ಕರ್ಣಾವತಿ (ಗುಜರಾತ) – ಆಮ್ ಆದ್ಮಿ ಪಕ್ಷದ ಗುಜರಾತ ಪ್ರದೇಶಾಧ್ಯಕ್ಷ ಗೋಪಾಲ ಇಟಾಲಿಯಾ ಇವರು ಭಗವಾನ ಶ್ರೀಕೃಷ್ಣನನ್ನು ರಾಕ್ಷಸನೆಂದು ಕರೆದಿದಕ್ಕೆ ಅವರ ಮೇಲೆ ದೂರು ದಾಖಲಿಸಲಾಗಿದೆ. ದ್ವಾರಕೆಯಲ್ಲಿ ಒಂದು ಸಭೆಯಲ್ಲಿ ಭಾಷಣ ಮಾಡುವಾಗ ಅವರು ‘ಈಗ ಭಗವಾನ ಶ್ರೀಕೃಷ್ಣ ಮತ್ತು ಭಾಜಪ ಈ ರಾಕ್ಷಸರಿಂದ ಎಲ್ಲರನ್ನು ಮುಕ್ತಗೊಳಿಸಲು ಅರವಿಂದ ಕೇಜರಿವಾಲರು ಅರ್ಜುನನ ರೂಪದಲ್ಲಿ ಬಂದಿದ್ದಾರೆ’, ಎಂದು ಹೇಳಿದ್ದರು. ಅಹೀರ ಸಮಾಜದ ಸದಸ್ಯ ಅಮಿತಭಾಯಿ ಡಾಂಗರ ಇವರು ತಕರಾರು ಮಾಡಿದ ಬಳಿಕ ದೂರನ್ನು ದಾಖಲಿಸಲಾಗಿದೆ. ಇಟಾಲಿಯಾ ಈ ಹಿಂದೆಯೂ ೨೦೨೧ ರಲ್ಲಿ ಶ್ರೀ ಸತ್ಯನಾರಾಯಣ ಕಥೆ ಮತ್ತು ಶ್ರೀಮದ್ಭಾಗವತ ವಿಷಯದಲ್ಲಿಯೂ ಕೆಟ್ಟ ಶಬ್ದಗಳನ್ನು ಉಪಯೋಗಿಸಿದ್ದರು.
Gopal Italia insults Shri Krishna and compares him with demons, FIR against him for hurting religious sentiments https://t.co/0dRkhtgJKC
— OpIndia.com (@OpIndia_com) September 5, 2022
ಈ ಪ್ರಕರಣದಲ್ಲಿ ಭಗವಾನ ಶ್ರೀಕೃಷ್ಣನ ಮೇಲೆ ಶ್ರದ್ಧೆಯಿರುವ ಮಾಲಧಾರಿ ಸಮಾಜದ ಮುಖಂಡ ಖಿಲನ ರಬಾರಿಯವರು, ಮಾಲಧಾರಿ ಸಮಾಜ ಭಗವಾನ ಶ್ರೀಕೃಷ್ಣನ ಅಪಮಾನವನ್ನು ಸಹಿಸುವುದಿಲ್ಲ. ಎಲ್ಲಿಯವರೆಗೆ ಇಟಾಲಿಯಾ ದ್ವಾರಕೆಯ ಗೋಮತಿ ನದಿಯ ದಡದಲ್ಲಿ ಹೋಗಿ ಭಗವಾನ ಶ್ರೀಕೃಷ್ಣನ ಕ್ಷಮೆ ಕೋರುವುದಿಲ್ಲವೋ ಅಲ್ಲಿಯವರೆಗೆ ಮಾಲಧಾರಿ ಸಮಾಜ ಅವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಯಾರಿಗೆ ‘ಭಗವಂತ ಯಾರು ಮತ್ತು ರಾಕ್ಷಸ ಯಾರು?’, ಎಂದೇ ತಿಳಿದಿಲ್ಲವೋ ಅವರು ಸಮಾಜಕ್ಕೆ ಏನು ಮಾರ್ಗದರ್ಶನ ಮಾಡುವರು ? ಇಂತಹ ಆಸುರಿ ಮಾನಸಿಕತೆಯ ರಾಜಕಾರಣಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ! ದೇಶದಲ್ಲಿ ನಿರಂತರವಾಗಿ ವಿವಿಧ ಮಾಧ್ಯಮದಿಂದ ಆಗುತ್ತಿರುವ ಹಿಂದೂ ದೇವತೆಗಳ ಅಪಮಾನವನ್ನು ತಡೆಯಲು ಕಠಿಣ ಕಾನೂನು ರಚಿಸುವ ಆವಶ್ಯಕತೆ ! |