ಪಾಕಿಸ್ತಾನದಲ್ಲಿ ನರೆಪೀಡಿತ ೩೦೦ ಮುಸಲ್ಮಾನರಿಗೆ ಹಿಂದೂಗಳು ದೇವಸ್ಥಾನದಲ್ಲಿ ಆಶ್ರಯ ನಿಡಿದರು !

ಕ್ವೆಟಾ (ಪಾಕಿಸ್ತಾನ) – ಕಳೆದ ಕೆಲವು ವಾರಗಳಿಂದ ಪಾಕಿಸ್ತಾನ ನೆರೆಹಾವಳಿಯಿಂದ ತತ್ತರಿಸಿ ಹೋಗಿದೆ. ಸ್ಥಳೀಯ ನಾಗರಿಕರು ಸಹಾಯಕ್ಕಾಗಿ ಕೈಚಾಚುತ್ತಿದ್ದಾರೆ. ಬಲುಚಿಸ್ತಾನ ಪ್ರಾಂತದ ಕಚ್ಛೀ ಜಿಲ್ಲೆಯ ಜಲಾಲ ಖಾನ ಎಂಬ ಗ್ರಾಮದಲ್ಲಿ ೧೦೦ ಕೋಣೆಗಳ ಬಾಬಾ ಮಾಧೋದಾಸ ದೇವಸ್ಥಾನವು ೨೦೦ ರಿಂದ ೩೦೦ ನೆರೆಪೀಡಿತರಿಗೆ ಅನ್ನ, ನೀರು ಮತ್ತು ನಿವಾಸವನ್ನು ನೀಡಿದೆ. ಇದರಲ್ಲಿ ಹೆಚ್ಚಿನವರು ಮುಸಲ್ಮಾನರಾಗಿದ್ದಾರೆ. ಜೊತೆಗೆ ಮೂಕ ಪ್ರಾಣಿಗಳಿಗೂ ಆಶ್ರಯ ನೀಡಿದ್ದಾರೆ. ಬಾಬಾ ಮಾಧೋದಾಸ ಓರ್ವ ಹಿಂದೂ ಸಂತರಾಗಿದ್ದರು. ಅವರ ಮೇಲೆ ಈ ಪರಿಸರದ ಹಿಂದೂ ಮತ್ತು ಮುಸಲ್ಮಾನರಿಗೆ ಶ್ರದ್ಧೆಯಿತ್ತು.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿನ ನರೆಹಾವಳಿಯಲ್ಲಿ ಹಿಂದೂಗಳಿಗೂ ಹಾನಿಯಾಗಿದೆ ಅದರಲ್ಲಿ ಎಷ್ಟು ಹಿಂದೂಗಳಿಗೆ ಮುಸಲ್ಮಾನರು ಅವರ ಮಸೀದಿಯಲ್ಲಿ ಆಶ್ರಯ ನೀಡಿದರು, ಎಂಬುದನ್ನೂ ಕಂಡುಹಿಡಿಯಬೇಕು ! ತದ್ವಿರುದ್ಧ ಕೆಲವು ಮತಾಂಧರು ಧಾನ್ಯವನ್ನು ನೀಡುವ ಆಮಿಷ ತೋರಿಸಿ ಒಂದು ೮ ವರ್ಷದ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲತ್ಕಾರ ಮಾಡಿರುವ ಘಟನೆ ನಡೆದಿದೆ ! ಇದರಿಂದ ಅವರ ನಿಜವಾದ ಮಾನಸಿಕತೆ ಅರಿವಾಗುತ್ತದೆ !