ಮುಂಬಯಿ – ಬಾಲಿವುಡ್ ನಲ್ಲಿ ಹಿಂದೂ ವಿರೋಧಿ ಮಾನಸಿಕತೆಯಿಂದ ಕಳೆದ ಕೆಲವು ತಿಂಗಳಿಂದ ಪ್ರದರ್ಶಿತವಾಗಿರುವ ಚಲನಚಿತ್ರಗಳಿಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದ್ದರಿಂದ ಅನೇಕ ಚಲನಚಿತ್ರಗಳು ತಮ್ಮ ಗಳಿಕೆಯಲ್ಲಿ ವಿಫಲವಾಗಿದೆ. ಆದರೂ ಕೂಡ ಚಲನಚಿತ್ರಗಳ ಮೂಲಕ ಹಿಂದೂ ದೇವಿ ದೇವತೆಯರ ಅವಮಾನ ಮಾಡುವುದು ನಿಲ್ಲುತ್ತಿಲ್ಲ. ನಟ ಅಜಯ ದೇವಗನ ಇವರ ಮುಂಬರುವ ಚಲನಚಿತ್ರ ‘ಥ್ಯಾಂಕ್ ಗಾಡ್’ನ ಟ್ರೆಲ್ಲರ ಸಪ್ಟೆಂಬರ್ ೯ ರಂದು ಪ್ರದರ್ಶಿಸಲಾಗಿದೆ. ಇದರಲ್ಲಿನ ಒಂದು ಪ್ರಸಂಗದಲ್ಲಿ ಅಜಯ ದೇವಗನ ತನ್ನನ್ನು ‘ಚಿತ್ರಗುಪ್ತ’ನೆಂದು ಹೇಳಿಕೊಂಡಿದ್ದು ಮತ್ತು ಎದುರಿನ ವ್ಯಕ್ತಿಯ ಕರ್ಮದ ಲೆಕ್ಕಾಚಾರದ ವಿಷಯದ ಬಗ್ಗೆ ಮಾತನಾಡುತ್ತಾನೆ. ಇಲ್ಲಿಯವರೆಗೆ ಸರಿ ಇದೆ; ಆದರೆ ಯಾವ ರೀತಿಯಿಂದ ಚಲನಚಿತ್ರದಲ್ಲಿ ಸಂವಾದ ನಡೆಯುತ್ತದೆ, ಅದು ದೇವತೆಯರನ್ನು ಅವಮಾನ ಮಾಡಿರುವ ಹಾಗೆ ಇದೆ. ಅಷ್ಟೇ ಅಲ್ಲದೆ ಅಜಯ್ ದೇವಗನ್ ಸ್ವತಃ ಚಿತ್ರಗುಪ್ತ ಇರುವುದು ಹೇಳುತ್ತಿದ್ದಾರೆ, ಆ ಸಮಯದಲ್ಲಿ ಅರ್ಧನಗ್ನ ಹುಡುಗಿ ಅವರ ಪಕ್ಕದಲ್ಲಿ ನಿಂತಿರುತ್ತಾರೆ.
अब अजय देवगन की Thank God निशाने पर, फिल्म के खिलाफ चला बायकॉट ट्रेंड#AjayDevgn #ThankGod #Entertainment https://t.co/K9CcBACN2b
— Hindustan (@Live_Hindustan) September 10, 2022
೧. ‘ಟಿ ಸೀರೀಸ್’ನ ಬ್ಯಾನರ್‌ನಲ್ಲಿ ಇಂದ್ರ ಕುಮಾರ್, ಅಶೋಕ ಠಾಕರೆ, ಆನಂದ ಪಂಡಿತ, ಮಕರಂದ ಅಧಿಕಾರಿ, ಸುನಿಲ ಖೆತ್ರಪಾಲ ಮುಂತಾದವರು ಈ ಚಲನಚಿತ್ರದ ನಿರ್ಮಾಣ ಮಾಡಿದ್ದಾರೆ. ಈ ಚಲನಚಿತ್ರದ ನಿರ್ದೇಶನ ಇಂದ್ರ ಕುಮಾರ ಇವರು ಮಾಡಿದ್ದಾರೆ. ಆಕಾಶ ಕೌಶಿಕ ಮತ್ತು ಮಧುರ ಶರ್ಮ ಇವರು ಈ ಚಲನಚಿತ್ರವನ್ನು ಬರೆದಿದ್ದಾರೆ. ಈ ಚಲನಚಿತ್ರ ಅಕ್ಟೋಬರ್ ೨೫ ರಂದು ಬಿಡುಗಡೆಯಾಗುವುದು.
೨. ಚಲನಚಿತ್ರದ ಟ್ರೆಲರ್ (ಚಲನಚಿತ್ರ ಪ್ರದರ್ಶನದ ಮೊದಲು ತೋರಿಸಲಾಗುವ ಕೆಲವು ಭಾಗ) ಬಿಡುಗಡೆ ಆಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಟಿಕೆ ಟಿಪ್ಪಣಿ ನಡೆದಿದೆ. ಚಲನಚಿತ್ರದಲ್ಲಿ ದೇವಿ ದೇವತೆಯರನ್ನು ಅವಮಾನಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಜನರು ಚಲನಚಿತ್ರದ ಲೇಖಕರು, ನಿರ್ದೇಶಕರು ಮತ್ತು ನಿರ್ಮಾಪಕರನ್ನು ನಿಷೇಧಿಸಿದ್ದಾರೆ. ಈ ಚಲನಚಿತ್ರ ಸಹಿತ ಬಾಲಿವುಡನನ್ನೆ ನಿಷೇಧಿಸಲು ಕರೆ ನೀಡಲಾಗಿದೆ.
ಸಂಪಾದಕೀಯ ನಿಲುವುಬಾಲಿವುಡ್ ಎಂದರೆ ಹಿಂದೂಗಳ ದೇವಿ ದೇವತೆಯರನ್ನು ಅವಮಾನಿಸುವ ಒಂದು ಮಾಧ್ಯಮವಾಗಿದೆ. ಇಂತಹ ಹಿಂದೂ ವಿರೋಧಿ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನು ಇಲ್ಲ ! |