ಇರಾನ್‌ನಲ್ಲಿ ಮುಂದುವರಿದ ಹಿಜಾಬ್‌ವಿರೋಧಿ ಆಂದೋಲನ

ಕೂದಲು ಕತ್ತರಿಸಿ, ಹಾಗೂ ಹಿಜಾಬನ್ನು ಸುಟ್ಟು ನಿಷೇಧ !

(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಉಪಯೋಗಿಸುವ ವಸ್ತ್ರ)

ತೆಹರಾನ (ಇರಾಣ)– ಇರಾನ್‌ನಲ್ಲಿ ಹಿಜಾಬ್‌ಗಾಗುತ್ತಿರುವ ವಿರೋಧವು ದಿನೇದಿನೇ ಹೆಚ್ಚುತ್ತಿದೆ. ಹಿಜಾಬನ್ನು ಕಡ್ಡಾಯಗೊಳಿಸುವ ಕೆಲವು ಕಾರ್ಯಕರ್ತರಿಂದಾದ ಹೊಡೆತದಲ್ಲಿ ಇರಾನ್‌ನಲ್ಲಿ ಮಹಿಸಾ ಅಮಿನಿ ಎಂಬ ೨೨ ವರ್ಷದ ಯುವತಿಯು ಮೃತಳಾದಳು. ಅನಂತರ ಪ್ರಚಂಡ ವಿರೋಧವಾಗುತ್ತಿದೆ. ಅವಳ ಅಂತ್ಯಕ್ರಿಯೆಯ ಸಮಯದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲಾಯಿತು. ಇರಾನೀ ಮಹಿಳೆಯರು ಹಿಜಾಬ್ ತೆಗೆದುಹಾಕಿ ಪ್ರತಿಭಟಿಸುತ್ತಿದ್ದಾರೆ. ಈ ಮಹಿಳೆಯರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಆಗ ಕೆಲವು ಮಹಿಳಾ ಆಂದೋಲನಕಾರರು ತಮ್ಮ ಕೂದಲನ್ನು ಕತ್ತರಿಸಿ ಹಿಜಾಬ್ ಎಸೆಯುತ್ತಾ ಅದಕ್ಕೆ ಬೆಂಕಿ ಹಚ್ಚಿದರು. ೭ ವರ್ಷಕ್ಕಿಂತ ಮೇಲಿನ ಎಲ್ಲ ಸ್ತ್ರೀಯರಿಗೆ ಹಿಜಾಬ್ ಕಡ್ಡಾಯ ಎಂದು ಇರಾನ್ ಸರಕಾರವು ಕಾನೂನನ್ನು ಮಾಡಿರುವುದರ ನಿಷೇಧಾರ್ಥ ಈ ಪ್ರತಿಭಟನೆಯನ್ನು ಅಲ್ಲಲ್ಲಿ ಮಾಡಲಾಗುತ್ತಿದೆ.

ಸಂಪಾದಕೀಯ ನಿಲುವು

ಇರಾನ್ ಇಸ್ಲಾಮೀ ದೇಶವಾಗಿರುವಾಗ ಅಲ್ಲಿನ ಮುಸಲ್ಮಾನ ಮಹಿಳೆಯರು ಹಿಜಾಬ್‌ನ ಕಡ್ಡಾಯಕ್ಕೆ ವಿರೋಧಿಸುತ್ತಿದ್ದಾರೆ ! ಆದರೆ ಭಾರತವು ಇಸ್ಲಾಮೀ ದೇಶವಲ್ಲದಿದ್ದರೂ ಇಲ್ಲಿನ ಮುಸಲ್ಮಾನರು ಮಹಿಳೆಯರು ಹಿಜಾಬ್ ಅನ್ನು ಸಮರ್ಥಿಸುತ್ತಿದ್ದಾರೆ.