ಡಾ. ಸ್ವಾಮಿ ಪಂಡರಪುರದಲ್ಲಿನ ವಿಠಲ ದೇವಸ್ಥಾನವನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ಅಕ್ಟೋಬರ್ ೭ ರಂದು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸುವರು

ಪಂಡರಪುರದಲ್ಲಿನ ವಿಠಲ ದೇವಸ್ಥಾನವನ್ನು ಸರಕಾರಿಕರಣದಿಂದ ಮುಕ್ತಗೊಳಿಸುವುದಕ್ಕಾಗಿ ಡಾ. ಸುಬ್ರಹ್ಮಣ್ಯಂ ಸ್ವಾಮಿ ಇವರ ನ್ಯಾಯಾಂಗ ಹೋರಾಟ !

ನವ ದೆಹಲಿ – ಬರುವ ಅಕ್ಟೋಬರ್ ೭ ರಂದು ಭಾಜಪದ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯಂ ಸ್ವಾಮಿ ಇವರು ಪಂಡರಪುರದಲ್ಲಿನ ವಿಠಲ ದೇವಸ್ಥಾನವನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸುವವರಿದ್ದಾರೆ. ನವದೆಹಲಿಯಲ್ಲಿ ಈ ಸಂದರ್ಭದಲ್ಲಿ ಸಪ್ಟೆಂಬರ್ ೧೧ ರಂದು ಕಾನೂನು ತಜ್ಞರ ಜೊತೆಗೆ ನಡೆದ ಸಭೆಯ ನಂತರ ಡಾ. ಸ್ವಾಮಿ ಘೋಷಿಸಿದರು.

ಭಾಜಪದ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯಂ ಸ್ವಾಮಿ

ಕಾನೂನ ತಜ್ಞ ಸತ್ಯ ಸಬ್ರವಾಲ್ ಮತ್ತು ಕಾನೂನ ವಿಶೇಷಜ್ಞ ಕೊನೋಡಿಯಾ ಇವರ ಮೂಲಕ ಈ ಅರ್ಜಿ ದಾಖಲಿಸಲಾಗುವುದು. ಅದರ ನಂತರ ಅಕ್ಟೋಬರ್ ೯ ರಂದು ಡಾ. ಸ್ವಾಮಿ ಪಂಡರಪುರಕ್ಕೆ ಭೇಟಿ ನೀಡುವವರಿದ್ದಾರೆ. ಈ ಸಮಯದಲ್ಲಿ ಅವರು ವಾರಕರಿ ಸಂಪ್ರದಾಯ ಮತ್ತು ವಿಠ್ಠಲ ಭಕ್ತರ ಸಭೆ ಕೂಡ ನಡೆಸುವರು.

ಸಂಪಾದಕೀಯ ನಿಲುವು

ದೇಶದಲ್ಲಿನ ಕೋಟ್ಯಾಂತರ ಹಿಂದೂ ಮತ್ತು ಅದರ ಸಂಘಟನೆಗಳ ಪೈಕಿ ಕೇವಲ ಡಾ. ಸ್ವಾಮಿ ಇವರು ಒಬ್ಬರೇ ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !