ದಸರಾದ ಉತ್ಸವದಲ್ಲಿ ಅಶ್ಲೀಲ ನೃತ್ಯ ಹಾಗೂ ಗೀತೆಗಳನ್ನು ಬಾರಿಸುವುದಕ್ಕೆ ನಿರ್ಬಂಧ !

ಮದ್ರಾಸ್ ಉಚ್ಚ ನ್ಯಾಯಾಲಯದಿಂದ ತಮಿಳನಾಡು ರಾಜ್ಯಕ್ಕೆ ಆದೇಶ

ಮದ್ರಾಸ್ ಉಚ್ಚ ನ್ಯಾಯಾಲಯ

ಚೆನ್ನೈ (ತಮಿಳನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಮುಂಬರುವ ದಸರಾದಲ್ಲಿ ಅಶ್ಲೀಲ ನೃತ್ಯ ಹಾಗೂ ಗೀತೆಗಳನ್ನು ಬಾರಿಸುವುದರ ವಿರುದ್ಧ ನಿರ್ಬಂಧ ಹೇರಿದೆ. ಯಾರಾದರೂ ಹಾಗೆ ಮಾಡಲು ಪ್ರಯತ್ನಿಸಿದರೆ ಅವರ ವಿರುದ್ಧ ಸೂಕ್ತ ಕ್ರಮತೆಗೆದುಕೊಳ್ಳಬೇಕು, ಎಂದು ಪೊಲೀಸರಿಗೆ ಆದೇಶ ನೀಡಿದೆ. ಈ ವಿಷಯದಲ್ಲಿ ದಾಖಲಿಸಿದ ಅರ್ಜಿಯ ಆಲಿಕೆ ಮಾಡುವಾಗ ನ್ಯಾಯಾಲಯ ಈ ನಿರ್ಣಯವನ್ನು ನೀಡಿತು. ‘ದಸರಾದಲ್ಲಿ ಆಯೋಜಕರು ಮತ್ತು ಸಂಗೀತ ವ್ಯವಸ್ಥೆಯನ್ನು ಪೂರೈಸುವವರಿಗೆ ಭಕ್ತಿಗೀತೆಗಳ ಹೊರತು ಇತರ ಹಾಡುಗಳನ್ನು ಬಾರಿಸಬಾರದು ಹಾಗೂ ಅಶ್ಲೀಲ ನೃತ್ಯಗಳನ್ನು ಮಾಡಬಾರದು’, ಎಂದು ಆದೇಶ ನೀಡಬೇಕೆಂದು ಒತ್ತಾಯಿಸಲಾಗಿತ್ತು. ‘ಇದರ ಮೂಲಕ ಲಕ್ಷಗಟ್ಟಲೆ ಭಕ್ತರು ಸಾಂಪ್ರದಾಯಿಕ ಸಂಸ್ಕೃತಿ ಹಾಗೂ ಧಾರ್ಮಿಕ ಭಾವನೆಯನ್ನು ರಕ್ಷಿಸಬೇಕು’, ಎಂದು ಹೇಳಲಾಗಿತ್ತು.

ಸಂಪಾದಕೀಯ ನಿಲುವು

ಇದನ್ನು ನ್ಯಾಯಾಲಯವು ಏಕೆ ಹೇಳಬೇಕಾಗುತ್ತದೆ ? ಉತ್ಸವ ಆಚರಿಸುವ ಹಿಂದೂಗಳಿಗೆ ಇದು ತಿಳಿಯುವುದಿಲ್ಲವೇ ?