ಈ ಸಮಸ್ಯೆಯನ್ನು ಪರಿಹರಿಸಲು ಭಾರತವು ಸಹಾಯ ಮಾಡಬಹುದೆಂದು ಶೇಖ್ ಹಸೀನಾ ಆಶಿಸಿದ್ದಾರೆ !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ೧ ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರಿದ್ದಾರೆ. ಇದು ನಮಗೆ ದೊಡ್ಡ ಹೊರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಭಾರತ ದೊಡ್ಡ ದೇಶವಾಗಿದೆ, ನೀವು ಅವರಿಗೆ ಅವಕಾಶ ಕಲ್ಪಿಸಬಹುದು. (ರೋಹಿಂಗ್ಯಾಗಳಿಗೆ ಭಾರತದಲ್ಲಿ ಸೇರಿಸಿಕೊಳ್ಳಲು ಇದು ಧರ್ಮಶಾಲೆ ಆಗಿದೆಯೇ ? – ಸಂಪಾದಕ) ನಾವು ನಿಮ್ಮ ಬಗ್ಗೆ ಮಾತನಾಡುತ್ತಿಲ್ಲ. ಅಂತರರಾಷ್ಟ್ರೀಯ ಸಮುದಾಯ ಮತ್ತು ನೆರೆಯ ರಾಷ್ಟ್ರಗಳೊಂದಿಗೆ ಮಾತನಾಡಿ ರೋಹಿಂಗ್ಯಾ ಮುಸ್ಲಿಮರು ತಮ್ಮ ದೇಶಕ್ಕೆ ಮರಳಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಅವರು ನಾಳೆ ಸೆಪ್ಟೆಂಬರ್ ೫ ರಂದು ೪ ದಿನಗಳ ಭಾರತ ಪ್ರವಾಸಕ್ಕೆ ಬರುತ್ತಿದ್ದಾರೆ.
‘Rohingyas big burden on country’, says Bangladesh PM Sheikh Hasina, seeks India’s help to send them back to Myanmar https://t.co/7NfDN9VYX8
— OpIndia.com (@OpIndia_com) September 4, 2022
ಭಾರತ ಬಾಂಗ್ಲಾದೇಶದ ‘ಪರೀಕ್ಷಿತ ಸ್ನೇಹಿತ’
(ಕಷ್ಟದ ಸಮಯದಲ್ಲಿ ಸ್ನೇಹವನ್ನು ಉಳಿಸಿಕೊಳ್ಳುವವರನ್ನು ‘ಪರೀಕ್ಷಿತ ಮಿತ್ರ’ ಎಂದು ಕರೆಯಲಾಗುತ್ತದೆ.)
ಶೇಖ್ ಹಸೀನಾ ಭಾರತವನ್ನು ಬಾಂಗ್ಲಾದೇಶದ ‘ಪರೀಕ್ಷಿತ ಸ್ನೇಹಿತ’ ಎಂದು ಕರೆದರು. ಅವರು, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಸಮಯದಲ್ಲಿ ನಮ್ಮ ಅನೇಕ ವಿದ್ಯಾರ್ಥಿಗಳು ಪೂರ್ವ ಯುರೋಪಿನಲ್ಲಿ ಸಿಲುಕಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಿಂದಾಗಿ ಅವರನ್ನು ಭಾರತಕ್ಕೆ ಕರೆತರಲಾಯಿತು.
ಸಂಪಾದಕೀಯ ನಿಲುವು
|