ತಮಿಳನಾಡುವಿನಲ್ಲಿ ಹಿಂದೂ ಬಹುಸಂಖ್ಯಾಕರಿರುವ ಸಂಪೂರ್ಣ ಗ್ರಾಮವನ್ನೆ ವಕ್ಫ್ ಬೋರ್ಡ್ ತನ್ನ ಮಾಲಿಕತ್ವ ಹೇಳಿತು !

ಚೆನ್ನೈ (ತಮಿಳುನಾಡು) – ತಮಿಳನಾಡು ವಕ್ಫ್ ಬೋರ್ಡ್ ರಾಜ್ಯದ ತಿರುಚಿರಾಪಲ್ಲಿ ಜಿಲ್ಲೆಯ ತಿರುಚೆಂದೂರೈ ಈ ಸಂಪೂರ್ಣ ಗ್ರಾಮವನ್ನೆ ತನ್ನ ಮಾಲಿಕತ್ವವೆಂದು ತೋರಿಸಿದೆ.

ತಮಿಳ ದೈನಿಕ ‘ದಿನಮಲಾರ’ದಲ್ಲಿ ನೀಡಿರುವ ವಾರ್ತೆಗನುಸಾರ,

೧. ತಿರುಚೆಂದುರೈ ಗ್ರಾಮದಲ್ಲಿ ಕೃಷಿಭೂಮಿ ಆಗಿರುವ ಮುಲ್ಲಿಕಾರುಪುರದಲ್ಲಿನ ರಾಜಗೋಪಾಲ ಇವರು ತಮ್ಮ ೧ ಎಕರೆ ಕೃಷಿಭೂಮಿಯನ್ನು ರಾಜರಾಜೇಶ್ವರಿ ಇವರಿಗೆ ಮಾರಾಟ ಮಾಡಲು ಒಪ್ಪಂದ ಮಾಡಿದ್ದರು. ಅದಕ್ಕಾಗಿ ಅವರು ನೊಂದಣಿ ಕಾರ್ಯಾಲಯದಲ್ಲಿ ೩ ಲಕ್ಷದ ೫೦ ಸಾವಿರ ರೂಪಾಯಿಗಳ ಖರೀದಿ ಒಪ್ಪಂದವನ್ನು ನೊಂದಣಿ ಮಾಡಲು ಹೋಗಿದ್ದಾಗ ‘ಈ ಭೂಮಿ ತಮಿಳನಾಡು ವಕ್ಫ್ ಬೋರ್ಡ್‌ಗೆ ಸೇರಿದ್ದು ಇದನ್ನು ನೊಂದಣಿ ಮಾಡಲು ಸಾಧ್ಯವಿಲ್ಲ. ಭೂಮಿಯನ್ನು ಮಾರಾಟ ಮಾಡಲು ಚೆನ್ನೈಯಲ್ಲಿನ ತಮಿಳುನಾಡು ವಕ್ಫ್ ಬೋರ್ಡ್‌ನ ಕಾರ್ಯಾಲಯದಿಂದ ‘ಎನ್.ಒ.ಸಿ.’ ತೆಗೆದುಕೊಳ್ಳಬೇಕಾಗುತ್ತದೆ’, ಎಂದು ಸಬ್-ರಿಜಿಸ್ಟ್ರಾರ್ ಹೇಳಿದರು.

೨. ರಾಜಗೋಪಾಲ ಇವರು ‘೧೯೯೨ ರಲ್ಲಿ ಖರೀದಿ ಮಾಡಿರುವ ಭೂಮಿಯನ್ನು ಮಾರಾಟ ಮಾಡಲು ವಕ್ಫ್ ಬೋರ್ಡ್‌ನಿಂದ ಎನ್.ಒ.ಸಿ. ತೆಗೆದುಕೊಳ್ಳುವ ಅವಶ್ಯಕತೆಯೇನಿದೆ ?’, ಎಂದು ಕೇಳಿದರು. ಆಗ ಸಬ್-ರಿಜಿಸ್ಟ್ರಾರ್‌ರವರು, ‘ತಿರುಚೆಂದುರೈ ಗ್ರಾಮದಲ್ಲಿ ಯಾವುದೇ ಭೂಮಿಯನ್ನು ಖರೀದಿ-ಮಾರಾಟ ಮಾಡಲಿಕ್ಕಿದ್ದರೆ, ವಕ್ಫ್ ಬೋರ್ಡ್‌ನ ಅನುಮತಿ ಪಡೆಯಬೇಕಾಗುತ್ತದೆ. ವಕ್ಫ್ ಬೋರ್ಡ್ ಸಂಪೂರ್ಣ ಗ್ರಾಮ ಅವರ ಒಡೆತನದ್ದಾಗಿದೆಯೆಂದು ಕಾಗದಪತ್ರಗಳ ಸಹಿತ ನೊಂದಣಿ ವಿಭಾಗಕ್ಕೆ ಪತ್ರವನ್ನು ಕಳುಹಿಸಿದೆ ಹಾಗೂ ಯಾರು ಆ ಗ್ರಾಮದಲ್ಲಿ ಭೂಮಿಗಾಗಿ ಒಪ್ಪಂದಪತ್ರವನ್ನು ಮಾಡಲು ಬರುವವರು ಬೋರ್ಡ್‌ನಿಂದ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ.’ ಈ ವಿಷಯದಲ್ಲಿ ೨೫೦ ಪುಟಗಳ ವಕ್ಫ್ ಬೋರ್ಡ್‌ನ ಪತ್ರದ ಪ್ರತಿಯನ್ನೂ ಅವರಿಗೆ ತೋರಿಸಲಾಯಿತು. ಆ ಪತ್ರದಲ್ಲಿ ವಕ್ಫ್ ಬೋರ್ಡ್ ತಮಿಳುನಾಡುವಿನ ಸಾವಿರಾರು ಎಕರೆ ಭೂಮಿಯನ್ನು ತನ್ನದೆಂದು ಹೇಳಿದೆ.

