ಗೆಳೆತನ ಮಾಡದಿದ್ದರೆ, ಅಪಹರಿಸುವುದಾಗಿ ಬೆದರಿಕೆ !
ರಾಂಚಿ (ಝಾರಖಂಡ) – ರಾಂಚಿ ಜಿಲ್ಲೆಯ ಓರಮಾಂಝೀಯಲ್ಲಿನ ಶಾಲೆಯ ೯ ನೇ ತರಗತಿಗೆ ಶಸ್ತ್ರಗಳ ಸಹಿತ ನುಗ್ಗಿ ಮುಸಲ್ಮಾನ ಯುವಕರು ಹಿಂದೂ ವಿದ್ಯಾರ್ಥಿನಿಯರಿಗೆ ಚುಡಾಯಿಸುತ್ತಾ ತಮ್ಮೊಂದಿಗೆ ಗೆಳೆತನ ಮಾಡಬೇಕೆಂದು ಒತ್ತಡ ಹೇರಿದರು. ‘ಗೆಳೆತನ ಮಾಡದಿದ್ದರೆ, ನಿಮ್ಮೆಲ್ಲರನ್ನೂ ಅಪಹರಿಸುವೆವು’, ಎಂದು ಬೆದರಿಕೆ ನೀಡಿದರು. ಆಗ ಶಾಲೆಯ ಶಿಕ್ಷಕರು ಮತ್ತು ಪರಿಸರದ ಕೆಲವು ಯುವಕರು ಅವರನ್ನು ತಡೆಯಲು ಪ್ರಯತ್ನಿಸಿದಾಗ ಈ ಮುಸಲ್ಮಾನರು ಅವರನ್ನೂ ‘ನೋಡಿಕೊಳ್ಳುವೆವು’ ಎಂದು ಬೆದರಿಕೆ ಹಾಕಿದರು. ಕಳೆದ ಅನೇಕ ದಿನಗಳಿಂದ ಈ ಯುವಕರು ಈ ವಿದ್ಯಾರ್ಥಿನಿಯರು ಶಾಲೆಗೆ ಹೋಗುತ್ತಿರುವಾಗ ಚುಡಾಯಿಸುತ್ತಿದ್ದರು. ಈ ವಿದ್ಯಾರ್ಥಿನಿಯರು ತಮ್ಮ ಪಾಲಕರಿಗೂ ಈ ವಿಷಯವನ್ನು ಹೇಳಿದ್ದರು. ಈ ವಿಷಯದಲ್ಲಿ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿದೆ.
Jharkhand: Muslim youths brandishing weapons threaten girls to befriend them or else face the consequences: Report https://t.co/CdHDKIfb1Z
— OpIndia.com (@OpIndia_com) September 11, 2022
೧. ಈ ವಿಷಯದಲ್ಲಿ ಶಾಲೆಯ ವಠಾರದಲ್ಲಿ ಬೈಠಕ್ ಆಯೋಜಿಸಲಾಗಿತ್ತು. ಆಗ ಊರಿನವರು ಆರೋಪಿಗಳನ್ನು ಕರೆದು ಇಲ್ಲಿಯೆ ನಿರ್ಣಯ ತೆಗೆದುಕೊಳ್ಳಬೇಕೆಂದು ಹೇಳಿದರು. ಆಗ ಪೊಲೀಸರು ಅಲ್ಲಿಗೆ ತಲಪಿದರು. ಊರಿನವರು ಆರೋಪಿ ಫಿರದೌಸ ಅನ್ಸಾರಿ, ಸುಹೈಲ ಅನ್ಸಾರಿ, ಮುಜಮ್ಮಿಲ ಅನ್ಸಾರಿ, ತೌಫೀಕ ಅನ್ಸಾರಿ ಮತ್ತು ಜಮೀಲ ಅನ್ಸಾರಿ ಇವರ ವಿರುದ್ಧ ಅಪರಾಧವನ್ನು ದಾಖಲಿಸಲು ಪೊಲೀಸರಿಗೆ ಮನವಿ ನೀಡಿದರು. (ಈ ರೀತಿ ಮನವಿಯನ್ನು ಏಕೆ ನೀಡಬೇಕಾಗುತ್ತದೆ ? ಪೊಲೀಸರು ತಾವಾಗಿಯೆ ಅಪರಾಧವನ್ನು ಯಾಕೆ ದಾಖಲಿಸುವುದಿಲ್ಲ? – ಸಂಪಾದಕರು)
೨. ಈ ಶಾಲೆಯ ವಿದ್ಯಾರ್ಥಿಗಳು ಮುಂದಿನಂತೆ ಹೇಳಿದ್ದಾರೆ, ಮಾಯಾಪುರದ ಕೆಲವು ವಿದ್ಯಾರ್ಥಿಗಳು ಇತರ ಊರಿನ ಯುವಕರನ್ನು ಕರೆಸಿ ಶಾಲೆಯ ಪಕ್ಕದಲ್ಲಿ ಸರಾಯಿ ಕುಡಿಯುತ್ತಾ ಇರುತ್ತಾರೆ. ಹಾಗೂ ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ವ್ಯಂಗ್ಯ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಗೋಡೆಯನ್ನು ದಾಟಿ ಶಾಲೆಗೆ ನುಗ್ಗುತ್ತಾರೆ ಮತ್ತು ತಮಾಷೆ ಮಾಡುತ್ತಾರೆ. ವಿರೊಧಿಸಿದಾಗ ಶಿಕ್ಷಕರಿಗೂ ಬೆದರಿಕೆ ಹಾಕುತ್ತಾರೆ. ಇವರಲ್ಲಿನ ಕೆಲವು ಯುವಕರು ಇದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಅವರನ್ನು ಶಾಲೆಯಿಂದ ಹೊರಹಾಕಲಾಗಿದೆ.
ಸಂಪಾದಕೀಯ ನಿಲುವು
|