಿ ಯಾವುದೇ ಆಡಳಿತದವರು ಕಾಶ್ಮೀರಿ ಹಿಂದೂಗಳ ಪಲಾಯನ ಮತ್ತು ಅವರ ಹತ್ಯೆಯ ವಿಚಾರಣೆ ಮಾಡುವ ವಿಷಯದಲ್ಲಿ ಒಂದು ಶಬ್ದವನ್ನೂ ಮಾತನಾಡಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !