ವ್ಯಾಯಾಮ ಶಿಕ್ಷಕನು ಬಲಾತ್ಕಾರ ಮಾಡಿದ ಎಂದು ತೆಲುಗು ಚಲನಚಿತ್ರದ ನಟಿಯಿಂದ ಪೊಲೀಸರಲ್ಲಿ ದೂರು ದಾಖಲು !

ಶಿಕ್ಷಕನ ಬಂಧನ

ಮುಂಬಯಿ – ಓರ್ವ ತೆಲುಗು ಚಲನಚಿತ್ರದ ನಟಿಯು ಆದಿತ್ಯ ಕಪೂರ್ ಎಂಬ ವ್ಯಾಯಾಮ ಶಿಕ್ಷಕನ (‘ಜಿಮ್ ಟ್ರೈನರ್’ನ) ವಿರುದ್ಧ ಅನೇಕ ಸಾರಿ ಬಲಾತ್ಕಾರ ಮಾಡಿದ್ದಾನೆಂದು ಹಾಗೂ ಜೀವ ಬೆದರಿಕೆ ನೀಡಿದ್ದಾನೆಂದು ಆರೋಪಿಸುತ್ತಾ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ದೂರು ದಾಖಲಿಸಿ ಕೊಂಡು ಕಪೂರ್‌ನನ್ನು ಬಂಧಿಸಿದ್ದಾರೆ.

ಮುಂಬಯಿಯ ಕಫ ಪರೇಡ್ ಪೊಲೀಸ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ೨೪ ವರ್ಷದ ನಟಿಯು, ‘ಆಗಸ್ಟ್ ೨೦೨೧ ರಲ್ಲಿ ನಾನು ಮತ್ತು ಆದಿತ್ಯ ಕಪೂರ್ ಮೊದಲ ಸಲ ಭೇಟಿ ಮಾಡಿದೆವು. ಮುಂದೆ ಕಪೂರನು ನನ್ನ ಜೊತೆ ವಿವಾಹ ಮಾಡಿಕೊಳ್ಳುವ ಆಶ್ವಾಸನೆ ನೀಡಿ ನನ್ನ ಜೊತೆಗೆ ಶಾರೀರಿಕ ಸಂಬಂಧ ಬೆಳೆಸಿದನು. ಅದರ ನಡುವೆ ಕಪೂರ್ ನನಗೆ ಥಳಿಸಿದನು ಹಾಗೂ ‘ನಾನು ಪೊಲೀಸರಲ್ಲಿ ದೂರ ದಾಖಲಿಸುವ ಪ್ರಯತ್ನ ಮಾಡಿದರೆ ನನ್ನ ಅಶ್ಲೀಲ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳಿಸುವೆನೆಂದು ಬೆದರಿಕೆ ನೀಡಿದ್ದನು, ಹಾಗೂ ನನಗೆ ಜೀವ ಬೆದರಿಕೆ ಸಹ ನೀಡಿದ್ದನು. ಕೊನೆಗೆ ನಟಿ ತನ್ನ ತಂದೆ-ತಾಯಿಗೆ ಎಲ್ಲಾ ವಿಷಯ ತಿಳಿಸಿ ಪೊಲೀಸರಲ್ಲಿ ದೂರ ದಾಖಲಿಸಿದಳು.