ಪಾಕಿಸ್ತಾನದ ಸರಕಾರವು ನೆರೆ ಹಾವಳಿ ಪ್ರದೇಶದ ಹಿಂದೂಗಳನ್ನು ಆಶ್ರಯದಿಂದ ಹೊರ ಹಾಕಿದ್ದಾರೆ !

ಈ ಘಟನೆಯ ವಾರ್ತೆಯನ್ನು ಪ್ರಸಾರ ಮಾಡಿದ ಪಾಕಿಸ್ತಾನಿ ಪತ್ರಕರ್ತನ ಬಂಧನ

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಬಂದಿರುವ ನೆರೆಹಾವಳಿಯಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿಯ ಸಿಂಧ ಪ್ರಾಂತದಲ್ಲಿನ ನೆರೆಯಲ್ಲಿ ಸಿಲುಕಿರುವ ಹಿಂದೂಗಳ ದುರಾವಸ್ತೆಯ ವಿಷಯವಾಗಿ ವಾರ್ತೆಯನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಪಾಕಿಸ್ತಾನವು ನಸರಲ್ಲಾಹ ಗದ್ದಾನಿ ಎಂಬ ಒಬ್ಬ ಪತ್ರಕರ್ತನನ್ನು ಬಂಧಿಸಿದ್ದಾರೆ. ಅವನಿಗೆ ಐದು ದಿನಗಳ ಕಾಲ ಪೊಲೀಸ್ ಕೊಠಡಿಯಲ್ಲಿ ಸಹ ಇರಿಸಲಾಗಿದೆ.

ಗದ್ದಾನಿಯು ಸಿಂಧ ಪ್ರಾಂತದ ಮೀರಪುರು ಮಥೇಲೋದಲ್ಲಿನ ಹಿಂದೂಗಳ ಭಾಗರಿ ಸಮಾಜದಲ್ಲಿನ ಜನರ ದುರಾವಸ್ಥೆಯ ವಾರ್ತೆಯನ್ನು ಪತ್ರಿಕೆಯಲ್ಲಿ ಪ್ರಸಿದ್ಧಿಗೊಳಿಸಿದ್ದರು. ಗದ್ದಾನಿ ಇವರು ಅವರ ವಾರ್ತೆಯಲ್ಲಿ, ಭಾಗರಿ ಸಮಾಜದಲ್ಲಿನ ಜನರು ಹಿಂದೂ ಆಗಿರುವುದರಿಂದ ಅವರಿಗೆ ಸ್ಥಳೀಯ ಆಡಳಿತವು ನೆರೆಹಾವಳಿಯಲ್ಲಿನ ಶಿಬಿರಗಳಿಂದ ‘ಅವರು ನೆರೆಹಾವಳಿಯಲ್ಲಿ ಸಿಲುಕಿದವರಲ್ಲ’ ಎಂದು ಹೇಳುತ್ತಾ ಶಿಬಿರಗಳಿಂದ ಹೊರತೆಗೆಯಲಾಗುತ್ತಿದೆ ಎಂದು ಹೇಳಿದರು. ಭಗರಿ ಸಮಾಜದ ಹಿಂದೂಗಳ ದುಸ್ಥಿತಿ ಹೇಳುವ ಒಂದು ವಿಡಿಯೋ ಕೂಡ ಪ್ರಸಾರ ಮಾಡಲಾಗಿತ್ತು. ಇದರಲ್ಲಿ ಹಿಂದೂ ‘ಅವರನ್ನು ಸರಕಾರವು ಅಲ್ಲಿಂದ ಏಕೆ ಹೊರ ತೆಗೆದಿದ್ದಾರೆ ?’, ಇದರ ಮಾಹಿತಿ ನೀಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಒಂದು ಕಡೆಗೆ ಪಾಕಿಸ್ತಾನದಲ್ಲಿನ ಹಿಂದೂಗಳು ಅವರ ದೇವಸ್ಥಾನದಲ್ಲಿ ೩೦೦ ಕ್ಕೂ ಹೆಚ್ಚಿನ ಮುಸಲ್ಮಾನರಿಗೆ ಆಶ್ರಯ ನೀಡಿದ್ದಾರೆ ಹಾಗೂ ಇನ್ನೊಂದು ಕಡೆಗೆ ಸರಕಾರ ಹಿಂದೂಗಳನ್ನು ಶಿಬಿರದಿಂದ ಹೊರತೆಗೆಯುತ್ತಿದ್ದಾರೆ ! ಇದರಿಂದ ಪಾಕಿಸ್ತಾನದ ಮಾನಸಿಕತೆ ಅರ್ಥವಾಗುತ್ತದೆ ! ಹಾವಿಗೆ ಎಷ್ಟೇ ಹಾಲು ಕುಡಿಸಿದರು ಅದು ವಿಷವೇ ಕಾರುವುದು, ಇದು ಹಿಂದೂಗಳಿಗೆ ಅರ್ಥವಾಗುವ ದಿನವೆ ಸುದಿನ !