ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿ ‘ಆರ್ಗನೈಸರ್’ನ ಪತ್ರಕರ್ತನಿಗೆ ಶಿರಚ್ಛೇದ ಬೆದರಿಕೆ

ಇಸ್ಲಾಂ ವಿರೋಧದಲ್ಲಿ ಪ್ರಸಾರ ನಿಲ್ಲಿಸಲು ಬೆದರಿಕೆ

ಗಾಝಿಯಾಬಾದ್ (ಉತ್ತರಪ್ರದೇಶ) – ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿಯಾಗಿರುವ ‘ಆರ್ಗನೈಸರ್’ ನ ಪತ್ರಕರ್ತ ನಿಶಾಂತ ಆಜಾದ್ ಇವರಿಗೆ ಅಜ್ಞಾತರಿಂದ ಶಿರಚ್ಛೇದದ ಬೆದರಿಕೆ ನೀಡಲಾಗಿದೆ. ವಾಟ್ಸಅಪ್‌ಗೆ ಸಂದೇಶ ಕಳುಹಿಸಿ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

೧. ಬೆದರಿಕೆಯ ಸಂದೇಶದಲ್ಲಿ, ‘ಮಹಮ್ಮದ್ ಪೈಗಂಬರನನ್ನು ಅವಮಾನ ಮಾಡುವುದರ ಒಂದೆ ಶಿಕ್ಷೆ ಅದು ಎಂದರೆ ಶಿರಚ್ಛೇದ. ಇಸ್ಲಾಮಿನ ವಿರುದ್ಧದ ಪ್ರಸಾರ ನಿಲ್ಲಿಸಿರಿ. ಹಿಂದುತ್ವ ನಿಷ್ಠರನ್ನು ಬೆಂಬಲಿಸಿದರೆ ಶಿರಶ್ಚೇಧ ಮಾಡಲಾಗುವುದು.’ ಈ ಸಮಯದಲ್ಲಿ ನಿಶಾಂತ ಇವರು ಬೆದರಿಕೆ ನೀಡುವವನ ಮಾಹಿತಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿರುವಾಗ ಆತ, ‘ನಾನು ನಿಮ್ಮ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದೇನೆ. ಇದೇ ರೀತಿ ಅವಮಾನಕಾರಿ ಲೇಖನ ಬರೆದರೆ, ಅದರ ಪರಿಣಾಮ ಅನುಭವಿಸಬೇಕಾಗುತ್ತದೆ.’ ಎಂದು ಹೇಳಿದ. ಆ ಸಮಯದಲ್ಲಿ ಅವನು ಕನ್ಹಯ್ಯ ಲಾಲ್ ಮತ್ತು ಉಮೇಶ ಕೊಲ್ಹೆ ಇವರ ಉಲ್ಲೇಖ ಮಾಡಿದನು. ಇವರಿಬ್ಬರೂ ಪೈಗಂಬರರ ತಥಾ ಕಥಿತ ಅವಮಾನ ಮಾಡಿರುವುದರ ಬಗ್ಗೆ ಅವರನ್ನು ಮತಾಂಧರು ಹತ್ಯೆ ಮಾಡಿದ್ದಾರೆ.

೨. ಕಾಂಗ್ರೆಸ್ ಕೆಲವು ದಿನಗಳ ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಖಾಕಿ ಚಡ್ಡಿಯ ಛಾಯಾಚಿತ್ರ ಪೋಸ್ಟ್ ಮಾಡಿ ಅದು ಒಂದು ಮೂಲೆಯಲ್ಲಿ ಉರಿಯುತ್ತಿರುವುದು ತೋರಿಸಿದರು. ಅದಕ್ಕೆ ನಿಶಾಂತ ಇವರು ವಿರೋಧ ಮಾಡುವ ಪೋಸ್ಟ್ ಪ್ರಸಾರಗೊಳಿಸಿದರು. ಈ ಪೋಸ್ಟ್ ಈ ಬೆದರಿಕೆ ನೀಡುವವನು ಕಳುಹಿಸಿ ನಿಶಾಂತ ಇವರಿಗೆ ಬೆದರಿಕೆ ನೀಡಿದರು.

ಸಂಪಾದಕೀಯ ನಿಲುವು

ಈಗ ಹಿಂದುತ್ವದ ಪರ ಇರುವ ಪತ್ರಕರ್ತರಿಗೆ ಈ ರೀತಿಯ ಬೆದರಿಕೆ ನೀಡಲಾಗುತ್ತಿದೆ. ಇದನ್ನು ಸರಕಾರ ಗಂಭೀರವಾಗಿದೆ ತೆಗೆದುಕೊಂಡು ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !