ಗಢವಾ (ಜಾರ್ಖಂಡ್) ಇಲ್ಲಿ ಮತಾಂಧರಿಂದ ಹಿಂದೂ ಯುವಕನಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದರು !

ಗಢವಾ (ಜಾರ್ಖಂಡ್) – ಇಲ್ಲಿಯ ಬನ್ಸಿಧರ ನಗರದ ದೀಪಕ್ ಸೋನಿ ಈ ಯುವಕನನ್ನು ಅಸ್ಮುದ್ದಿನ್ ಅನ್ಸಾರಿ ಇವನು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಉಂಟಾರಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿನ ಚಿತ್ತವಿಶ್ರಾಮ ಗ್ರಾಮದಲ್ಲಿ ಈ ರೀತಿ ನಡೆದಿದೆ. ಸೋನಿ ಇವನು ಗಂಭೀರವಾಗಿ ಸುಟ್ಟಿದ್ದಾನೆ. ಅವನಿಗೆ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಪೊಲೀಸರು ಅನ್ಸಾರಿಯನ್ನು ಹುಡುಕುತ್ತಿದ್ದಾರೆ.


ಸಂತ್ರಸ್ತ ದೀಪಕ ಸೋನಿ, ‘ನನ್ನ ಮನೆಯ ಹತ್ತಿರ ಅಸ್ಮದ್ದಿನ್ ಅನ್ಸಾರಿ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಜಗಳ ನಡೆಯುತ್ತಿತ್ತು. ಅದರ ನಂತರ ನಾನು ಅವರಲ್ಲಿ ಮಧ್ಯಸ್ಥಿಕೆಯ ಪ್ರಯತ್ನ ಮಾಡಿದೆ. ಆರೋಪಿ ಪೆಟ್ರೋಲ್ ಮಾರಾಟ ಮಾಡುತ್ತಾನೆ. ನಾನು ಅವನಿಗೆ ‘ನೀವು ಏಕೆ ಜಗಳ ಆಡುತ್ತೀರಿ?’, ಎಂದು ಕೇಳಿದೆ ಆಗ ಅವನು ‘ನೀನೇನು ನನ್ನ ಮಾಲೀಕನೇ?’, ಹೀಗೆ ವಿಚಾರಿಸಿ ಬೈಗುಳ ನೀಡಿದನು. ಅದರ ನಂತರ ಬಾಟಲಿಯಲ್ಲಿರುವ ಪೆಟ್ರೋಲ್ ತಂದು ನನ್ನ ಮೇಲೆ ಎರಚಿ ಬೆಂಕಿ ಹಚ್ಚಿದನು’ ಎಂದು ಹೇಳಿದನು.

ಸಂಪಾದಕೀಯ ನಿಲುವು

ಜಾರ್ಖಂಡಿನಲ್ಲಿ ಕೆಲವು ದಿನಗಳ ಮೊದಲು ಒಬ್ಬ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ಸುಟ್ಟು ಕೊಲೆ ಮಾಡಿದ್ದನು. ಈ ಘಟನೆ ತಾಜಾ ಇರುವಾಗಲೇ ಮತ್ತೊಂದು ಈ ರೀತಿಯ ಘಟನೆ ನಡೆದಿದೆ ಎಂದರೆ ಜಾರ್ಖಂಡ್ ಹಿಂದೂಗಳಿಗಾಗಿ ಪಾಕಿಸ್ತಾನ ಆಗಿರುವುದು ಕಂಡು ಬರುತ್ತಿದೆ ! ಇದಕ್ಕೆ ರಾಜ್ಯದಲ್ಲಿರುವ ಜಾರ್ಖಂಡ ಮುಕ್ತಿ ಮೋರ್ಚಾದ ಸರಕಾರ ಜವಾಬ್ದಾರವಾಗಿದೆ !