ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾಜಪಾದಿಂದ ಕಾಂಗ್ರೆಸ್‌ನ ಮೇಲೆ ಟೀಕೆ !
ತಿರುವನಂತಪುರಂ (ಕೇರಳ) – ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಇವರು ‘ಭಾರತ ಜೋಡೋ ಯಾತ್ರೆ’ ಪ್ರಾರಂಭಿಸಿರುವಾಗ ಕಾಂಗ್ರೆಸ್ ನಿಂದ ಅದರ ಟ್ವೀಟರ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿರುವುದರು ಬಗ್ಗೆ ವಿವಾದ ನಿರ್ಮಾಣವಾಗಿದೆ. ಈ ಪೋಸ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಖಾಕಿ ಚಡ್ಡಿಯ ಚಿತ್ರ ಇದ್ದು ಅದಕ್ಕೆ ಒಂದು ಮೂಲೆಯಲ್ಲಿ ಬೆಂಕಿ ಹತ್ತಿರುವುದು ತೋರಿಸಲಾಗಿದೆ. ಇದರ ಬಗ್ಗೆ ಚಿತ್ರದ ಮೇಲೆ, ‘ದೇಶಕ್ಕೆ ದ್ವೇಷದ ಬಲೆಯಿಂದ ಮುಕ್ತ ಮಾಡುವುದಕ್ಕಾಗಿ ಮತ್ತು ಭಾಜಪ ಮತ್ತು ಸಂಘ ಇವರು ಮಾಡಿರುವ ನಷ್ಟ ಭರಿಸಲು ನಾವು ನಿಧಾನವಾಗಿ ನಮ್ಮ ಉದ್ದೇಶ ಕಡೆಗೆ ತಲುಪುತ್ತೇವೆ’ ದೇಶಕ್ಕೆ ಸಂಘದ ದ್ವೇಷದಿಂದ ಮುಕ್ತಗೊಳಿಸುವುದಕ್ಕಾಗಿ ಕೇವಲ ೧೪೫ ದಿನ ಬಾಕಿ ಉಳಿದಿದೆ. ಮುಂಬರುವ ೧೪೫ ದಿನಗಳು ಭಾರತ ಜೋಡೋ ಯಾತ್ರೆ ಮುಂದುವರೆಯುವುದು ಎಂದು ಬರೆಯಲಾಗಿದೆ.
#Congress slams BJP-RSS through ‘Khaki’ shorts tweet https://t.co/jVJDjBKtnh pic.twitter.com/Pt5G3M1Xj8
— The Times Of India (@timesofindia) September 12, 2022
ಕಾಂಗ್ರೆಸ್‌ನ ಪೂರ್ವಜರು ಸಂಘವನ್ನು ತಿರಸ್ಕರಿಸಿದರೂ ಸಂಘ ಬೆಳೆಯುತ್ತಾ ಹೋಯಿತು ! – ರಾಷ್ಟ್ರೀಯ ಸ್ವಯಂಸೇವಕ ಸಂಘ
ಕಾಂಗ್ರೆಸ್ಸಿನ ಈ ಪೋಸ್ಟ್ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರತ್ಯುತ್ತರ ನೀಡಿದೆ. ಸಂಘದ ಸಹಕಾರ್ಯವಾಹ ಡಾ. ಮನಮೋಹನ ವೈದ್ಯ ಇವರು, “ಅವರು ಜನರಿಗೆ ದ್ವೇಷದಿಂದ ಜೋಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಅವರ ಪೂರ್ವಜರು ಕೂಡ ಸಂಘವನ್ನು ತುಂಬಾ ತಿರಸ್ಕರಿಸಿದ್ದರು. ಸಂಘವನ್ನು ನಿಲ್ಲಿಸಲು ಪೂರ್ಣ ಶಕ್ತಿಯನ್ನು ಹಾಕಿ ಪ್ರಯತ್ನಿಸಿದರು, ಆದರೆ ಸಂಘ ನಿಲ್ಲಲಿಲ್ಲ ಅದು ಸತತವಾಗಿ ಬೆಳೆಯುತ್ತಾ ಹೋಯಿತು.” ಎಂದು ಹೇಳಿದರು.
೧೯೮೪ ರಲ್ಲಿ ಕಾಂಗ್ರೆಸ್ ಬೆಂಕಿ ದೆಹಲಿಯನ್ನು ಸುಟ್ಟಿತು – ಸಂಸದ ತೇಜಸ್ವಿ ಸೂರ್ಯ
ದಕ್ಷಿಣ ಬೆಂಗಳೂರಿನ ಭಾಜಪಾದ ಸಂಸದ ತೇಜಸ್ವಿ ಸೂರ್ಯ ಇವರು, “೧೯೮೪ ರಲ್ಲಿ ಕಾಂಗ್ರೆಸ್ ಬೆಂಕಿ ದೆಹಲಿಯನ್ನು ಸುಟ್ಟಿತು. ಕಾಂಗ್ರೆಸ್ಸಿನ ಈ ದ್ವೇಷದ ಮನಸ್ಥಿತಿಯಿಂದ ಪೋಷಿಸಿರುವವರಿಂದ ೨೦೦೨ ರಲ್ಲಿ ಗೋದ್ರಾದಲ್ಲಿ ಕಾರ ಸೇವಕರನ್ನು ಜೀವಂತವಾಗಿ ಸುಟ್ಟರು. ಈಗ ಮತ್ತೊಮ್ಮೆ ಕಾಂಗ್ರೆಸ್ಸಿನವರು ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ರಾಹುಲ್ ಗಾಂಧಿ ಭಾರತ ಸರಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಅವರ ನೇತೃತ್ವದ ಕಾಂಗ್ರೆಸ್ ಸಂವಿಧಾನದ ಮೇಲೆ ವಿಶ್ವಾಸ ಇರದೆ ಇರುವ ಪಕ್ಷ ಆಗಿದೆ.” ಎಂದು ಹೇಳಿದರು.
ಸಂಪಾದಕೀಯ ನಿಲುವುಎರಡು ಪಕ್ಷ ಅಥವಾ ಸಂಘಟನೆ ಇವರಲ್ಲಿ ವೈಚಾರಿಕ ಮತಭೇದ ಇರಬಹುದು ಆದರೆ ಕಾಂಗ್ರೆಸ್ ಎಷ್ಟು ಕೀಳುಮಟ್ಟಕ್ಕೆ ಹೋಗಿ ಹಿಂದುತ್ವನಿಷ್ಠ ಸಂಘಟನೆಯನ್ನು ದ್ವೇಷಿಸುತ್ತಿದೆ ಇದು ಇದರಿಂದ ಸ್ಪಷ್ಟವಾಗುತ್ತಿದೆ, ಇಂತಹ ಪಕ್ಷ ಜನರ ಹಿತವನ್ನು ಹೇಗೆ ಸಾಧಿಸಬಹುದು ? |