ರೋಹಿಂಗ್ಯಾ ವಲಸಿಗರಿಂದಾಗಿ ಬಾಂಗ್ಲಾದೇಶದ ಭದ್ರತೆ ಮತ್ತು ಸ್ಥಿರತೆಯ ಮೇಲೆ ಪರಿಣಾಮ ! – ಶೇಖ್ ಹಸೀನಾ

ಢಾಕಾ – ಬಾಂಗ್ಲಾದೇಶದಲ್ಲಿ ೧೦ ಲಕ್ಷ ರೋಹಿಂಗ್ಯಾ ವಲಸಿಗರು ದೀರ್ಗಕಾಲದಿಂದ ನೆಲೆಸಿರುವುರಿಂದ ಬಾಂಗ್ಲಾದೇಶದ ಅರ್ಥವ್ಯವಸ್ಥೆ, ಭದ್ರತೆ, ಸಾಮಾಜಿಕ ಹಾಗೂ ರಾಜಕೀಯ ಸ್ಥಿರತೆಯ ಮೇಲೆ ಕೆಟ್ಟ ಪರಿಣಾಮವಾಗುತ್ತಿದೆ, ಎಂದು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಇತ್ತೀಚೆಗೆ ಹೇಳಿಕೆ ನೀಡಿದರು. ಬಾಂಗ್ಲಾದೇಶ ಮತ್ತು ಅಮೇರಿಕಾ ಆಯೋಜಿಸಿದ ಇಂಡೋ-ಪೆಸಿಫಿಕ್ ಕ್ಷೇತ್ರದಲ್ಲಿನ ೨೪ ದೇಶಗಳ ಸೈನ್ಯಾಧಿಕಾರಿಗಳ ಮೂರು ದಿನಗಳ ಸಭೆಯಲ್ಲಿ ಶೇಖ್ ಹಸೀನಾ ಮಾತನಾಡುತ್ತಿದ್ದರು. ‘ರೋಹಿಂಗ್ಯಾ ವಲಸಿಗರ ಪ್ರಶ್ನೆಯನ್ನು ನಿವಾರಿಸಲು ಬಾಂಗ್ಲಾದೇಶ ಒತ್ತುಕೊಡುವುದು’, ಎಂದು ಅವರು ಹೇಳಿದರು. (ದೇಶದ ಭದ್ರತೆಗೆ ಸರ್ವೋತ್ತಮ ಆದ್ಯತೆಯನ್ನು ನಿಡುವ ಶೇಖ್ ಹಸೀನಾ ಇವರಿಂದ ಭಾರತೀಯ ರಾಜಕಾರಣಿಗಳು ಪಾಠಕಲಿಯುವರೆ ? – ಸಂಪಾದಕರು)

ಬಾಂಗ್ಲಾದೇಶದ ಸೈನ್ಯದ ಜನರಲ್ ಎಸ್.ಎಮ್. ಶಫೀಉದ್ದೀನ ಇವರು, ಈ ಪರಿಷತ್ತಿನಲ್ಲಿ ಭಾಗವಹಿಸಿದ ಅಮೇರಿಕಾ, ಚೀನಾ, ಭಾರತ, ಆಸ್ಟ್ರೇಲಿಯಾ, ಕೆನಡಾ, ಜಪಾನ್, ಇಂಡೋನೇಶಿಯಾ ಮತ್ತು ವಿಯೆತ್‌ನಾಮ್ ಈ ದೇಶಗಳಲ್ಲಿನ ಅಧಿಕಾರಿಗಳನ್ನು ರೋಹಿಂಗ್ಯಾ ವಲಸಿಗರ ಛಾವಣಿಗೆ ಕರೆದುಕೊಂಡು ಹೋಗಿ ಅವರಿಗೆ ಪರಿಸ್ಥಿತಿಯನ್ನು ಅರಿವು ಮೂಡಿಸಲಾಗುವುದು.