ಹಿಂದೂಗಳಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ !
ವಾರಣಾಸಿ – ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮತ್ತು ಶೃಂಗಾರ ಗೌರಿ ಸಂದರ್ಭದಲ್ಲಿನ ಮೋಕೊದ್ದಮೆ ಮುಂದುವರೆಸಲಾಗುವುದು, ಎಂದು ಇತ್ತಿಚೆಗೆ ತೀರ್ಪು ನೀಡಿದೆ. ಇದರ ನಂತರ ಇದಕ್ಕೆ ಮುಸಲ್ಮಾನ ಪಕ್ಷ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಈ ಸಂದರ್ಭದಲ್ಲಿ ಹಿಂದೂ ಪಕ್ಷದಿಂದ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ. ಅದರಲ್ಲಿ ‘ಹಿಂದೂಗಳ ಪಕ್ಷ ಕೇಳದೆ ನಿರ್ಣಯ ನೀಡಬಾರದೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಇವರು ಈ ವಿಷಯದ ಮಾಹಿತಿ ನೀಡಿದರು.
ಜ್ಞಾನವಾಪಿಯಲ್ಲಿ ಉರೂಸ್ ಆಚರಿಸಲು ಮುಸಲ್ಮಾನರಿಂದ ನ್ಯಾಯಾಲಯಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
(ಉರುಸ್ ಎಂದರೆ ಯಾವುದಾದರೂ ಮುಸಲ್ಮಾನ್ ಧರ್ಮ ಗುರುವಿನ ಪುಣ್ಯತಿಥಿಯ ಪ್ರಯುಕ್ತ ಆಯೋಜಿಸುವ ಉತ್ಸವ)
ಮುಸಲ್ಮಾನ ಪಕ್ಷದಿಂದ ಈ ಸಂದರ್ಭದಲ್ಲಿ ಇನ್ನೊಂದು ಅರ್ಜಿಯನ್ನು ಈ ಮೊದಲೇ ದಿವಾಣಿ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಅದಕ್ಕನುಸಾರ ಜ್ಞಾನವಾಪಿ ಪರಿಸರದಲ್ಲಿನ ೩ ಗೋರಿಯ ಮೇಲೆ ಶಾಲು ಹೊದಿಸಲು ಮತ್ತು ಅದರ ಜೊತೆ ಉರುಸ್ ಮುಂತಾದ ಅನ್ಯ ಧಾರ್ಮಿಕ ಕೃತಿ ನಡೆಸಲು ಅನುಮತಿ ಕೇಳಲಾಗಿತ್ತು. ಇದರ ಬಗ್ಗೆ ಬರುವ ಅಕ್ಟೋಬರ್ ೩ ರಂದು ವಿಚಾರಣೆ ನಡೆಯುವುದು.