ಗರಬಾ ಮಂಟಪಕ್ಕೆ ನುಗ್ಗಿದರೆ ಕೈಕಾಲು ಮುರಿಯುವೆವು ! – ಬಜರಂಗ ದಳದಿಂದ ಮುಸಲ್ಮಾನರಿಗೆ ಎಚ್ಚರಿಕೆ

ಇಂದೂರ್ – ಮುಂದಿನ ಕೆಲವೆ ದಿನಗಳಲ್ಲಿ ನವರಾತ್ಯುತ್ಸವ ಆರಂಭವಾಗಲಿದೆ. ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಗರಬಾ ಆಯೋಜಿಸಿ ಶ್ರೀ ದುರ್ಗಾದೇವಿಯ ಪೂಜೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮಂತ್ರಿ ಉಷಾ ಠಾಕೂರ್ ಇವರು ‘ಗರಬಾ ಆಡಲು ಬರುವವರ ಗುರುತಿನ ಚೀಟಿಯನ್ನು ನೋಡಿ ಅವರಿಗೆ ಪ್ರವೇಶವನ್ನು ನೀಡಿರಿ’, ಎಂದು ಹೇಳಿದ್ದಾರೆ. ಅನಂತರ ಬಜರಂಗದಳದ ಕಾರ್ಯಕರ್ತರು ಉಷಾ ಠಾಕೂರ್ ಇವರ ಹೇಳಿಕೆಯ ಕೆಲವೇ ಗಂಟೆಯಲ್ಲಿಯೆ ‘ಗರಬಾ ಮಂಟಪದಲ್ಲಿ ನುಗ್ಗಿದರೆ ಕೈಕಾಲು ಮುರಿಯುತ್ತೇವೆ’, ಎಂದು ಮುಸಲ್ಮಾನರಿಗೆ ಎಚ್ಚರಿಕೆ ನೀಡಿದ್ದಾರೆ.

೧. ಬಜರಂಗ ದಳ, ಮುಸಲ್ಮಾನ ಸಮಾಜದವರು ಗರಬಾ ಮಂಟಪದಿಂದ ದೂರವಿರಬೇಕು; ಏಕೆಂದರೆ ಮುಸಲ್ಮಾನ ಯುವಕರು ವಿವಿಧ ಮಾರ್ಗಗಳ ಮೂಲಕ ಪ್ರವೇಶ ಮಾಡುತ್ತಾರೆ ಹಾಗೂ ಹಿಂದೂ ಹುಡುಗಿಯರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ‘ಲವ್ ಜಿಹಾದ್’ ಮಾಡುತ್ತಾರೆ ಎಂದು ಹೇಳಿದರು.

೨. ಈ ಹಿಂದೆ ಇಂತಹ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಬಜರಂಗದಳದ ವಿಭಾಗ ಸಮನ್ವಯಕ ತನ್ನೂ ಶರ್ಮಾ ಇವರು, ‘ಗರಬಾ ಮಂಟಪದಲ್ಲಿ ಮುಸಲ್ಮಾನ ಯುವಕರು ಕಾಣಿಸಿದರೆ ಅವನು ೨ ಕಾಲುಗಳಿಂದ ಬರುವನು; ಆದರೆ ನಾಲ್ಕು ಹೆಗಲ ಮೇಲಿಂದ ಹೋಗುವನು.’ ಎಂದು ಹೇಳಿದರು.

ಬಜರಂಗದಳ ಗರಬಾ ಮಂಟಪದಲ್ಲಿ ‘ಲವ್ ಜಿಹಾದ್’ನ ವಿಷಯದಲ್ಲಿ ಜಾಗೃತಿ ಮೂಡಿಸುವ ಫಲಕವನ್ನು ಹಾಕಲಾಗುವುದು

ಮುಂಬರುವ ಕೆಲವೇ ದಿನಗಳಲ್ಲಿ ಇಂದೂರ್‌ನಲ್ಲಿ ಎಲ್ಲ ಗರಬಾ ಮಂಟಪದಲ್ಲಿ ‘ಲವ್ ಜಿಹಾದ್’ನ ವಿಷಯದಲ್ಲಿ ಜಾಗೃತಿ ಮಾಡುವ ಹಾಗೂ ಮುಸಲ್ಮಾನ ಯುವಕರ ಪ್ರವೇಶ ನಿಶೇಧಿಸುವ ವಿಷಯದಲ್ಲಿ ಫಲಕವನ್ನು ಹಚ್ಚಲಾಗುವುದು. ನವರಾತ್ಯುತ್ಸವದ ಕಾಲದಲ್ಲಿ ನಗರದಲ್ಲಿನ ಗರಬಾ ಮಂಡಪಗಳಲ್ಲಿ ಬಜರಂಗದಳದ ಕಾರ್ಯಕರ್ತರನ್ನು ಭದ್ರತೆಗಾಗಿ ನೇಮಕ ಮಾಡಲಾಗುವುದು, ಎಂದು ಕೂಡ ತನ್ನೂ ಶರ್ಮಾ ಇವರು ಹೇಳಿದರು.