ವಿದ್ಯಾರ್ಥಿಗಳು ತಿಲಕ ಇಟ್ಟು ಕೊಂಡಿರುವುದರಿಂದ ಕೋಪಗೊಂಡಿರುವ ಮತಾಂಧ ಶಿಕ್ಷಕನು ದೇವಸ್ಥಾನ ಮುಚ್ಚಿಸಿದನು !

ಮಿರ್ಝಾಪುರ (ಉತ್ತರಪ್ರದೇಶ) ಇಲ್ಲಿನ ಘಟನೆ !

ಹಿಂದೂಗಳನ್ನು ದ್ವೇಷಿಸುತ್ತಿರುವದರ ಶಿಕ್ಷಕನ ಮೇಲೆ ಆರೋಪ !

ಮಿರ್ಝಾಪುರ (ಉತ್ತರ ಪ್ರದೇಶ) – ಇಲ್ಲಿಯ ಲಾಲಗಂಜನಲ್ಲಿರುವ ಬಾಪು ಉಪರೌಧ ಮಹಾವಿದ್ಯಾಲಯದಲ್ಲಿ ಕಲಿಯುವ ಕೆಲವು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ತಮ್ಮ ಹಣೆಯ ಮೇಲೆ ಚಂದನದ ತಿಲಕ ಇಟ್ಟುಕೊಂಡಿರುವುದರಿಂದ ಮಹಾವಿದ್ಯಾಲಯದ ಉಸ್ತುವಾರಿ (ತತ್ಕಾಲಿನ ವ್ಯವಸ್ಥೆ ನೋಡಿಕೊಳ್ಳುವವರು) ಪ್ರಾಧ್ಯಾಪಕರಾದ ಮಹಮ್ಮದ್ ಕಾಸಿಫ್ ಇವರು ಅವರ ಮೇಲೆ ಕೋಪಗೊಂಡರು. ಆ ಸಮಯದಲ್ಲಿ ಮಹಾವಿದ್ಯಾಲಯದ ಪರಿಸರದಲ್ಲಿರುವ ದೇವಸ್ಥಾನ ಮುಚ್ಚಿಸಿದರು. ಈ ಘಟನೆ ಸ್ಟೆಂಬರ ೮ ರಂದು ನಡೆದಿದ್ದೂ ಅದರ ನಂತರ ಮುಂದಿನ ೩ ದಿನ ದೇವಸ್ಥಾನ ಮುಚ್ಚಲಾಗಿತ್ತು. ಪ್ರಧಾನ ಪ್ರಾಧ್ಯಾಪಕರಾದ ಧರ್ಮಜೀತ ಸಿಂಹ ಹಿಂತಿರುಗಿದ ನಂತರ ಅರ್ಚಕರು ನಡೆದಿರುವ ಪ್ರಕರಣ ಹೇಳಿದರು. ಸಿಂಹ ಇವರು ‘ಘಟನೆಯ ವಿಚಾರಣೆ ನಡೆಸಿ ಕಾಸಿಫ ಇವರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು’, ಎಂದು ಆಶ್ವಾಸನೆ ನೀಡಿದರು.

೧. ಪ್ರಧಾನ ಪ್ರಾಧ್ಯಾಪಕರಾದ ಧರ್ಮಜಿತ್ ಸಿಂಹ ಇವರ ಅನುಪಸ್ಥಿತಿಯಲ್ಲಿ ಮಹಮ್ಮದ್ ಕಾಸಿಫ ಈ ಶಿಕ್ಷಕನಿಗೆ ತತ್ಕಾಲಿನ ಪ್ರಾಧ್ಯಾಪಕರೆಂದು ಅಧಿಕಾರ ಇತ್ತು.

೨. ಅರ್ಚಕರು, ‘ಕಾಸಿಫ ಇವರು ದೇವಸ್ಥಾನ ಮುಚ್ಚುವ ಆದೇಶ ನೀಡಿದ ನಂತರ ೫೦ ವರ್ಷದಲ್ಲಿ ಇದೇ ಮೊದಲು ಬಾರಿಗೆ ದೇವಸ್ಥಾನ ಮುಚ್ಚಲಾಗಿದೆ’, ಎಂದು ಹೇಳಿದರು.

೩. ಅರ್ಚಕರು, ಮಹಮ್ಮದ್ ಕಾಸಿಫ ಇವರಿಗೆ, ಯಾವ ದಿನ ನನ್ನ ಹತ್ತಿರ ಮಹಾವಿದ್ಯಾಲಯದ ಅಧಿಕಾರ ಇರುತ್ತದೆ, ಆ ಸಮಯದಲ್ಲಿ ಮಹಾವಿದ್ಯಾಲಯದ ಸಮಯ ಮುಗಿದ ನಂತರವೇ ದೇವಸ್ಥಾನದ ಬಾಗಿಲು ತೆರೆಯಿರಿ ಮತ್ತು ಅಲ್ಲಿಯವರೆಗೆ ಮುಚ್ಚಿರಿ, ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.

೪. ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಲೇ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಘಟನಾ ಸ್ಥಳಕ್ಕೆ ತಲುಪಿದರು. ಅವರು ಈ ಘಟನೆಯನ್ನು ಖಂಡಿಸಿದರು. ‘ಕಾಸಿಫ ಇವರು ಹಿಂದೂಗಳನ್ನು ದ್ವೇಷಿಸುತ್ತಾರೆ’, ಎಂದು ಅವರ ಮೇಲೆ ಆರೋಪ ಕೂಡ ಮಾಡಲಾಯಿತು.

೫. ವಿಶ್ವ ಹಿಂದೂ ಪರಿಷತ್ತಿನ ಜೊತೆಗೆ ಸ್ಥಳೀಯ ಜನರು ಧರ್ಮ ಪಾಲಸಿಂಹ ಇವರ ಹತ್ತಿರ ಕಾಸಿಫ್ ಇವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಕಾಸಿಫ ಮಾತ್ರ ಅವರ ಮೇಲೆ ಮಾಡಲಾಗಿರುವ ಎಲ್ಲಾ ಆರೋಪಗಳು ತಳ್ಳಿ ಹಾಕಿದ್ದಾರೆ.

ಸಂಪಾದಕೀಯ ನಿಲುವು

ಈ ರೀತಿಯ ಘಟನೆ ನಡೆಯಲು ಇದು ಭಾರತವೊ ಅಥವಾ ಪಾಕಿಸ್ತಾನವೊ ? ಹಿಂದೂಗಳಲ್ಲಿನ ಸಂಘಭಾವದ ಅಭಾವದಿಂದ ಯಾರಬೇಕಾದರೂ ಹಿಂದೂಗಳ ದೇವಸ್ಥಾನ ಮುಚ್ಚಿಸುವುದು. ಇದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !