ಕಾಬುಲ (ಅಫ್ಘಾನಿಸ್ತಾನ)ನಲ್ಲಿ ರಶಿಯಾದ ರಾಯಭಾರ ಕಚೇರಿಯ ಎದುರಿಗೆ ನಡೆದ ಬಾಂಬ್ ಸ್ಫೋಟದಲ್ಲಿ ೨೦ ಜನರ ದುರ್ಮರಣ

ಕಾಬುಲ (ಅಫ್ಘಾನಿಸ್ತಾನ) – ಇಲ್ಲಿ ಸಪ್ಟೆಂಬ ೫ ರಂದು ರಷ್ಯಾದ ರಾಯಭಾರ ಕಚೇರಿಯ ಎದುರಿಗೆ ನಡೆದ ಆತ್ಮಾಹುತಿ ದಾಳಿಯಲ್ಲಿ ೨೦ ಕ್ಕಿಂತ ಅಧಿಕ ಜನರು ಮರಣ ಹೊಂದಿದರು. ಮೃತಪಟ್ಟವರಲ್ಲಿ ಇಬ್ಬರು ರಾಯಭಾರಿ ಕಚೇರಿಯ ಅಧಿಕಾರಿಗಳು ಸೇರಿದ್ದಾರೆ. ಜಿಹಾದಿ ಭಯೋತ್ಪಾದಕರು ತಮ್ಮ ಮೇಲೆ ಆತ್ಮಾಹುತಿ ದಾಳಿ ನಡೆಸಿ ಇಲ್ಲಿ ಸ್ಫೋಟ ನಡೆಸಿದರು. ಪ್ರಾಥಮಿಕ ಮಾಹಿತಿಯನುಸಾರ ಭಯೋತ್ಪಾದಕರು ತಮ್ಮ ಗುರಿಯನ್ನು ತಲುಪುವ ಮೊದಲೇ ರಾಯಭಾರ ಕಚೇರಿಯ ಹೊರಗಿನ ಭದ್ರತಾ ಅಧಿಕಾರಿಗಳು ಅವರ ಮೇಲೆ ಗುಂಡು ಹಾರಿಸಿದರು. ಆದರೆ ಅದಕ್ಕಿಂತ ಮೊದಲೇ ಅವರು ಸ್ಫೋಟಿಸಿದರು. ಈ ಹಿಂದೆಯೂ ೨೦೧೬ ರಲ್ಲಿ ಈ ರಾಯಭಾರ ಕಚೇರಿಯ ಹೊರಗೆ ಸ್ಫೋಟವಾಗಿತ್ತು. ಆಗ ೧೨ ಜನರು ಸಾವನ್ನಪ್ಪಿದ್ದರು ಮತ್ತು ೨೦ ಜನರು ಗಾಯಗೊಂಡಿದ್ದರು.