ಬಹುಸಂಖ್ಯಾತ ಹಿಂದೂಗಳಿರುವ ಗ್ರಾಮದಲ್ಲಿ ವಕ್ಫ್ ಬೋರ್ಡ್‌ನ ಅಧಿಕಾರ ಹೇಗೆ ? – ಭಾಜಪ

ಭಾಜಪದ ಮುಖಂಡ ಅಲ್ಲೂರ ಪ್ರಕಾಶ ಇವರು, ತಿರುಚೆಂದುರೈ ಗ್ರಾಮವು ಕಾವೇರಿ ನದಿಯ ದಕ್ಷಿಣ ತೀರದಲ್ಲಿರುವ ಒಂದು ನಯನರಮ್ಯ ಕೃಷಿ ಗ್ರಾಮವಾಗಿದೆ. ಅಲ್ಲಿ ಹಿಂದೂಗಳು ಬಹುಸಂಖ್ಯೆಯಲ್ಲಿದ್ದಾರೆ. ವಕ್ಫ್ ಬೋರ್ಡ್ ಮತ್ತು ತಿರುಚೆಂದುರೈ ಗ್ರಾಮಕ್ಕೆ ಏನು ಸಂಬಂಧವಿದೆ ? ಅಲ್ಲಿ ಮನೋದಿಯಾವಲ್ಲಿ ಸಮೇಥಾ ಚಂದ್ರಶೇಖರ ಸ್ವಾಮಿ ಮಂದಿರವಿದೆ. ಈ ಮಂದಿರ ೧ ಸಾವಿರದ ೫೦೦ ವರ್ಷಗಳಷ್ಟು ಪುರಾತನವಾಗಿದೆಯೆಂದು ವಿವಿಧ ಕಾಗದಪತ್ರಗಳು ಮತ್ತು ಪುರಾವೆ ಸಹಿತ ಸಾಬೀತಾಗುತ್ತದೆ. ತಿರುಚೆಂದುರೈ ಗ್ರಾಮದ ಒಳಗೆ ಮತ್ತು ಹೊರಗೆ ಎರಡೂ ಸ್ಥಳದಲ್ಲಿ ಮಂದಿರದ ೩೬೯ ಎಕರೆ ಭೂಮಿ ಇದೆ. ಈ ಮಂದಿರದ ಭೂಮಿಯೂ ವಕ್ಫ್ ಬೋರ್ಡ್‌ಗೆ ಹೇಗೆ ಸೇರುತ್ತದೆ ?

ಗ್ರಾಮದ ವ್ಯಕ್ತಿಯಲ್ಲಿ ಭೂಮಿಯ ಕಾಗದಪತ್ರಗಳಿರುವಾಗ ಯಾವುದೇ ಪುರಾವೆ ಇಲ್ಲದೆ ವಕ್ಫ್ ಬೋರ್ಡ್ ಆ ಆಸ್ತಿ ತನ್ನದೆಂದು ಹೇಗೆ ಘೋಷಣೆ ಮಾಡಲು ಹೇಗೆ ಸಾಧ್ಯ ? ವಕ್ಫ್ ಬೋರ್ಡ್ ಭೂಮಿ ತನ್ನದೆಂದು ದಾವೆ ಹೂಡುವ ಪತ್ರವನ್ನು ನೀಡಿದರೂ ವಕ್ಫ್ ಬೋರ್ಡ್‌ನ ದಾವೆಯನ್ನು ತಪಾಸಣೆ ಮಾಡದೆ ನೊಂದಣಿ ಮಾಡದಂತೆ ಆದೇಶವನ್ನು ನೊಂದಣಿ ವಿಭಾಗದ ಮೇಲಧಿಕಾರಿ ಕೊಡಲು ಹೇಗೆ ಸಾಧ್ಯ ? ಎಂದು ಹೇಳಿದರು.

ಸಂಪಾದಕೀಯ ನಿಲುವು

ತಮಿಳನಾಡುವಿನಲ್ಲಿ ದ್ರಾವಿಡ ಮುನ್ನೇತ್ರ ಕಳಘಮ್ (ದ್ರಾವಿಡ ಪ್ರಗತಿ ಸಂಘ)ಪಕ್ಷದ ಸರಕಾರವಿದೆಯೆ ಅಥವಾ ವಕ್ಫ್ ಬೋರ್ಡಿನದ್ದಿದೆಯೇ ?